ಮಕ್ಕಳು ಸದೃಢ ಆರೋಗ್ಯಕ್ಕಾಗಿ ತಪ್ಪದೆ ಲಸಿಕೆ ಹಾಕಿ

0
17

ಕಲಬುರಗಿ; ನಗರದ  ಪ್ರಾಥಮಿಕ ಆರೋಗ್ಯ ಕೇಂದ್ರ ಹೀರಾಪುರ ಆಸ್ಪತ್ರೆ ಪ್ರಾಂಗಣದಲ್ಲಿ  ಪರಿಣಾಮಕಾರಿ ಮಿಷನ್ ಇಂದ್ರಧನುಷ 5.0 ಅಭಿಯಾನ ಮೂರನೇ ಸುತ್ತಿನ ಕಾರ್ಯಕ್ರಮ ಹಾಗೂ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ರಾಜಶೇಖರ ಮಾಲಿ ಅವರು ಸಸಿಗೆ ನೀರೇರುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಬಾಲ್ಯದಲ್ಲಿ ಕಾಡುವ 12 ಮಾರಕ ರೋಗಗಳನ್ನು ತಡೆಗಟ್ಟಲು ವಯಸ್ಸಿನ ಅನುಸಾರ ಮಕ್ಕಳಿಗೆ ನೀಡುವ ಎಲ್ಲಾ ಲಸಿಕೆಗಳು ತಪ್ಪದೆ ಹಾಕಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ ಹೇಳಿದರು.

ನಗರದ ಹೀರಾಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಡಳಿತ , ಜಿಲ್ಲಾ ಪಂಚಾಯತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆರ್ ಸಿ ಹೆಚ್ ಓ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಸ್ತುತ ಆರೋಗ್ಯ  9 ರಿಂದ 12ರ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ವಂಚಿತವಾದ ಲಸಿಕೆ ತಪ್ಪಿದ, ಬಿಟ್ಟು ಹೋದ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದ್ದು. ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿ ಎಂದು ವಿನಂತಿಸಿದರು, ತಾಯಂದಿರು ತಮ್ಮ ಮಕ್ಕಳಿಗೆ ಹುಟ್ಟಿನಿಂದ ಐದು ವರ್ಷದಲ್ಲಿ ಏಳು ಬಾರಿ ಮಕ್ಕಳಿಗೆ ಲಸಿಕೆ ಹಾಕಿಸಲು ಆಸ್ಪತ್ರೆ ಬರುವುದನ್ನು ಮರೆಯಬೇಡಿ ಎಂದರು.

Contact Your\'s Advertisement; 9902492681

ಮುಖ್ಯವಾಗಿ 12 ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಯನ್ನು ಮಗುವಿನ ಒಂದು ವರ್ಷದೊಳಗೆ ಹಾಕಲಾಗುವುದು. ಎಂದು ತಿಳಿಸಿದ್ದರು, ಅವರು ಕೆಲವು ರೋಗಗಳಿಗೆ ಪೋಲಿಯೋ ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ದಡಾರ- ರುಬೆಲ್ಲಾ, ಮೆದುಳು ಜ್ವರ, 16ರಿಂದ 23 ತಿಂಗಳ ಒಳಗೆ ಹೆಚ್ಚುವರಿಯಾಗಿ ಬೂಸ್ಟರ್ ಡೋಸ್ ರೂಪದಲ್ಲಿ ನೀಡಲಾಗುವುದು, 5ರಿಂದ 6 ವರ್ಷದಲ್ಲಿ  ಪುನ: ಗಂಟಲುಮಾರಿ , ನಾಯಿ ಕೆಮ್ಮು , ಧನುರ್ವಾಯು, ರೋಗಗಳಿಗೆ ಎರಡನೇ ಬಾರಿ ಬೂಸ್ಟರ್, ಡೋಸ್ ನೀಡಲಾಗುತ್ತದೆ ಎಂದರು.

ಇದೆ ಸಂಧರ್ಭದಲ್ಲಿ ಎಸ್ ಎಂ ಓ, ಡಬ್ಲ್ಯೂ ಹೆಚ್ ಓ ಡಾ. ಅನಿಲಕುಮಾರ ತಾಳಿಕೋಟಿ, ಇದ್ದರು ಹಾಗೆ ಜಿಲ್ಲಾ  ಆರ್ ಸಿ‌ ಹೆಚ್ಅ ಧಿಕಾರಿಗಳು ಡಾ. ಶರಣಬಸಪ್ಪ ಕ್ಯಾತನಾಳ. ಅವರು ಮಾತನಾಡುತ್ತಾ ಈ ಮಿಷನ್ ಇಂದ್ರಧನುಷ 5.0 ನ್ನು ಕರೋನಾ ವೈರಸ್ ದಿಂದ ಎರಡು ವರ್ಷಗಳ ಹಿಂದೆ ದೇಶದಂತ್ಯ ಕರೋನ ದಿಂದ ಲಸಿಕೆ ಹಾಕದ ವಂಚಿತರಾದ ಮಕ್ಕಳಿಗೆ ಹುಡಕಿ ತಪ್ಪದೆ ಅಂತಹಾ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ ಇದೆ ಸಂಧರ್ಭದಲ್ಲಿ ಎಂದು ಹೇಳಿದರು.

ವೇದಿಕೆ ಮೇಲೆ ಪ್ರಮುಖರಾದ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ. ರವಿಕಾಂತಿ ಕ್ಯಾತನಾಳ. ಹೀರಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅನಿತಾ ಜಾಧವ್,  ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿರೇಶ ಜವಳಗೇರ , ಜಿಲ್ಲಾ ಕಾರ್ಯಕ್ರಮ   ( ವಿ ಎಚ್ ಎಸ್ ಎನ್ ಸಿ ) ಸಂಯೋಜಕ ರವೀಂದ್ರ ಠಾಕೂರ್. ನಗರ ಕಾರ್ಯಕ್ರಮ ವ್ಯವಸ್ಥಾಪಕ ಶ್ರೀಕಾಂತ್ ಸ್ವಾಮಿ.  ಜಿಲ್ಲಾ ಮೌಲ್ಯಮಾಪನ ವ್ಯವಸ್ಥಾಪಕ ವಿಶ್ವನಾಥ ಸಣ್ಣೂರ, ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕ ಜನಾನಂದ ಪಾಟೀಲ್ . ಜಿಲ್ಲಾ ಆರ್ ಕೆ ಎಸ್ ಕೆ ಸಂಯೋಜಕ ಶಿವಕುಮಾರ್ ಕಾಂಬಳೆ, ಅರ್ ಕೆ ಎಸ್ ಕೆ ಸಮಾಲೋಚಕ ಅಲ್ಲಮಪ್ರಭು ,  ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು, ಹೀರಾಪುರದ ಗ್ರಾಮಸ್ಥರು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here