ಸಾರ್ವಜನಿಕರ ತೊಂದರೆಗೆ ಕಾರಣವಾದವರ ವಿರುದ್ಧ ಕಾನೂನಿನ ಕ್ರಮಕೈಗೊಳ್ಳಿ: ಬಿಜೆಪಿ ಪ್ರತಿಭಟನೆ

0
36

ವಾಡಿ; ಪಟ್ಟಣದ ಮುಖ್ಯ ರಸ್ತೆಯ ದ್ವಿಪಥ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ಅತ್ಯಂತ ಕಳಪೆ ಗುಣಮಟ್ಟದಿಂದ ಮಾಡಿ ರಸ್ತೆಯ ಹಣ ಕೊಳ್ಳೆ ಹೊಡೆದಿದ್ದಾರೆ ಎಂದು ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಗಂಭೀರ ಆರೋಪ ಮಾಡಿದ್ದರು.

ಪಟ್ಟಣದಲ್ಲಿನ ಕಳಪೆ ಕಾಮಗಾರಿ,ಎಸಿಸಿ ಕಾರ್ಖಾನೆಯ ಪರಿಸರ ನಿಯಮಗಳ ಉಲ್ಲಂಘನೆ, ಹಾಗೂ ಮಣಿಕಂಠ ರಾಠೊಡ ಅವರ ಮೇಲೆ ಹಲ್ಲೇ ಖಂಡಿಸಿ, ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಜೆಪಿ ಶಕ್ತಿ ಕೇಂದ್ರದಿಂದ ಶ್ರೀನಿವಾಸ್ ಗುಡಿ ಚೌಕ ಬಳಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು  ಮಾತನಾಡಿದರು.

Contact Your\'s Advertisement; 9902492681

ರಸ್ತೆಗೆ ಹಾಕಿರುವ ಟಾರ್‌ ಕಿತ್ತು ಗೊಂಡು ಬಿಟ್ಟಿದೆ ಈ ರಸ್ತೆಯ ಮೇಲೆ ಜಿಲ್ಲಾಧಿಕಾರಿಗಳು  ಕೆಲವು ತಿಂಗಳ ಹಿಂದೆ ಎಸಿಸಿಯ ಪಬ್ಲಿಕ್ ಹೀರಿಂಗ್ ಸಲುವಾಗಿ ಇದೇ ರಸ್ತೆಯಲ್ಲಿ ಸಾಗಿದರು, ಈ ರಸ್ತೆ ಬಗ್ಗೆ ಅನೇಕ ಸಲ‌ ದೂರು ನಿಡಿದ್ದೇವೆ,ಪತ್ರಿಕೆಯಲ್ಲೂ ಸಾಕಷ್ಟು ಸಲ ಇದರ ಬಗ್ಗೆ ಪ್ರಕಟವಾಗಿದೆ ಆದರೂ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿಲ್ಲ. ರಸ್ತೆ ನಿರ್ಮಾಣದಲ್ಲಿಯೂ ಸಹ ಇದನ್ನು ತಡೆದು ನಾವು ಸಂಭಂದಿಸಿದವರಿಗೆ ಕೆಳಿದರೆ ಅವರು ಯಾವುದೂ ತಲೆ ಕೆಡೆಸಿಕೊಳ್ಳದೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದರ ಗುತ್ತಿಗೆದಾರರು ರಸ್ತೆ ಬಿಲ್ ಎತ್ತುವುದರಲ್ಲೇ ಬಿಸಿ ಇದ್ದರು ಈಗ ಇನ್ನೂ ರಸ್ತೆನೆ ಆಗಿಲ್ಲ ಇದರ 5 ಕೋಟಿ ಸಾರ್ವಜನಿಕ ಹಣ ಇನ್ನೂ ಪೆಡ್ಡಿಂಗ್ ಇಟ್ಟಿದ್ದಾರೂ ಅಥವಾ ಖಾಲಿ ಮಾಡಿದ್ದರೂ ಎಂಬುದನ್ನು ಪ್ರತಿಭಟನೆಯ ಮನವಿ ಸ್ವೀಕಾರ ಮಾಡಲು ಬಂದಿರುವ ತಹಶಿಲ್ದಾರರು ತಿಳಿಸಬೇಕಾಗಿದೆ ಎಂದರು.

ಕಳಪೆ ಕಾಮಗಾರಿ ನಿಯಂತ್ರಿಸಿ ಗುತ್ತಿಗೆದಾರರ ವಿರುದ್ಧ ಕಾನೂನಿನ ಚಾಟಿ ಬೀಸಬೇಕಾಗಿರುವ ಕೆಲ ಅಧಿಕಾರಿಗಳು ಎಸಿಸಿ ಗೇಸ್ಟ ಹೌಸ್ ಗೆ ಈ ರಸ್ತೆಯ ಮೇಲೆಯೇ ಬಂದು ಆರಾಮವಾಗಿ ನಿದ್ದಿ ಮಾಡಿ, ತಮ್ಮ ಕಿಸೆ ತುಂಬಿಕೊಂಡು,ಜನರಿಗೆ ಮತ್ತು ಸರ್ಕಾರಕ್ಕೆ ಅನ್ಯಾಯ ಮಾಡತ್ತಿದ್ದಾರೆ.ಈ ರಸ್ತೆ ಗುತ್ತಗೆದಾರರ ಮೇಲೆ  ಮತ್ತು ಇದನ್ನು ಪರಿಕ್ಷೀಸದೇ ಬಿಲ್ ಪಾಸ್ ಮಾಡಿದ ಅಧಿಕಾರಿಗಳ ಮೇಲೆ ಸ್ವಯಂ ಪ್ರೇರಿತವಾಗಿ ಲೋಕೋಪಯೋಗಿ ಇಲಾಖೆಯ ಅನ್ನತಿನ್ನುತ್ತಿರುವ ದಕ್ಷ ಅಧಿಕಾರಿಗಳು  ತಕ್ಷಣ ದೂರು ದಾಖಲಿಸಿ ಕಾನೂನಿನ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.

ನಮ್ಮ ಮುಖಂಡ ಮಣಿಕಂಠ ರಾಠೊಡ ಅವರಿಗೆ ಸೂಕ್ತ ರಕ್ಷಣೆ ಸರ್ಕಾರ ಒದಗಿಸಬೇಕು. ಇಲ್ಲದಿದ್ದರೆ ಜಿಲ್ಲೆಯಾಧ್ಯಂತ ಉಗ್ರ ಪ್ರತಿಭಟನೆ‌ ಹಮ್ಮಿಕೊಳ್ಳಲಾಗುವುದು. ಗ್ರಂಥಾಲಯ, ಆಟದ ಮೈದಾನ,ಸಾರ್ವಜನಿಕ ಮೈದಾನ ಸೇರಿದಂತೆ ಅವಶ್ಯಕ ಇರುವವುವೆಲ್ಲಾ ನಮ್ಮಲ್ಲಿ ಮರೀಚಿಕೆ ಯಾಗಿವೆ ಇದನ್ನು ಆದಷ್ಟೂ ಬೇಗ ಸಾರ್ವಜನಿಕರ ಬಳಕೆಗೆ ಬರುವಂತೆ ಮಾಡಿ, ಕಾನೂನಿನ ಸುವ್ಯವಸ್ಥೆ ಹದಗೆಡುತಿರುವ ಉಸ್ತುವಾರಿ ಸಚಿವರ ತವರು ಕ್ಷೇತ್ರದ ಗತಿ ಇದಾಗಿದೆ ಎಂದರು.

ತಹಶಿಲ್ದಾರರ ಸೈಯದ್ ಶೇಷಾವಲಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಸಿಪಿಐ ಚಂದ್ರಶೇಖರ ತಿಗಡಿ,ಪಿಎಸ್ ಐ ತಿರುಮಲೇಶ ಕುಂಬಾರ ಹಾಗು ಸಿಬ್ಬಂದಿಗಳು ಬಂದೋಬಸ್ತ ಒದಗಿಸಿದರು.

ಎಸ್ ಸಿ ಮೂರ್ಚಾದ ತಾಲ್ಲೂಕು ಅಧ್ಯಕ್ಷ ರಾಜು ಮುಕ್ಕಣ್ಣ,ರೈತ ಮೂರ್ಚಾ ಅಧ್ಯಕ್ಷ ಪ್ರಕಾಶ ಪಾಟೀಲ,ಪಟ್ಟಣದ ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡ ರಾದ ಸ್ಯಾಮಸನ್ ಐಜಿಯಾ,ಕಾಶಿನಾಥ ಚಿನ್ನಗುಂಡ,ರಿಚರ್ಡ್‌ ಮಾರೆಡ್ಡಿ, ಶಂಕರ ರಾಠೊಡ ಮಾತನಾಡಿದರು.

ಈ ಸಂಧರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ನೀಲಕಂಠ ಪಾಟೀಲ,ತಾಲ್ಲೂಕ ಯುವ ಮೂರ್ಚಾ ಅಧ್ಯಕ್ಷ ದೇವರಾಜ ತಳವಾರ, ನಗರ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ,ಇಂಗಳಗಿ ಶಕ್ತಿ ಕೇಂದ್ರದ ಅಧ್ಯಕ್ಷ ಸೋಮನಾಥ ಚವ್ಹಾಣ, ಮುಖಂಡರಾದ ವಿಠಲ ನಾಯಕ,ರಾಮಚಂದ್ರ ರಡ್ಡಿ, ಭೀಮರಾವ ದೊರೆ,ರವಿ ಕಾರಬಾರಿ, ಹರಿ ಗಲಾಂಡೆ,ಕಿಶನ ಜಾಧವ,ಶರಣಗೌಡ ಚಾಮನೂರ, ಸಿದ್ದಣ್ಣ ಕಲ್ಲಶೆಟ್ಟಿ,ಆನಂದ ಇಂಗಳಗಿ, ಮಹೇಶ ಬಾಳಿ,ಸತೀಶ್ ಸಾವಳಗಿ,ಗುಂಡು ಮತ್ತಿಮುಡ,ಶಂಭುಲಿಂಗ ದಿಗ್ಗಾಂವ, ಅಯ್ಯಣ್ಣ ದಂಡೋತಿ,ಶಿವಕುಮಾರ ಹೂಗಾರ, ಪ್ರಕಾಶ ಪುಜಾರಿ,ಮಹಾಲಿಂಗ ಶೆಳ್ಳಗಿ,ಸಿದ್ದೇಶ್ವರ ಚೊಪಡೆ, ಅಭಿಷೇಕ ರಾಠೊಡ, ಅರ್ಜುನ ದಹಿಹಂಡೆ,ಜಯಂತ ಪವಾರ,ಕುಮಾರ ಜಾಧವ, ಪ್ರೇಮ ರಾಠೊಡ, ಭರತ ರಾಠೊಡ,ಸತೀಶ ರಾಠೊಡ, ಯಲ್ಲಾಲಿಂಗ ಪುಜಾರಿ,ಭರತ ಮುತ್ತಗಾ,ಅಶೋಕ ರಾಠೊಡ, ಅಮಿತ್ ರಾಠೊಡ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here