ದೇವಿಕೇರಾ:ಬಾಲ್ಯ ವಿವಾಹ ನಿಷೇಧ ಪ್ರಭಾತ ಪೇರಿ ಮೂಲಕ ಜಾಗೃತಿ

0
17

ಸುರಪುರ: ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ಬಾಲ್ಯ ವಿವಾಹ ನಿಷೇಧದ ಕುರಿತು ಪ್ರಭಾತ ಫೇರಿ ಮೂಲಕ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃಧ್ಧಿ ಇಲಾಖೆ,ಶಿಕ್ಷಣ ಇಲಾಖೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ಬಾಲ್ಯ ವಿವಾಹ ನಿಷೇಧದ ಕುರಿತು ಜಾಗೃತಿ ಮೂಡಿಸಲಾಯಿತು.

ಗ್ರಾಮದಲ್ಲಿ ಶಾಲಾ ಮಕ್ಕಳ ಪ್ರಭಾತ ಫೇರಿ ನಡೆಸಿ ಬಾಲ್ಯ ವಿವಾಹ ನಡೆಸದಂತೆ ಘೋಷಣೆಗಳನ್ನು ಕೂಗಿದರು.ನಂತರ ಶಾಲೆಯ ಆವರಣದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಮಹಿಳಾ ಮೇಲ್ವಿಚಾರಕಿ ಜಯಶ್ರೀ ಬಿರಾದಾರ ಭಾಗವಹಿಸಿ ಮಾತನಾಡಿ,ಯಾರು ಕೂಡ ಬಾಲ್ಯ ವಿವಾಹ ಮಾಡಬಾರದು,ಹೆಣ್ಣಿಗೆ 18 ವರ್ಷ,ಗಂಡಿಗೆ 21 ವರ್ಷಗಳಿಗಿಂತ ಕಡಿಮೆ ಇದ್ದಾಗ ಮದುವೆ ಮಾಡಿಸಬೇಡಿ,ಒಂದು ವೇಳೆ ಇದಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆ ಮಾಡಿದರೆ ಅಂತಹ ಪೋಷಕರಿಗೆ ಶಿಕ್ಷೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶಾಲೆಯಬ ಮುಖ್ಯಗುರು ಆರ್.ಕೆ ಕೋಡಿಹಾಳ, ತಿಪ್ಪೇಸ್ವಾಮಿ, ಗಿರೀಶ, ಅಮರವ್ವ, ಶಿವಶರಣಯ್ಯ, ಮಹಾದೇವಿ, ಶಾಂತಾಕುಮಾರಿ, ಅಂಗನವಾಡಿ ಕಾರ್ಯಕರ್ತೆ ರೇಣುಕಾ,ಮಧುಮತಿ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here