ವಾಡಿ ಎಸಿಸಿ ಕಾರ್ಖಾನೆ ವತಿಯಿಂದ ಕಾರ್ಮಿಕರಿಗೆ ಸುರಕ್ಷಾ ಪ್ರಶಸ್ತಿ ವಿತರಣೆ

0
58

ಕಲಬುರಗಿ: ಕಂಪನಿಗಳಲ್ಲಿ ಕೆಲಸ ಮಾಡುವಾಗ ಸುರಕ್ಷತೆಯ ಸಾಧನಗಳನ್ನು ಬಳಸಿಯೇ ಕೆಲಸ ಮಾಡಬೇಕು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿ ತನ್ನ ಕುಟುಂಬಕ್ಕೆ ಬಹಳ ಮುಖ್ಯವಾಗಿರುತ್ತಾನೆ. ಆದ್ದರಿಂದ ಸುರಕ್ಷಿತ ಸಾಧನಗಳನ್ನು ಬಳಸಿ ಕೆಲಸ ಮಾಡಬೇಕು ನಮ್ಮ ಬೇಜವಾಬ್ದಾರಿತನದಿಂದಲೇ ಬಹಳಷ್ಟು ಅಪಘಾತಗಳು ಆಗುತ್ತವೆ ಎಂದು ಕಾರ್ಪೊರೇಟ್ ಹೆಡ್ ಸೆಪ್ಟಿ ಪಂಕಜ್ ಸಿಂಗ್ ಅವರು ಸುರಕ್ಷಾ ಸ್ಟಾರ್ ಅವಾರ್ಡ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ವಾಡಿ ಎಸಿಸಿ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಸುರಕ್ಷತೆಯ ಬಗ್ಗೆ ಉತ್ತೇಜನ ನೀಡಲು ಪ್ರತಿ ತಿಂಗಳು ಸೇಫ್ಟಿ ಸ್ಟಾರ್ ಅವಾರ್ಡ್ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಹಳ ವಿಶೇಷವಾಗಿದೆ ಹಾಗೂ ಇದನ್ನು ಎಲ್ಲಾ ಕಾರ್ಖಾನೆಗಳಲ್ಲಿ ಚಾಲನೆ ನೀಡಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ಇಂದಿನ ದಿನಮಾನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಲಿಕ್ಕೆ ನಿಯಮಗಳನ್ನು ಸರಿಯಾಗಿ ಪಾಲಿಸದೆ ಇರುವುದೆ ಮುಖ್ಯ ಕಾರಣ. ಅದರಲ್ಲಿ ವಿಶೇಷವಾಗಿ ಕ್ರಾಶ್ ಹೆಲ್ಮೆಟ್, ಸೇಫ್ಟಿ ಬೆಲ್ಟ್ ಬಳಕೆ ಮಾಡದಿರುವುದೇ ಅಪಘಾತಕ್ಕೆ ಮುಖ್ಯ ಕಾರಣ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮ ಉದ್ದೇಶಿಸಿ ವಾಡಿ ಸಿಮೆಂಟ್ ಕಂಪನಿಯ ಮುಖ್ಯಸ್ಥರಾದ ವೈ.ಎಸ್. ರಾವ್ ಅವರು ಮಾತನಾಡುತ್ತಾ ಈ ವಿಶೇಷ ಕಾರ್ಯಕ್ರಮ ಜಾರಿಗೆ ತಂದು ಕಾರ್ಮಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಅವರಿಗೆ ಬಹುಮಾನಗಳನ್ನ ಕೊಡುವ ಮುಖಾಂತರ ಸುರಕ್ಷತೆಯಿಂದ ಕೆಲಸ ಮಾಡಲು ಇನ್ನಷ್ಟು ಉತ್ತೇಜಿಸಬೇಕು ಎಂದು ಈ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ನಮ್ಮ ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಯಾವುದೇ ಅಪಘಾತ ಆಗಬಾರದು ಅನ್ನೋ ನಿಟ್ಟಿನಲ್ಲಿ ಅನೇಕ ನಿಯಮಗಳು ಕಾರ್ಯಕ್ರಮಗಳು, ಸುರಕ್ಷಾ ನಾಟಕಗಳು ಮಾಡುತ್ತಿದ್ದೆವೆ ಮತ್ತು ಇದೇ ಮೊದಲ ಬಾರಿಗೆ ಕಾರ್ಮಿಕರ ಇಡಿ ಕುಟುಂಬದವರಿಗೆ ಕಾರ್ಯಕ್ರಮಕ್ಕೆ ಕರೆಸಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸುರಕ್ಷಾ ಸ್ಟಾರ್ ಅವಾರ್ಡ್ ವಿಜೇತರಾದ ರವಿ ಕೋಳಕೂರ, ಪ್ರಕಾಶ್ ತೆಲ್ಲೂರ್, ಗಣಪತ್ ಚವ್ಹಾಣ, ರಾಕೇಶ್ ಕುಮಾರ್ ಮೀಸ್ರಾ, ನಿರಂಜನ ಪ್ರಸಾದ್ ಮತ್ತು ಅಜೇಯ ಕುಮಾರ್ ಆರು ಜನ ಕಾರ್ಮಿಕರಿಗೆ ಗೋಲ್ಡನ್ ಹೆಲ್ಮೆಟ್, ಪ್ರಶಸ್ತಿ ಪತ್ರ ಮತ್ತು ಕ್ರಾಸ್ ಹೆಲ್ಮೆಟ್ ಟಿವಿ, ಸೈಕಲ್, ಫ್ರಿಜ್ ಗಳನ್ನು ಕೊಟ್ಟು ಸನ್ಮಾನಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮ್ಯಾನೇಜರ್ ಹಾಗೂ ಸಂಚಲನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಕಾಶಿನಾಥ್ ಹಿಂದಿನಕೇರಿ ಅವರು ಗೋಲ್ಡನ್ ಸ್ಟಾರ್ ಅವಾರ್ಡ್ ಪಡೆಯಬೇಕಾದರೆ ಎಷ್ಟೆಲ್ಲಾ ಲಿಖಿತ ಪರೀಕ್ಷೆಗಳು, ಮೌಕಿಕ ಪರೀಕ್ಷೆಗಳು ಅವರು ಪಟ್ಟ ಪರಿಶ್ರಮ ನಡೆದು ಬಂದ ದಾರಿ ಕುರಿತು ವಿಸ್ತಾರವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕಾರ್ಖಾನೆಯ ಮುಖ್ಯ ಕಾರ್ಯನಿರ್ವಾಹಕ ಪವನ್ ಗಾಂಧಿ, ವಾಡಿ ವಿದ್ಯುತ್ ಕಾರ್ಖಾನೆಯ ಮುಖ್ಯಸ್ಥರಾದ ಸಮರ್ಪನ್ ಧವನ್, ಸುರಕ್ಷಾ ಮುಖ್ಯಸ್ಥರಾದ ಮಹಮ್ಮದ್ ಸಲ್ಲಾವುದ್ದೀನ್
ಅಧಿಕಾರಿಗಳಾದ ಸುರೇಶ್ ಶೆಟ್ಟಿ, ಸಂಜೆಯ ಸಿಂಗ್, ಸುರೇಶ್ ಕುಮಾರ್, ನವೀನ್ ಕುಮಾರ್, ಸೈಯದ್ ಜಾಫರ್, ಶೇಕ್ ಅನ್ವರ್ ಪಾಷಾ, ಮಹಮ್ಮದ್ ಖಾಲೀದ್ ಹಾಗೂ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here