ಹೊನಗುಂಟಾ : ಮೂಲಭೂತ ಸಮಸ್ಯೆಗಳ ಬಗೆಹರಿಸಲು ಆಗ್ರಹಿಸಿ ಮನವಿ

0
19

ಶಹಾಬಾದ : ಹೊನಗುಂಟಾ ಗ್ರಾಮಸ್ಥರಿಗೆ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಪ್ರತಿಭಟಿಸಿ ಗ್ರಾಪಂ ಪಿಡಿಓಗೆ ಮನವಿ ಪತ್ರ ಸಲ್ಲಿಸಿದರು.

ಸಂಘಟನೆಯ ಕಾರ್ಯದರ್ಶಿ ರಾಜೇಂದ್ರ ಅತನೂರ ಮಾತನಾಡಿ,ತಾಲೂಕಿನಲ್ಲಿ ಹೊನಗುಂಟಾ ಗ್ರಾಮವು ದೊಡ್ಡ ಗ್ರಾಮವಾಗಿದ್ದು, ಸರಿಸುಮಾರು ಐದು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಜನಸಂಖ್ಯೆಗೆ ತಕ್ಕಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಗ್ರಾಮ ಪಂಚಾಯಿತಿಯು ಸಂಪೂರ್ಣವಾಗಿ ವಿಫಲವಾಗಿದೆ. ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ, ಬೀದಿ ದೀಪ, ಸಾರ್ವಜನಿಕ ಗ್ರಂಥಾಲಯ, ಮಹಿಳಾ ಶೌಚಾಲಯ ಹಾಗೂ ಗ್ರಾಮದ ನೈರ್ಮಲ್ಯ ಕಾಪಾಡುವಲ್ಲಿ ಗ್ರಾಮ ಪಂಚಾಯಿತಿ ಆಡಳಿತವು ಸೋತಿದೆ.

Contact Your\'s Advertisement; 9902492681

ಮತ್ತೊಂದೆಡೆ ಉದ್ಯೋಗಖಾತ್ರಿ ಯೋಜನೆಯಲ್ಲಿ ಕನಿಷ್ಟ ಮಾನವ ದುಡಿಯುವ ದಿನಗಳನ್ನು ಗ್ರಾಮದ ಜನರಿಗೆ ಸಮರ್ಪಕವಾಗಿ ನೀಡುತ್ತಿಲ್ಲ. ಇದರಿಂದ್ದಾಗಿ ಗ್ರಾಮದ ಜನರು ಉದ್ಯೋಗಕ್ಕಾಗಿ ಬೇರೆ ಕಡೆಗೆ ಗೂಳೆ ಹೋಗುತ್ತಿದ್ದಾರೆ. ಅವರಿಗೆ ಸಮರ್ಪಕವಾಗಿ ಉದ್ಯೋಗ ನೀಡಲು ಗ್ರಾಮ ಪಂಚಾಯಿತಿಯು ಕ್ರಮ ಕೈಗೊಳ್ಳಬೇಕು.

ದಶಕಗಳಿಂದ ವಾಸವಿರುವ ಇಲ್ಲಿನ ಜನರು ನಿಗದಿತವಾಗಿ ತಮ್ಮ ಮನೆಯ ತೆರಿಗೆಗಳನ್ನು ಗ್ರಾಮ ಪಂಚಾಯಿತಿಗೆ ತುಂಬಿ ರಸೀದಿಯನ್ನು ಪಡೆದಿರುತ್ತಾರೆ. ಆದರೆ ತೆರಿಗೆಗಳನ್ನು ಜನರು ಗ್ರಾಮ ಪಂಚಾಯಿತಿಗೆ ಕಟ್ಟಿದ್ದರೂ ಸಹ ಬಾಕಿ ಉಳಿಸಿಕೊಂಡಿದ್ದಾರೆಂದು ಹೇಳಲಾಗಿದೆ. ಗ್ರಾಮ ಪಂಚಾಯಿತಿಯವರು ಮುಗ್ಧಜನರ ಹಣವನ್ನು ದುರ್ಬಳಕೆ ಮಾಡಿಕೊಂಡು ಸರಕಾರಕ್ಕೂ ಹಾಗೂ ಜನರಿಗೆ ಮೋಸ ಮಾಡಿರುತ್ತಾರೆ. ಅಲ್ಲದೆ ಒಬ್ಬರ ಮನೆಯ ಹಕ್ಕುಪತ್ರವನ್ನು ಮತ್ತೊಬ್ಬರ ಹೆಸರಿಗೆ, ಮತ್ತೊಬ್ಬರ ಮನೆಯ ಹಕ್ಕುಪತ್ರವನ್ನು ಇನ್ನೊಬ್ಬರ ಹೆಸರಿಗೆ ಮಾಡಿ ಜನರನ್ನು ಆಂತಕಕ್ಕೆ ದೂಡಿದ್ದಾರೆ.

ತಾವು ದಶಕಗಳಿಂದ ವಾಸಿಸುತ್ತಿರುವ ಮನೆಯು ಬೇರೆಯವರ ಹೆಸರಿನಲ್ಲಿರುವುದು ಕಂಡು ಗ್ರಾಮಸ್ಥರು ದಿಕ್ಕುತೋಚದೆ ಹಲವು ಬಾರಿ ತಮ್ಮ ಕಾರ್ಯಾಲಯಕ್ಕೆ, ತಾಲೂಕ ಪಂಚಾಯಿತಿಗೆ ಹಾಗೂ ಜಿಲ್ಲಾ ಪಂಚಾಯಿತಿಗೆ ತಪ್ಪನ್ನು ಸರಿಪಡಿಸಿ, ತಪ್ಪಿಸ್ಥರ ಮೇಲೆ ಕ್ರಮಗೊಳ್ಳಲು ವಿನಂತಿ ಮಾಡಿಕೊಂಡಿದ್ದರೂ ಸಹ ಇಲ್ಲಿಯವರೆಗೆ ಗ್ರಾಮದ ಜನರಿಗೆ ಯಾವುದೇ ರೀತಿಯ ಪರಿಹಾರವನ್ನು ನೀಡುವಲ್ಲಿ ಕ್ರಮ ಕೈಗೊಳ್ಳದಿರುವುದು ನಾಚಿಕೆಕೇಡು ವಿಷಯವಾಗಿದೆ ಎಂದು ದೂರಿದರು.

ಗ್ರಾಮದ ಜನರ ಸಮಸ್ಯೆಗಳನ್ನು ಆದಷ್ಟು ಬೇಗನೆ ಪರಿಹಾರಿಸಬೇಕು. ಒಂದು ವೇಳೆ ಜನರ ಕಷ್ಟಗಳಿಗೆ ತಾವುಗಳು ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದರೆ ಉನ್ನತ ಮಟ್ಟದ ಹೋರಾಟಗಳನ್ನು ಸಂಘಟಿಸಬೇಕಾಗುತ್ತದೆ ಎಚ್ಛರಿಸಿದರು.

ನಿಯೋಗದಲ್ಲಿ ನೀಲಕಂಠ ಹುಲಿ, ಚಂದ್ರು ಮರಗೋಳ, ದೇವರಾಜ ರಾಜೋಳ, ಮೌನೇಶ ರಾಜೋಳ, ದೀಪಣ್ಣ ಓಲೇ, ಭೀಮು ವಾಲಿಕರ, ಬಸಲಿಂಗಪ್ಪ ದಂಡಾ, ಬಾಬು ಆಡಿನ್, ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here