ಕಲಬುರಗಿ: ಜೆ.ಆರ್.ನಗರ ಲಿಟಲ್ ಲ್ಯಾಂಪ್ಸ್ ಪ್ಲೇ ಶಾಲೆಯಲ್ಲಿ 68ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ನಿಮಿತ್ತ ಸಂಸ್ಥೆಯ ಮುಖ್ಯಸ್ಥರಾದ ರಾಜೇಶ್ವರಿ.ಎನ್.ಮುಲಗೆ ಇವರು ದ್ವಜಾರೋಹಣ ಹಾಗೂ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿದರು.
“ಕನ್ನಡವೇ ನಮ್ಮ ಉಸಿರು ಕನ್ನಡವೇ ನಮ್ಮ ಹಸಿರು” ಕನ್ನಡವು ಬಾಂಧವ್ಯದ ಬೆಸುಗೆಯಾಗಿ ಸಂಸ್ಕೃತಿಯ ಸೊಗಡಾಗಿ ಕಸ್ತೂರಿಯ ಕಂಪಾಗಿ, ಕನ್ನಡವನ್ನು ಮನೆಮನೆಗಳಲ್ಲಿ ಪಸರಿಸಿ ಬೆಳೆಯುವ ಮಕ್ಕಳಲ್ಲಿ ಮಾತೃ ನುಡಿಯ ಹಿರಿಮೆ ಹಾಗೂ ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎನ್ನುವುದರ ಮೂಲಕ ಕನ್ನಡದ ಕಂಪನ್ನು ಎಲ್ಲಾ ಕಡೆ ಹರಡಿಸಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರು,ಪುಟಾಣಿ ಮಕ್ಕಳು ಹಾಗೂ ಪಾಲಕರು ಭಾಗವಹಿಸಿದರು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರ ಸೂಚಿಸಿರುವ 5 ಗೀತೆಗಳು ಹಾಗೂ ರಾಷ್ಟ್ರಗೀತೆ ಹಾಗೂ ನಾಡಗೀತೆ ಯನ್ನು ಹಾಡಲಾಯಿತು. ಕುಮಾರಿ ಶ್ರಾವ್ಯ ತಾಯಿ ಭುವನೇಶ್ವರಿಯ ವೇಷವನ್ನು ತೊಟ್ಟು ಎಲ್ಲರ ಗಮನ ಮತ್ತು ಮನಸ್ಸನ್ನು ಸೂರ್ಯಗೊಂಡಿತು. ಉಳಿದ ಎಲ್ಲಾ ಪುಟಾಣಿ ಮಕ್ಕಳೊಂದಿಗೆ ಬಾರಿಸು ಕನ್ನಡ ಡಿಂಡಿಮವ ಹಾಗೂ ಹುಟ್ಟಿದರೆ ಹುಟ್ಟಬೇಕು ಕನ್ನಡ ನಾಡಿನಲ್ಲಿ ಎಂಬ ಗೀತೆಗಳು ಕೋಲಾಟದೊಂದಿಗೆ ನೃತ್ಯವನ್ನು ನಡೆಸಿದರು.