ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಹಿಂದಿ ಅಧ್ಯಯನ ವಿಭಾಗದ ಅತಿಥಿ ಸಹಾಯಕ ಪ್ರಾಧ್ಯಾಪಕ ಡಾ. ಪಲ್ಲವಿ ಸಿಕಂದರ ಹುಬ್ಬಾರೆ ಅವರಿಗೆ ಹಿಂದಿ ಸಾಹಿತ್ಯದಲ್ಲಿ ಉತ್ತಮ ಸಂಶೋಧನಾ ಕ್ಷೇತ್ರವೆಂದು ಪರಿಗಣಿಸಿ ಮಧ್ಯಪ್ರದೇಶದ ಗ್ವಾಲಿಯರ್ ಗೋಪಾಲ ಕಿರಣ ಸಮಾಜ ಸೇವಿ ಸಂಸ್ಥೆಯ ವತಿಯಿಂದ ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್ನಲ್ಲಿ “ಶಿಕ್ಷಣ ನಾವೀನ್ಯತೆ, ಸಾಹಿತ್ಯದ ಕಡೆಗೆ ಸೇವೆ” ಒಂದು ದಿನದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ “ಸಾವಿತ್ರಿಬಾಯಿ ಫುಲೆ ಇಂಟರ್ನ್ಯಾಷನಲ್ ಐಡಿಯಲ್ ಟೀಚರ್ ರತ್ನ ಅವಾರ್ಡ್” ನೀಡಿ ಗೌರವಿಸಿದೆ.
ಡಾ. ಪಲ್ಲವಿ ಸಿಕಂದರ ಹುಬ್ಬಾರೆ ಅವರು ಮೂಲತ ಬಸವಕಲ್ಯಾಣ ತಾಲೂಕಿನ ಯರಂಡಗಿ ಗ್ರಾಮದವರಾಗಿದ್ದಾರೆ. ಪ್ರಶಸ್ತಿ ಪಡೆದುಕೊಂಡಿದಕ್ಕೆ ಊರಿನ ಗಣ್ಯರು ಅವರ ಸ್ನೇಹಿತರು ಮುಂತಾದವರು ಹರ್ಷ ವ್ಯಕ್ತಪಡಿಸಿದ್ದಾರೆ.