ಕೇಂದ್ರ ಕಾರಾಗೃಹದಲ್ಲಿ ತಂಬಾಕು ವ್ಯಸನಿ ಮುಕ್ತ ಜಾಗೃತಿ, ಮಾನಸಿಕ ಆರೋಗ್ಯ ಅರಿವು

0
23

ಕಲಬುರಗಿ; ಕೇಂದ್ರ ಕಾರಾಗೃಹ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಕಲಬುರಗಿ ಇವರಿಂದ ವಿಶ್ವ ತಂಬಾಕು ಮುಕ್ತ ಜಾಗೃತಿ ಅರಿವು ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ ಕಲಬುರಗಿ ವತಿಯಿಂದ ಮಾನಸಿಕ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಮಕ್ಕೆ ಮುಖ್ಯ ಅತಿಥಿ ಹಾಗೂ ಉಪನ್ಯಾಸಕರಾಗಿ ಆಗಮಿಸಿದ ಡಾ. ಮಹ್ಮದ್ ಇರ್ಫಾನ್, ಮಾನಸಿಕ ತಜ್ಞರು, ಜಿಮ್ಸ್ ಆಸ್ಪತ್ರೆ. ಕಲಬುರಗಿರವರು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಾ, ಗೋಡೆಯ ಮೇಲೆ ಸ್ಕ್ರೀನ್ ಮೂಲಕ ಚಿತ್ರಗಳನ್ನು ತೋರಿಸುವ ಮೂಲಕ ಜನರಲ್ಲಿ ಸಾಮನ್ಯವಾಗಿ ಕಂಡು ಬರುವ ಮಾನಸಿಕ ಖಾಯಿಲೆಗಳ ಲಕ್ಷಣಗಳೇಂದರೆ ನಿದ್ರಾ ಹೀನತೆ, ಜೀವನದಲ್ಲಿ ಜಿಗುಪ್ಸೆ, ನಿರಾಸಕ್ತಿ, ಹಸಿವು ಕಡಿಮೆ, ಅತೀ ಬೇಜಾರು, ವಿನಾಕಾರಣ ಭಯ ಪಡುವುದು, ಲೈಂಗಿಕ ಸಮಸ್ಯೆ ಹಾಗೂ ಅತ್ಯಂತ ಗಂಭೀರ ಸ್ವರೂಪದ ಲಕ್ಷಣಗಳಾದ ಅತೀ ಸಂಶಯ, ಆತ್ಮ ಹತ್ಯೆ ಆಲೋಚನೆ, ಮೈಮೇಲೆ ದೇವರು, ದೆವ್ವ ಬಂದಂತೆ ಆಡುವುದು, ವಿಚಿತ್ರ ವರ್ತನೆ, ಬೇರೆಯವರಿಗೆ ಕಾಣಿಸದ, ಕೇಳಿಸದ, ದೃಶ್ಯ ದ್ವನಿಗಳು ಕಾಣಿಸುವುದು, ಕೇಳಿಸುವುದು ಮುಂತಾದ ಲಕ್ಷಣಗಳನ್ನು ಮಾನಸಿಕ ವ್ಯಕ್ತಿಗಳಲ್ಲಿ ಕಾಣಬಹುದು. ಪ್ರತಿ ನೂರು ಜನ ಮಾನಸಿಕ ರೋಗಿಗಳಲ್ಲಿ ಕೇವಲ 15 ಜನ ಮಾತ್ರ ಚಿಕಿತ್ಸೆ ಪಡೆಯುತ್ತಾರೆ. ಇನ್ನುಳಿದ ಜನ ಹಲವಾರು ಕಾರಣಗಳಿಂದ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ.ಇದಕ್ಕೆ ಕಾರಣಗಳು ಖಾಯಿಲೆ ಅರಿವು ಇರದೇ ಇರುವುದು, ತಪ್ಪು ನಂಬಿಕೆ, ಸಾಮಾಜಿಕ ಕಳಂಕ, ಚಿಕಿತ್ಸೆ ಕುರಿತು ತಪ್ಪು ಕಲ್ಪನೆಗಳಿಂದ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ಆಪ್ತ ಸಮಾಲೋಚನೆ ,ಮಾತ್ರೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ಬೆಂಬಲ ನೀಡುವುದು ಎಂದು ಹೇಳಿದರು.

Contact Your\'s Advertisement; 9902492681

ಇನ್ನೋರ್ವ ಅತಿಥಿಗಳಾಗಿ ಆರೋಗ್ಯ ಇಲಾಖೆ ವತಿಯಿಂದ ಆಗಮಿಸಿದ ತಂಬಾಕು ಸಾಮಾಜಿಕ ಕಾರ್ಯಕರ್ತರಾದ ಕು. ಆರತಿರವರು ಮಾತನಾಡುತ್ತಾ, ತಂಬಾಕು ಸೇವೆನೆಯಿಂದ ನೀವು ಬೀಡಿ ಸಿಗರೇಟ್‍ನಿಂದ ಬಿಡುವ ಹೊಗೆ ನಿಮ್ಮ ಶರೀರದ ಒಳಗಡೆ ಅಲ್ಲದೇ ನಿಮ್ಮ ಪಕ್ಕದಲ್ಲಿರುವ ಇತರೇ ಜನರಿಗೆ ಗಾಳಿಯ ಮೂಲಕ ನೇರವಾಗಿ ತಂಬಾಕು ಸೇವೆನೆಯ ಹೊಗೆಯನ್ನು ಅವರು ಪಡೆದು ಅನಾರೋಗ್ಯಕ್ಕೆ ತುತ್ತಾಗಿ ಹಲವಾರು ರೋಗಗಳಿಗೆ ಕಾರಣಿಭೂತರಾಗುತ್ತೀರಿ (ಉದಾ: ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸ ಕೋಶದ ಕಾಯಿಲೆಗಳು, ತಂಬಾಕು ಸೇವನೆಯೇ ಪ್ರಮುಖ ಕಾರಣಾವಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾರಾಗೃಹದ ಮುಖ್ಯಸ್ಥರಾದ ಡಾ. ಪಿ. ರಂಗನಾಥ್, ಮುಖ್ಯ ಅಧೀಕ್ಷಕರು ಕೇಂದ್ರ ಕಾರಾಗೃಹ ಕಲಬುರಗಿ ರವರು ಮಾತನಾಡುತ್ತಾ, ವಿವಿಧ ರೀತಿಯ ತಂಬಾಕು ಸೇವೆನೆ ಮಾಡುವುದರಿಂದ ಚಟಕ್ಕೆ ಬಿದ್ದು, ವ್ಯಸನಿಗಳಾಗಿ ದೈಹಿಕ ಮತ್ತು ಮಾನಸಿಕ ದುರ್ಬಲರಾಗಿ ಆಗುವುದರ ಜೊತೆಗೆ ಅರ್ಥಿಕವಾಗಿ ನಷ್ಟ ಹೊಂದಿ ಕುಟುಂಬ ನಿರ್ವಹಣೆ ಮಾಡುವುದು ಕೂಡ ದುಸ್ತರವಾಗುತ್ತದೆ ಮತ್ತು ತಂಬಾಕು ಸೇವನೆಗಳನ್ನು ನೀವು ದೂರ ಮಾಡಲು ಕಾರಾಗೃಹದಲ್ಲಿರುವ ವೃತ್ತಿಪರ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ವ್ಯಸನಿಗಳಿಂದ ಮುಕ್ತಿಪಡೆದು ಒಳ್ಳೆಯ ಮತ್ತು ಸದೃಡ ಆರೋಗ್ಯವನ್ನು ಪಡೆದು ಒಳ್ಳೆಯ ಜೀವನವನ್ನು ನಡೆಸಲು ಸಲಹೆ ನೀಡಿದರು ಹಾಗೂ ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳನ್ನು ಕಾರಾಗೃಹದ ಬಂದಿಗಳಿಗೆ ನೀಡಲಾಗುತ್ತಿದೆ. ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಆಗಮಿಸಿದ ಆರೋಗ್ಯ ಮತ್ತು ಮಾನಸಿಕ ಇಲಾಖೆಯ ವೈದ್ಯರು ಹಾಗೂ ವೈದ್ಯಕೀಯ ತಂಡದವರಿಗೆ ಅಭಿನಂದನೆಗಳನ್ನು ತಿಳಿಸಿದರು.

ಪ್ರಾಸ್ತಾವಿಕವಾಗಿ ಭೀಮಾಶಂಕರ ಡಾಂಗೆ, ಸಹಾಯಕ ಆಡಳಿತಾಧಿಕಾರಿಗಳು, ಕಲಬುರಗಿ ಇವರು ಮಾತನಾಡುತ್ತಾ, ಪ್ರತಿಯೊಬ್ಬರು ಉತ್ತಮ ಆರೋಗ್ಯವನ್ನು ಹೊಂದಬೇಕಾದರೆ, ಮಾನಸಿಕವಾಗಿ ಸದೃಡರಾಗಬೇಕು ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುವ ತಂಬಾಕು ಸೇವನೆಯಿಂದ ದೂರವಿರಬೇಕು.ಸಹವಾಸದಿಂದ ಸನ್ಯಾಸಿ ಕೆಟ್ಟ, ಹಾಗಾಗಿ ಉತ್ತಮರ ಸಂಗ ಮಾಡಬೇಕು ಅಂದರೆ ಸಜ್ಜನರ ಸಂಗ ಹೆಜ್ಜೆನು ಸವಿದಂತೆ, ಒಳ್ಳೆಯವರ ಆಚಾರ ವಿಚಾರಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು ಮಾನಸಿಕ ಒಳಗೊಂಡಂತೆ ಉತ್ತಮ ಆರೋಗ್ಯವನ್ನು ಪಡೆಯಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕಾರಾಗೃಹದ ಅಧೀಕ್ಷಕರಾದ ಬಿ.ಎಂ ಕೊಟ್ರೇಶ್ ಹಾಗೂ ಸಹಾಯಕ ಅಧೀಕ್ಷಕರಾದ ಹುಸೇನಿ ಪೀರ್, ಕ್ಲೀನಿಕಲ್ ಸೈಕಾಲಿಜಿಸ್ಟ್‍ರಾದ ಸಂತೋಷಿ ಗುಳೆ, ಡಾ. ಆನಂದ ಅಡಕಿ, ಸಾಗರ್ ಪಾಟೀಲ, ಜೈಲರ್ ಹಾಗೂ ಆರೋಗ್ಯ ಮತ್ತು ಮಾನಸಿಕ ತಂಡದವರು ಭಾಗವಹಿಸಿದರು.

ಸ್ವಾಗತ ಮತ್ತು ನಿರೂಪಣೆಯನ್ನು ನಾಗರಾಜ ಮುಲಗೆ ಶಿಕ್ಷಕರು ಕೇಂದ್ರ ಕಾರಾಗೃಹ ಕಲಬುರಗಿ ರವರು ನೇರವೆರಿಸಿದರು. ಪ್ರಾರ್ಥನಾ ಗೀತೆಯನ್ನು ಕಾರಾಗೃಹದ ಬಂದಿಯಾದ ವಿಜಯ್ ಮೊಹನ್ ಸಿಂಗ್ ಇವರು ಹಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here