ಕಲಬುರಗಿ: ಇಲ್ಲಿನ ಜ್ಞಾನ ಗಾಯತ್ರಿ ಸೇವಾ ಪ್ರತಿಷ್ಠಾನದ 10ನೇ ವಾರ್ಷಿಕೋತ್ಸವದ ಅಂಗವಾಗಿ ಓಂ ನಗರದಲ್ಲಿರುವ ಅರವಿಂದ ಆಶ್ರಮದಲ್ಲಿ ಉಚಿತ ಆರೋಗ್ಯ ಶೀಬಿರ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷೆ ನರ್ಮದಾರೆಡ್ಡಿ ಮಾತನಾಡಿ, ತಾಯಿ ಭಾರತಿಯನ್ನು ಜಗನ್ಮತೆ ಮಾಡುವ ಹಿರಿದಾದ ಗುರಿ ಹೊಂದಿರುವ ಪ್ರತಿಷ್ಠಾನ ಕಳೆದ ಹತ್ತೆಂಟು ವರ್ಷಗಳಿಂದ ಸಮಾಜಿಕ ಸೆವಾ ಮಾಡುತ್ತ ಬಂದಿದ್ದು, ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು? ಎಂಬ ನಿಟ್ಟಿನಲ್ಲಿ ಆಲೋಚಿಸುವುದಕ್ಕಾಗಿ ಪ್ರಯಿಷ್ಠಾನದ ವತಿಯಿಂದ ಈ ಜನಸೇವಾ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ತಜ್ಞ ವೈದ್ಯರಾದ ಡಾ. ಉಮಾ ರಾಜಾಪುರ, ಡಾ. ಈಶ್ವರ, ಡಾ. ಸುಮಾ ಪಾಟೀಲ, ಡಾ. ಸ್ವರೂಪಾ ಪಾಟೀಲ, ಡಾ. ರಾಜವರ್ಧನರೆಡ್ಡಿ, ಡಾ. ಜಯಶ್ರೀ ಮುಂತಾದವರು 200ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಿದರು.
ಬಿಪಿ, ಸುಗರ್, ಹಿಮೋಗ್ಲೋಬಿನ್ ಹಾಗೂ ಬಿಎಂಐ ಪರೀಕ್ಷೆ ನಡೆಸಿ ಅಗತ್ಯವಾಗಿರುವ ಔಷಧಿಗಳನ್ನು ಸಂಸ್ಥೆಯ ವತಿಯಿಂದ ವಿತರಿಸಲಾಯಿತು. ಪಾಲಿಕೆ ಸದಸ್ಯೆ ಶಾಂತಾಬಾಯಿ ಎಚ್. ಹಾಗೂ ಅರವಿಂದ ಆಶ್ರಮದ ಸಂಸ್ಥಾಪಕ ಶ್ರೀಪಾದರಾವ ಘಂಟೋಜಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಹರ್ಷವರ್ಧನರೆಡ್ಡಿ ಸ್ವಾಗತಿಸಿದರು. ಸ್ವಾಮಿ ನಿರೂಪಿಸಿದರು. ಪ್ರೇಮಸಿಂಗ್ ವಂದಿಸಿದರು.