ಕಲಬುರಗಿ: ಮಾದನಹಿಪ್ಪರಗಾ- ಹಡಲಗಿ ಹಳ್ಳದಲ್ಲಿ ಬೈಕ್ ಸವಾರ ನೀರು ಪಾಲು?

0
181

ಕಲಬುರಗಿ: ಕೊಡ ಮಾರುವ ವ್ಶಕ್ತಿ ತುಂಬಿ ಹರಿಯುವ ಹಳ್ಳದಲ್ಲಿ ಬೈಕ್ ಓಡಿಸಿಕೊಂಡು ಹೋಗುವ ದುಸ್ಸಾಹಸ ಮಾಡಿದ್ದುˌ ಹಳ್ಳ ದಾಟಲಾಗದೆ ನೀರುಪಾಲಾದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ, ಹಡಲಗಿ ಮಧ್ಯೆವಿರುವ ಹಳ್ಳದಲ್ಲಿ ಶುಕ್ರವಾರ ನಡೆದಿದೆ.

ಕೊಡಗಳನ್ನು ಬೈಕ್ ಗೆ ಕಟ್ಟಿಕೊಂಡು ಮಾರಾಟ ಮಾಡಲು ಗ್ರಾಮದಿಂದ ಗ್ರಾಮಕ್ಕೆ ತೆರಳುತ್ತಿದ್ದ. ಕೊಡ ಮಾರಿಕೊಂಡು ಮರಳಿ ಗ್ರಾಮಕ್ಕೆ ಬರುವಾಗ ಮಾದನಹಿಪ್ಪರಗಾ- ಹಡಲಗಿ ನಡುವೆ ಹಳ್ಳ ತುಂಬಿ ಹರಿಯುತ್ತಿತ್ತು. ಇದನ್ನು ಲೆಕ್ಕಿಸದೇ ಬೈಕ್ ಸವಾರ ಹಳ್ಳದಲ್ಲಿ ಬೈಕ್ ದಾಟಿಸಲು ಹೋಗಿ ಈ ಘಟನೆ ಸಂಭವಿಸಿದೆ.

Contact Your\'s Advertisement; 9902492681

ಬೈಕ್ ಮತ್ತು ಸವಾರ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ನೋಡಿದ ಸ್ಥಳಿಯರು ವಿಡಿಯೋ ಮಾಡಿಕೊಂಡಿದ್ದಾರೆ. ನೀರಿನಲ್ಲಿ ಕೊಚ್ಚಿಕೊಂಡು ಹೋದ ಬೈಕ್ ಸವಾರ ಈಜುತ್ತಾ ವಾಪಸ್ ಬಂದನೋ ಅಥವಾ ಹಾಗೆ ನೀರಿನಲ್ಲಿ ಕೊಚ್ಚಿಕೊಂಡು ಹೋದನೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here