ಬೆಂಗಳೂರು; 2023 ನೇ ಸಾಲಿನ ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿಗೆ ಅರ್ಜಿ ಆಹ್ವಾನ

0
16

ಬೆಂಗಳೂರು; ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುದ್ರಣ, ವಿದ್ಯುನ್ಮಾನ ವಾಹಿನಿಗಳು (ಟಿವಿ), ರೇಡಿಯೋ ಹಾಗೂ ಡಿಜಿಟಲ್ ಸಾಮಾಜಿಕ ಜಾಲತಾಣ ಮಾಧ್ಯಮಗಳು ಮತದಾರರ ಜಾಗೃತಿ ಹಾಗೂ ಚುನಾವಣೆಗೆ ಮಾಡಿರುವ ಕಾರ್ಯಕ್ಕಾಗಿ ಭಾರತ ಚುನಾವಣಾ ಆಯೋಗ ಮುದ್ರಣ, ವಿದ್ಯುನ್ಮಾನ ವಾಹಿನಿಗಳು (ಟಿವಿ), ರೇಡಿಯೋ ಹಾಗೂ ಡಿಜಿಟಲ್ ಸಾಮಾಜಿಕ ಜಾಲತಾಣ ನಾಲ್ಕು ವಿಭಾಗಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. ಪ್ರಸ್ತುತ 2023ನೇ ಸಾಲಿನ ಪ್ರಶಸ್ತಿಗಳಿಗಾಗಿ ಆಯೋಗದ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.

ಮತದಾರರ ಜಾಗೃತಿಗಾಗಿ ಮಾಧ್ಯಮ ಸಂಸ್ಥೆಗಳು ಕೈಗೊಂಡಿರುವ ಕಾರ್ಯಗಳ ವಿವರವಾದ ವರದಿಯನ್ನು ಡಿಸೆಂಬರ್ 10 ರೊಳಗಾಗಿ ನೇರವಾಗಿ ರಾಜೇಶ್ ಕುಮಾರ್ ಸಿಂಗ್ ಅಧೀನ ಕಾರ್ಯದರ್ಶಿ (ಸಂವಹನ), ಭಾರತ ಚುನಾವಣಾ ಆಯೋಗ, ನಿರ್ವಾಚನಾ ಸದನ, ಅಶೋಕ ರಸ್ತೆ, ನವದೆಹಲಿ -110001 ಅಂಚೆ ಮುಖಾಂತರ ಅಥವಾ ಇ-ಮೇಲ್ meಜiಚಿ-ಜivisioಟಿ@eಛಿi.gov.iಟಿ ಗೆ ಕಳುಹಿಸಬಹುದಾಗಿದೆ.

Contact Your\'s Advertisement; 9902492681

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ – 01123052131 ನ್ನು ಸಂಪರ್ಕಿಸಬಹುದಾಗಿದೆ ಎಮದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್‍ಕುಮಾರ್ ಮೀನಾ ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here