ದಲಿತರಿಗೆ ಮೀಸಲಿಟ್ಟ ಹಣ ಮುಸ್ಲಿಮರಿಗೆ ಹಂಚಲಾಗುತ್ತಿದೆ; ಸಿದ್ಧಲಿಂಗ ಸ್ವಾಮೀಜಿ ಆರೋಪ

0
23

ಕಲಬುರಗಿ: ಇತ್ತೀಚೆಗೆ ಕೋಲಾರದ ಕ್ಲಾಕ್‍ಟವರ್ ಮೇಲೆ ಹಸಿರು ಬಣ್ಣ ಬರೆದುಖಡ್ಗ ಸ್ಥಾಪನೆ ಮಾಡಲಾಯಿತು. ಅದರಂತೆ ಶಿವಮೊಗ್ಗದಲ್ಲಿಯೂ ದೊಡ್ಡ ಖಡ್ಗದ ಮಾದರಿ ಮೆರವಣಿಗೆ ಮಾಡಿದರು. ಆದರೆ, ಅದಕ್ಕೆಅನುಮತಿ ನೀಡಿದವರು ಯಾರು? ಹಿಂದೂಗಳ ಹಬ್ಬಕ್ಕೆ ನೂರಾರು ಷರತ್ತುಗಳನ್ನು ವಿಧಿಸುವ ಸರಕಾರ ಇದಕ್ಕೆಅನುಮತಿ ನೀಡಿದ್ದು ಹೇಗೆ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಆಂದೋಲಾಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಪ್ರಶ್ನಿಸಿದರು.

ಈ ದುಷ್ಕøತ್ಯಗಳಿಗೆ ಸಂಪೂರ್ಣ ಪಾಕಿಸ್ತಾನ ಹಾಗೂ ಪಿಎಫ್‍ಐಕೈವಾಡ ಹಾಗೂ ನಮ್ಮ ಸರಕಾರಕುಮ್ಮಕ್ಕುಇದೆಎಂದುಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

Contact Your\'s Advertisement; 9902492681

ರಾಜ್ಯದಲ್ಲಿದಲಿತರಿಗೆ ಮೀಸಲಿಟ್ಟ ಹಣವನ್ನು ಮುಸ್ಲಿಮರಿಗೆ ಹಂಚಲಾಗುತ್ತಿದೆ. ಶಾದಿ ಭಾಗ್ಯಎಂದು ಹಣ ನೀಡಿದರು, ಮುಂದೆ ಅಕ್ಕಿ ನೀಡುವ ಮೂಲಕ ಒಂದು ಸಮುದಾಯ ಓಲೈಕೆ ಕೆಲಸ ಮಾಡುತ್ತಿದ್ದಾರೆ.ಈಗಾಗಲೇ ಹುಬ್ಬಳ್ಳಿಯಲ್ಲಿ ನಡೆದಘಟನೆ ಬಗ್ಗೆ ಕೇಸ್ ವಾಪಸ್ ಪಡೆಯುವಂತೆ ಉಪ ಮುಖ್ಯಮಂತ್ರಿ ಹೇಳುತ್ತಾರೆ.ಇಂತಹ ನಡೆಗಳಿಂದ ಸರಕಾರ ನಮ್ಮ ಪರಇದೆ, ನಾವೇನೂ ಮಾಡಿದರೂ ನಡೆಯುತ್ತೆಎಂದು ಹಿಂದೂಗಳ ಮನೆ ಮೇಲೆ ದಾಳಿ ನಡೆಸಲಾಗುತ್ತಿದೆ.ಎಂದುಆಕ್ರೋಶ ವ್ಯಕ್ತಪಡಿಸಿದರು.

ಇಂತಹದುಷ್ಟಆತಂಕವಾದಿಗಳನ್ನು ಮಟ್ಟ ಹಾಕಲು ದೇಶದ್ರೋಹಿಗಳಿಗೆ ಕಠಿಣ ಸಂದೇಶ ನೀಡಲು ಸಂಘಟನೆ ವತಿಯಿಂದಗಂಭೀರಚಿಂತನೆ ನಡೆಯುತ್ತಿದೆ.ರಾಜ್ಯದಲ್ಲಿಕಾವೇರಿ ವಿಚಾರ ದಿನದಿಂದ ದಿನಕ್ಕೆ ಹೋರಾಟದ ಕಿಚ್ಚು ಪಡೆಯುತ್ತಿದೆ. ಅದರಕಡೆ ಗಮನ ಕಡಿಮೆಯಾಗಬೇಕೆಂದು ಗಲಭೆಗಳು ನಡೆಯುತ್ತಿವೆ. ಇಂತಹವುಗಳಿಗೆ ರಾಜ್ಯ ಸರಕಾರ ಬೆಂಬಲ ನೀಡುತ್ತಿರುವುದುದುರಾದೃಷ್ಟಕರಎಂದುಅವರು ವಿಷಾದ ವ್ಯಕ್ತಪಡಿಸಿದರು.

ಮಹೇಶ ಗೊಬ್ಬುರು, ಅಂಬಾರಾಯ ಕಂಬಾ, ಬಸವರಾಜ ಶೀಲವಂತ, ಮಲ್ಲಿಕಾರ್ಜುನಅಷ್ಟಗಿ, ಪರಮೇಶ್ವರ ಮೂಲಗೆ ಇದ್ದರು.

ರಾಜ್ಯದಲ್ಲಿ ಏನೇ ಘಟನೆ ನಡೆದರೂ ಪ್ರತಿಕ್ರಿಯೆಕೊಡುತ್ತಿದ್ದ, ಗಲಾಟೆ ಮಾಡಿದರೆ ಸಂವಿಧಾನದ ಶಕ್ತಿ ತೋರಿಸುತ್ತೇನೆಎಂದು ಹೇಳುತ್ತಿದ್ದ ಕಲಬುರಗಿಜಿಲ್ಲಾಉಸ್ತುವಾರಿ ಸಚಿವ ಪ್ರಿಯಾಂಕ್‍ಖರ್ಗೆಎಲ್ಲಿದ್ದಾರೆ ? ಘಟನೆ ನಡೆದುಐದು ದಿನವಾದರೂ ಮಾತನಾಡದಿರುವುದು, ವೌನಂ ಸಮ್ಮತಿ ಲಕ್ಷಣಂಎಂಬುದು ಹೇಳುತ್ತದಯೇ?. – ಸಿದ್ಧಲಿಂಗ ಸ್ವಾಮೀಜಿ, ಕರುಣೇಶ್ವರ ಮಠ, ಆಂದೋಲಾ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here