ಕನ್ನಡ ಬಳಸದಿದ್ದರೆ, ಕುಟುಂಬದ ಮೂಲ ಆಶಯಕ್ಕೆ ಪೆಟ್ಟು; ಪ್ರೊ. ಚನ್ನಾರಡ್ಡಿ ಪಾಟೀಲ

0
19

ಕಲಬುರಗಿ: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ, ಸರ್ವಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಲಬುರಗಿಯಲ್ಲಿ “ಕನ್ನಡ ರಾಜ್ಯೋತ್ಸವ” ಕಾರ್ಯಕ್ರಮವನ್ನು ಆಚರಿಸಲಾಯಿತು.

ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಅವರು ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆಗೈದು ಧ್ವಜಾರೋಹಣ ಮಾಡಿದರು. ಕನ್ನಡದ ಐದು ಹಾಡುಗಳನ್ನು ಹಾಡುವ ಮೂಲಕ ಕನ್ನಡಾಂಬೆಗೆ ನುಡಿ ನಮನ ಸಲ್ಲಿಸಲಾಯಿತು.

Contact Your\'s Advertisement; 9902492681

ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಅವರು ಮಾತನಾಡುತ್ತ, “ಕನ್ನಡ ನಮ್ಮ ಮಾತೃ ಭಾಷೆ ಬಳಸಿದರೆ ಸಂಸ್ಕøತಿ ಬೆಳೆಯುತ್ತದೆ ಮತ್ತು ಕುಟುಂಬಗಳು ಉಳಿಯುತ್ತವೆ. ಆಗ ಎಲ್ಲರ ಬದುಕಿನಲ್ಲಿ ಸಾಮರಸ್ಯ ಮೂಡುತ್ತದೆ ಎಂದರು. ಕನ್ನಡ ಭಾಷೆ ಕಚ್ಚಾಡುವವರನ್ನು ಕೂಡಿಸಿ ಒಲಿಸುತ್ತದೆ. ಕನ್ನಡ ಸಾಹಿತ್ಯಕ್ಕೆ, ಭಾಷೆಗೆ ಮನಸ್ಸಿಗೆ ಉತ್ಸಾಹ ತುಂಬಿ ಬದುಕು ಬೆಳಗುವ ಶಕ್ತಿ ಇದೆ. ಅದರಲ್ಲಿ ಆ ಸತ್ವವಿದೆ. ತಾಯಿ, ತಾಯಿ ಭಾಷೆ ಸ್ವರ್ಗಕ್ಕಿಂತ ಮಿಗಿಲು ಎಂದು ಕವಿಗಳು ಹೇಳಿದ್ದನ್ನು ತಿಳಿಸಿದರು.

ಬಸವಾದಿ ಶರಣರು, ಸರ್ವಜ್ಞ ಕವಿ ಹಾಗೂ ದಾಸವರೇಣ್ಯರು ಮತ್ತು ಕವಿ ಪುಂಗವರು ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಆದರೆ ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡದ ಅಸ್ಮಿತೆ ಉಳಿಸಿಕೊಳ್ಳಲು ಚಿಂಚನೆ ಮಾಡಬೇಕಾಗಿದೆ. ನಿಧಾನವಾಗಿ ಕನ್ನಡವನ್ನು ಅಳಿಸಿಹಾಕುವ ಲಕ್ಷಣಗಳು ಗೋಚರಿಸುತ್ತಿರುವ ಈ ಸಂದರ್ಭದಲ್ಲಿ ಕನ್ನಡವನ್ನು ಗಟ್ಟಿಯಾಗಿ ಉಳಿಸಿಕೊಳ್ಳುವ, ಕನ್ನಡದಿಂದ ಅನ್ನ ದೊರಕುವ, ಬದುಕು ಕಟ್ಟಿಕೊಳ್ಳುವ ರೂಪುರೇಷೆಗಳನ್ನು ಹಾಕಿಕೊಳ್ಳಬೇಕಾಗಿದೆ. ಕರ್ನಾಟಕದಲ್ಲಿರುವ ಎಲ್ಲ ಕಂಪನಿಗಳಿಗೆ ಶೇ. 80 ರಷ್ಟಾದರೂ ಕನ್ನಡಿಗರನ್ನೇ ನೇಮಕ ಮಾಡಿಕೊಳ್ಳಬೇಕಾಗಿದೆ. ಅದಕ್ಕಾಗಿ ತಕ್ಕ ನೈಪುಣ್ಯತೆಯನ್ನು ನಾವು ಹೊಂದಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಂಸ್ಥೆಯ ಶಾಲಾ-ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡ ಉಪನ್ಯಾಸಕರು ಮತ್ತು ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು. 10ನೇ ತರಗತಿಯಲ್ಲಿ ಕನ್ನಡ ವಿಷಯದಲ್ಲಿ 100ಕ್ಕೆ 100 ಮತ್ತು 125ಕ್ಕೆ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ನಂತರ ಕಾಲೇಜಿನ ಪ್ರಾಚಾರ್ಯರಾದ ಎಂ.ಸಿ.ಕಿರೇದಳ್ಳಿ ಅವರು ಕರ್ನಾಟಕ ಏಕೀಕರಣ, ಕನ್ನಡ ರಾಜ್ಯೋತ್ಸವ ಕುರಿತು ಮಾತನಾಡಿದರು. ಕನ್ನಡ ನಾಡು-ನುಡಿ, ಸಂಸ್ಕøತಿಯನ್ನು ಬೆಳೆಸುವಲ್ಲಿ ವಿದ್ಯಾರ್ಥಿಗಳ ಕರ್ತವ್ಯ ಕುರಿತು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿನುತಾ ಆರ್.ಬಿ., ಶಾಂತ ಕುಲಕರ್ಣಿ, ಪ್ರಭುಗೌಡ ಸಿದ್ಧಾರೆಡ್ಡಿ, ಕರುಣೇಶ್ ಹಿರೇಮಠ,ಗುರುರಾಜ ಕುಲಕರ್ಣಿ, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here