ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಬೆನಕನಳ್ಳಿ ಡೋಣಗಾಂವ, ರಾಜೋಳಾ ಮತ್ತು ಹುಳಗೋಳ ಗ್ರಾಮದ ಜಮೀನಿನ ರೈತರನ್ನು ವಂಚಿಸಿ 109 ಉಲ್ಲಂಘನೆ ಮಾಡಿದ ಕಾರಣ ಶ್ರೀ ಸಿಮೆಂಟ ಕಂಪನಿಯವರ ವಿರುದ್ದ ಕ್ರಮ ಕೈಗೊಂಡು ರೈತರಿಗೆ ಹೆಚ್ಚಿನ ಮೊತ್ತದ ಬಾಕಿ ಹಣ ಮಂಜೂರು ಮಾಡುವಂತೆ ಆದೇಶ ಮಾಡಲು ಇಂದು ಕೋಡ್ಲಾ ಬೆನಕನಳ್ಳಿ ಡೋಣಗಾಂವ ರಾಜೋಳಾ ರೈತರ ಸಂಘದ ಸದಸ್ಯರು ಸೇಡಂ ಮತಕ್ಷೇತ್ರದ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಭೇಟಿ ಮಾಡಿ ಮನವಿ ಮಾಡಿದ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಶ್ರೀ ಬಾಲರಾಜ ಅ. ಗುತ್ತೇದಾರ ಮಾತನಾಡಿ ಈಗಾಗಲೇ ಅಪರ ಪ್ರಾದೇಶಿಕ ಆಯುಕ್ತರು ಕಲಬುರಗಿ ಇವರು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ, ಬೆನಕನಳಿ, ಡೋಣಗಾಂವ, ರಾಜೋಳಾ ಮತ್ತು ಹುಳಗೋಳ ಗ್ರಾಮದ ಜಮೀನನ್ನು ರೈತರನ್ನು ವಂಚಿಸಿ ಕಲಂ 109 ಉಲ್ಲಂಘನೆ ಮಾಡಿ ವಂಚಿಸಿದ್ದು ಶ್ರೀ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿದಾರೆ.
ಸದರಿಯವರ ಆದೇಶದ ಪ್ರಕಾರ ಶ್ರೀ ಸಿಮೆಂಟ್ ಕಂಪನಿಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಹೆಚ್ಚಿನ ಮೊತ್ತದ ಪರಿಹಾರ ನೀಡಲು ಕಂಪನಿಯ ಅಧಿಕಾರಿಗಳಿಗೆ ಆದೇಶ ಮಾಡಬೇಕು, ಸತತ ಒಂದು ವರ್ಷದಿಂದ ಶ್ರೀ ಸಿಮೆಂಟ್ ಕಾರ್ಖಾನೆ ವಿರುದ್ಧ ಸತ್ಯಾಗ್ರಹ ಮಾಡುತ್ತಿದ್ದು ಇಲ್ಲಿಯವರೆಗೆ ರೈತರಿಗೆ ಸಿಗಬೇಕಾಗಿದ್ದ ಹಣವನ್ನು ಕೊಡದೆ ವಂಚನೆ ಮಾಡುತ್ತಿದ್ದಾರೆ. ಸತ್ಯಾಗ್ರಹದಲ್ಲಿ ಒಂದು ಜೀವ ಕೂಡ ಬಲಿಯಾಗಿದೆ. ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಶ್ರೀ ಸುರೇಶ್ ಮಹಗಾಂವಕರ್, ಸುನೀತಾ ತಳವಾರ, ಶೇರಲಿ ಶೇಕ್ , ಶರಣಪ್ಪ, ಶಾಂತಪ್ಪ ಸಾಹುಕಾರ ಕೊಡ್ಲಾ, ಕಾಶಪ್ಪ, ಭೀಮರಾಯ ರಾಮಲಿಂಗ, ಬಸಪ್ಪ, ಸೂರಪ್ಪ ಯಲ್ಲೇಶಪ್ಪ, ಮಲ್ಲಿಕಾರ್ಜುನ್, ಅರ್ಜುನ್ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದರು.