ಕರ್ಮಕ್ಕೆ ಎಲ್ಲರ ವಿಳಾಸ ಗೊತ್ತು; ಮಾಣಿಕ ನಾಗೊಂಡ

0
93

ಕಲಬುರಗಿ; ಕರ್ಮಕ್ಕೆ ಎಲ್ಲರ ವಿಳಾಸ ಗೊತ್ತು ಅದು ಯಾರನ್ನು ಬಿಡುವುದಿಲ್ಲ ಅದಕ್ಕಾಗಿ ಒಳ್ಳೆಯ ಕಾರ್ಯ ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕೆಂದು ಬಾಗಲಕೋಟ ಸರ್ಕಾರಿ ಕಿರಿಯ ತಾಂತ್ರಿಕ ನಿವೃತ್ತ ಪ್ರಾಂಶುಪಾಲರಾದ ಮಾಣಿಕ ನಾಗೊಂಡ ಹೇಳಿದರು.

ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 187ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಅಧರ್ಮದ ಹಾದಿಯಲ್ಲಿ ಯಾವ ಅಡೆತಡೆಗಳು ಇರುವುದಿಲ್ಲ ಆದರೆ ಅದು ಸೇರವ ಗುರಿ ಮಾತ್ರ ನರಕ,ಧರ್ಮದ ಹಾದಿಯಲ್ಲಿ ಸಾಕಷ್ಟು ಅಡೆತಡೆಗಳು ಬರುತ್ತವೆ ಆದರೆ ಅದು ಸೇರುವ ಗುರಿ ಮಾತ್ರ ಸ್ವರ್ಗ. ನಿಸ್ವಾರ್ಥ ಸಮಾಜ ಸೇವೆ ಸ್ವರ್ಗದ ದಾರಿಗೆ ಸಮೀಪಿಸುತ್ತದೆ. ಇಂತಹ ಅಧ್ಯಾತ್ಮಿಕ ಕಾರ್ಯಕ್ರಮಗಳು ಉತ್ತಮವಾದ ಬದುಕಿಗೆ ದಾರಿ ದೀಪವಾಗುತ್ತವೆ ಎಂದು ಮಾರ್ಮಿಕವಾಗಿ ನುಡಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಯುವ ಮುಖಂಡರಾದ ಸಂತೋಷ ಪಾಟೀಲ ಹಾರಕೂಡ ಆಗಮಿಸಿದರು. ಶ್ರೀ ಮಠದ ಪೀಠಾಧಿಪತಿಗಳಾದ ಪೂಜ್ಯ ಗುರುಪಾದಲಿಂಗ ಮಹಾ ಶಿವಯೋಗಿಗಳು ನೇತೃತ್ವ ವಹಿಸಿದರು. ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ ನಿರ್ದೇಶಕರಾದ ಶರಣಬಸಪ್ಪ ಪಾಟೀಲ ಅಷ್ಟಗಿ, ಮಲ್ಲಿನಾಥ ಗುಡೇದ, ಸಂಗಮೇಶ ನಾಗೂರ, ನ್ಯಾಯವಾದಿ ಹಣಮಂತರಾಯ ಅಟ್ಟೂರ, ಶಾಮರಾಯ ಮಾಲಕ, ಸಂತೋಷ ಕಣಮುಸ, ಕವಿತಾ ದೇಗಾಂವ,ಮಾಣಿಕ ಮಿರ್ಕಲ, ರೇವಣಸಿದ್ದಯ್ಯ ಶಾಸ್ತ್ರಿ, ಶರಣು ಮಾಲಿಪಾಟೀಲ,ಶರಣು ವರನಾಳ, ಶಾಂತು ಕಲಬುರಗಿ, ಶಿವಕುಮಾರ ಸಾವಳಗಿ, ಗುರುರಾಜ ಹಸರಗುಂಡಗಿ, ಜಗನ್ನಾಥ ಸಜ್ಜನಶೆಟ್ಟಿ, ಚನ್ನವೀರ ಹಿರೇಮಠ, ಚಂದ್ರಕಾಂತ ಹಸರ ಗುಂಡಗಿ, ಮಾಣಿಕ ಗುತ್ತೇದಾರ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿದ ಪ್ರಾಂಶುಪಾಲರಾದ ಮಾಣಿಕ ನಾಗೊಂಡ ಅವರಿಗೆ ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಧನ್ಯವಾದಗಳೊಂದಿಗೆ,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here