ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನ ಡಿ.23, 24ಕ್ಕೆ

0
24

ಕಲಬುರಗಿ: ವೀರಶೈವ ಲಿಂಗಾಯತ ಸಮಾಜ ಸಂಘಟನೆಯ ಆಶಯ ಹೊತ್ತು ಡಿಸೆಂಬರ್ 23 ಮತ್ತು 24ರಂದು ಎರಡು ದಿನಗಳ ಕಾಲ ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನವನ್ನು ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಶಾಮನೂರು ಶಿವಶಂಕರಪ್ಪ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಈಶ್ವರ ಖಂಡ್ರೆಯವರ ನೇತೃತ್ವದಲ್ಲಿ ಆಯೋಜಿಸಲಾಗಿದೆ.

ಕರ್ನಾಟಕ, ಕೇರಳ,ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ, ತೆಲಂಗಾಣ, ಉತ್ತರಪ್ರದೇಶ, ಹರ್ಯಾಣ, ಪಂಜಾಬ್ ಸೇರಿ ದೇಶದ ವಿವಿಧ ಭಾಗಗಳಿಂದ ಮೂರು ಲಕ್ಷಕ್ಕೂ ಅಧಿಕ ಜನರು, ಅದರಲ್ಲಿ ಕಲಬುರಗಿ ಜಿಲ್ಲೆಯಿಂದ ಸುಮಾರು ಇಪ್ಪತ್ತು ಸಾವಿರ ಜನರು ಪಾಲ್ಗೊಳ್ಳುವರು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾದ ಶರಣಕುಮಾರ ಮೋದಿಯವರು ಪೂರ್ವ ಭಾವಿ ಸಭೆಯಲ್ಲಿ ತಿಳಿಸಿದರು.

Contact Your\'s Advertisement; 9902492681

ಅಧಿವೇಶನದ ಅಂಗವಾಗಿ ಜಿಲ್ಲೆಯ ಮಹಾಸಭಾದ ಪದಾಧಿಕಾರಿಗಳು, ಸದಸ್ಯರು ಹಾಗೂ ವೀರಶೈವ ಮುಖಂಡರ ಸಮ್ಮುಖದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಮಾಜ ಸಂಘಟನೆ, ಒಳಪಂಗಡಗಳ ಭೇದ ಮರೆತು ಒಗ್ಗಟ್ಟು ಪ್ರದರ್ಶನ, ಸಮಸ್ತ ವೀರಶೈವ ಲಿಂಗಾಯ ತರಿಗೆ ಮೀಸಲು, ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಮಹಿಳಾ ಸಬಲತೆ ಸೇರಿ ಪ್ರಮುಖ ವಿಷಯಗಳ ಕುರಿತು ಅಧಿವೇಶನದಲ್ಲಿ ಗೊತ್ತುವಳಿ ಸ್ವೀಕರಿಸಲಾಗುವುದು ಎಂದು ತಿಳಿಸಿದರು. ಮಹಿಳಾ ಗೋಷ್ಠಿ ಹಾಗೂ ವೀರಶೈವ ಲಿಂಗಾಯತರಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರಿದ್ದಾರೆ, ಹೀಗಾಗಿ ಸಮಾಜಕ್ಕೆ ಮೀಸಲು ಅಗತ್ಯವಿದೆ. ಇಡೀ ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟ ವೀರಶೈವ ಸಮಾಜ ಇಂದು ಸಾಮಾಜಿಕ ನ್ಯಾಯಕ್ಕೆ ಹೋರಾಟ ಮಾಡಬೇಕಾದ ಸ್ಥಿತಿ ಎದುರಾಗಿದೆ ಎಂದರು.

ಈ ಮಹಾ ಅಧಿವೇಶನವಕ್ಕೆ ಆಗಮಿಸುವವರು ರೂ. 500 ಕೊಟ್ಟು ಡಿಸೆಂಬರ್ 15ರೊಳಗೆ ನೋಂದಾಯಿಸಬೇಕು. ಇವರಿಗೆ ಎರಡು ದಿನಗಳ ಕಾಲ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಹಾಸಭಾದ ಜಿಲ್ಲಾ ಅಥವಾ ತಾಲೂಕು ಘಟಕಗಳನ್ನು ಸಂಪರ್ಕಿಸಿ (ಮೋ. 9916784466) ಅಥವಾ ನೇರವಾಗಿhttps#apply.veershaivamahasabha.in ಆನ್ ಮೂಲಕವೂ ನೋಂದಾಯಿಸಿಕೊಳ್ಳಬಹುದು.

ಈ ಸಂದರ್ಭದಲ್ಲಿ ಸಿದ್ದುಗೌಡ ಅಫಜಲಪುರಕರ್, ಶೀಲಾ ಮುತ್ತಿನ್, ರಾಜಶೇಖರ ಸಿರಿ, ಚಂದ್ರಶೆಟ್ಟಿ ಬಂಗಾರ, ಚಿತ್ರಶೇಖರ್ ಪಾಟೀಲ, ಸೋಮಶೇಖರ ಹಿರೇಮಠ, ಚೆನ್ನಪ್ಪ ದಿಗ್ಗಾವಿ, ಶರಣಬಸಪ್ಪ ತೆಂಗಳಿ, ಶರಣು ಪಾಟೀಲ್ ಮೋತಕಪಲ್ಲಿ, ಡಾ. ಶಂಭುಲಿಂಗ ಬಳಬಟ್ಟಿ,ಜಗದೇವ ದಿಗ್ಗಾಂವಕರ್, ವಿರೂಪಾಕ್ಷಯ್ಯ ಸ್ವಾಮಿ, ಉದಯಕುಮಾರ್ ಜೇವರ್ಗಿ, ಜ್ಯೋತಿ ಮರಗೋಳ್, ಮಲ್ಲಿನಾಥ್ ಪಾಟೀಲ್ ಕಾಳಗಿ, ರವಿ ಕೋಳಕೂರ, ಕಲ್ಯಾಣಪ್ಪ ವಾಗ್ದಾರಿ, ಜೆಕೆ ಪಾಟೀಲ್ ಹರಸೂರ, ಶರಣಬಸಪ್ಪ ಪಾಟೀಲ್, ಶಿವಕುಮಾರ್ ಕಾಳಗಿ, ಶಿವರಾಜ್ ಕೋಳಕೂರ, ಮಲ್ಲಿನಾಥ್ ಸಂ ಶೆಟ್ಟಿ,ಶಿವಾನಂದ್ ಮಠಪತಿ, ಶಿವಾನಂದ ತೊರವಿ, ಶಿವಕುಮಾರ್ ಪಾಟೀಲ್, ಶಿವರಾಜ್ ಪಾಟೀಲ್, ಸಂಗಪ್ಪ ಭೀಮಳ್ಳಿ, ಉಲ್ಲಾಸ್ ಪಾಟೀಲ್, ವಿನೋದ್ ಪಾಟೀಲ್ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here