ಅತಿಥಿ ಉಪನ್ಯಾಸಕರ ಧರಣಿ ಸ್ಥಳಕ್ಕೆ ಶಾಸಕ ಆರ್.ವಿ ನಾಯಕ ಭೇಟಿ

0
59

ಸುರಪುರ: ನಗರದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಮುಂದೆ ರಾಜ್ಯ ಸರಕಾರ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ ದಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ಸೇವಾ ಭದ್ರತೆಯೊಂದಿಗೆ ಕಾಯಂಗೊಳಿಸಲು ಆಗ್ರಹಿಸಿ ಸರಕಾರಕ್ಕೆ ಒತ್ತಾಯಿಸಿ ಕಳೆದ ಎರಡು ದಿನಗಳಿಂದ ಧರಣಿ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರ ಧರಣಿ ಸ್ಥಳಕ್ಕೆ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಮನವಿ ಆಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ರಾಜ್ಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಲು ಕಳೆದ ಅನೇಕ ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ,ಸರಕಾರ ನಮ್ಮ ಬೇಡಿಕೆ ಈಡೇರಿಸುವುದಾಗಿ ತನ್ನ ಪ್ರಣಾಳಿಕೆಯಲ್ಲೂ ತಿಳಿಸಿತ್ತು,ಆದ್ದರಿಂದ ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 11,500 ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವಂತೆ ಸರಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.

Contact Your\'s Advertisement; 9902492681

ಮನವಿಯನ್ನು ಸ್ವೀಕರಿಸಿದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು,ನಿಮ್ಮ ಬೇಡಿಕೆಗಳನ್ನು ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಿ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಜಗದೀಶ ತಂಬಾಕೆ,ಪರಮಣ್ಣ ದಿವಾನ,ಶಾಂತಪ್ಪ ನಾಯಕ,ಡಾ:ಹೊನ್ನಪ್ಪ,ಡಾ:ಹಣಮಂತ್ರಾಯ ದೊಡ್ಮನಿ,ಬಸವರಾಜ ಎಮ್.ಬಿ,ನಾಗಪ್ಪ ಹಡಪದ,ಪ್ರಭುಗೌಡ,ಡಾ:ನಮ್ರತಾ ಜೈನ್,ರಂಜಿತಾ,ಜ್ಯೋತಿ ಭಂಡಾರಿ,ಹಣಮಂತ ಸಿಂಘೆ,ಬಸವರಾಜ ಪೂಜಾರಿ,ಡಾ:ಎಸ್.ಎಮ್ ಪಾಟೀಲ್,ಡಾ:ಮಹಾಂತೇಶ ಎಸ್,ಶಶಿಕುಮಾರ,ಶಾಂತು ನಾಯಕ,ಮಾರುತಿ,ಡಾ:ಕೃಷ್ಣಪ್ಪ ಬಿ,ರವೀಂದ್ರ ಪಾಣಿಪತ್,ಡಾ:ಮಹಾಂತೇಶ,ಆದಿಶೇಷ,ಡಾ:ಮರಿಲಿಂಗಪ್ಪ,ವೆಂಕಟೇಶ,ಡಾ:ಹೆಚ್.ಬಿ ನಡುವಿನಕೇರಿ, ಡಾ. ಕಾಶಮ್ಮ,ರವಿಕುಮಾರ,ವಿಶ್ವನಾಥರೆಡ್ಡಿ,ವಿಶ್ವನಾಥ ಹಿರೇಮಠ,ಶಶಿಕುಮಾರ,ರಾಹುಲ್ ದೋತ್ರೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here