ಕಲಬುರಗಿ: ಧರ್ಮ ಮತ್ತು ಧಾರ್ಮಿಕತೆಯನ್ನು ಮೈಗೂಡಿಸಿಕೊಂಡು ಮಾನವ ಕಲ್ಯಾಣಕ್ಕಾಗಿ ದುಡಿಯುವ ಮೂಲಕ ಉನ್ನತ ಮಟ್ಟದ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮಾಲಗತ್ತಿಯ ಶ್ರೀ ಹಿರೋಡೆಶ್ವರ ಸಂಸ್ಥಾನದ ಪೂಜ್ಯರಾದ ಶ್ರೀ ಚೆನ್ನವೀರ ಶರಣರು ತಮ್ಮ ಆಶಿರ್ವಚನದಲ್ಲಿ ಹೇಳಿದರು.
ನಗರದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ ಅಂಬಾರಾಯ ಅಷ್ಠಗಿ ಯವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶರಣರು ಆಶಿರ್ವಚನ ನೀಡುತ್ತಿದ್ದರು. ಇಂದಿನ ಕಂಪ್ಯೂಟರ್ ಹಾಗೂ ಮೊಬೈಲ್ ಯುಗದಲ್ಲಿ ಮಕ್ಕಳನ್ನು ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಲು ಪಾಲಕರು ಹಿಂದೆಂದಿಗಿಂತಲೂ ಹೆಚ್ಚಿನ ಶ್ರಮ ವಹಿಸಬೇಕಾಗಿದೆ ಎಂದರು.
ಪೂಜ್ಯರಿಂದ ಆಶಿರ್ವಾದ ಸ್ವೀಕರಿಸಿದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಡಾ ಅಂಬಾರಾಯ ಅಷ್ಠಗಿ ಮಾತನಾಡಿ, ಪೂಜ್ಯ ಶ್ರೀ ಚೆನ್ನವೀರ ಶರಣರು, ನಮ್ಮ ಮನೆಗೆ ಬಂದು ಆಶಿರ್ವಾದಗೈದಿರುವುದು ನಮ್ಮ ಭಾಗ್ಯ ಎಂದರು.
ಚೆನ್ನವೀರ ಶರಣರು ತಮ್ಮ ಸಂಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಕಷ್ಟ ಪರಿಹಾರ ಮಾರ್ಗ ಸೂಚಿಸುವ ಮೂಲಕ ಈ ಭಾಗದಲ್ಲಿ ಭಕ್ತರ ಆಶೋತ್ತರಗಳನ್ನು ಈಡೇರಿಸುತ್ತಿರುವುದು ಭಕ್ತ ವೃಂದದಲ್ಲಿ ಸಂತಸ ತಂದಿದೆ ಎಂದು ಡಾ ಅಂಬಾರಾಯ ಅಷ್ಠಗಿ ಚೆನ್ನವೀರ ಶರಣರ ಕಾರ್ಯ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಭವಾನಿನಗರದ ಭಾಗ್ಯವಂತಿದೇವಿ ಶಕ್ತಿಪೀಠದ ಎ ಬಿ ಪಾಟೀಲ್ , ಬಿ ಎಸ್ ರೇಶ್ಮಿ ಸಾಹು ಚಿತ್ತಾಪುರ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಸುಜಾತಾ ಅಷ್ಠಗಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ. ಯಶವಂತರಾಯ ಅಷ್ಠಗಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಶಿವ ಅಷ್ಠಗಿ, ವನಿತಾ ಅಷ್ಠಗಿ, ಸುನೀಲ ಶ್ರೀಮಂತ ಕೋಟ್ರೆ, ಪ್ರಿಯಾಂಕಾ , ಅಶುತೋಷ್, ಅನಿರುದ್ಧ, ಅನುಷ್ಕಾ, ಆರಾಧ್ಯ,ಆರುಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಾಲಗತ್ತಿಯ ಶ್ರೀ ಹಿರೋಡೆಶ್ವರ ಸಂಸ್ಥಾನ ಮಠವು ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಹಾಗೂ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವ ಧಾರ್ಮಿಕ ಕೇಂದ್ರವಾಗಿದೆ.- ಡಾ.ಅಂಬಾರಾಯ ಅಷ್ಠಗಿ, ರಾಜ್ಯ ಉಪಾಧ್ಯಕ್ಷರು, ಬಿಜೆಪಿ ಎಸ್ಸಿ ಮೋರ್ಚಾ ಕರ್ನಾಟಕ