ಗೃಹರಕ್ಷಕರು ಪೊಲೀಸ್‍ರಿಗೆ ಸಹಾಯಕರಾಗಿ ಕೆಲಸ ನಿರ್ವಹಣೆ: SP ಅಡ್ಡೂರು ಶ್ರೀನಿವಾಸುಲು

0
21

ಕಲಬುರಗಿ; ಗೃಹರಕ್ಷಕರು ಪೊಲೀಸ್‍ರಿಗೆ ಸಹಾಯಕವಾಗಿ ಕೆಲಸ ನಿರ್ವಹಿಸುತ್ತಿದ್ದು, ಯಾವುದೇ ಬಂದೋಬಸ್ತ್ ಸಂದರ್ಭದಲ್ಲಿ ಯಾರಿಗೂ ತೊಂದರೆಯಾಗದಂತೆ ಹಗಲು-ರಾತ್ರಿ, ಊಟ ನಿದ್ದೆ ಇಲ್ಲದೆ ಶಿಸ್ತಿನಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಹೇಳಿದರು.

ಬುಧವಾರ ಗೃಹ ರಕ್ಷಕ ದಳದ ಕಚೇರಿ ಮೈದಾನದಲ್ಲಿ ಜಿಲ್ಲಾ 61ನೇ ಗೃಹರಕ್ಷಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಗೃಹರಕ್ಷಕರು ಶಿಸ್ತಿನ ಸಿಪಾಯಿಗಳಾಗಿ ಗೌರವದಿಂದ ಹಾಗೂ ಸಮಾಜಕೆ ಉತ್ತಮ ರೀತಿಯ ಸೇವೆ ಮಾಡುತ್ತಿದ್ದಾರೆ ಎಂದರು.

Contact Your\'s Advertisement; 9902492681

ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ಸಂತೋಷಕುಮಾರ ಪಾಟೀಲ ಅವರು ಮಾತನಾಡಿ, ಕಳೆದ ನವಂಬರ್ ತಿಂಗಳಲ್ಲಿ ನಡೆದ ಮಧ್ಯಪ್ರದೇಶ ಚುನಾವಣೆ ನಿಯೋಜಿಸಿದ 300 ಹಾಗೂ ತೆಲಂಗಾಣ ಚುನಾವಣೆಗೆ ನಿಯೋಜಿಸಿದ 400 ಜನ ಗೃಹರಕ್ಷಕರನ್ನು ಚುನಾವಣೆಯ ಬಂದೋಬಸ್ತ್ ಕರ್ತವ್ಯದ ಸಂದರ್ಭಗಳಲ್ಲಿ ಕಲಬುರಗಿಯ ಎಲ್ಲಾ ಗೃಹರಕ್ಷಕ, ಗೃಹರಕ್ಷಕಿಯರು ಪ್ರತಿದಿನ ಹಗಲು ರಾತ್ರಿ ಎನ್ನದೆ ಜೀವದ ಭಯ ತೊರೆದು ಯಶಸ್ವಿಯಾಗಿ ಕರ್ತವ್ಯವನ್ನು ನಿರ್ವಹಿಸಿ ಜಿಲ್ಲಾಡಳಿತದ ಶ್ಲಾಘನೆಗೆ ಪಾತ್ರರಾಗಿದ್ದಾರೆ ಎಂದರು.

ಇದಲ್ಲದೇ ಹೋಳಿ ಹಬ್ಬ, ರಂಜಾನ್, ಬಕ್ರೀದ್, ಗಣೇಶ ಹಬ್ಬದ ಬಂದೋಬಸ್ತ್ ಹಾಗೂ ಪ್ರಧಾನಮಂತ್ರಿಯವರ ಮತ್ತು ಮುಖ್ಯಮಂತ್ರಿಯವರ ಬಂದೋಬಸ್ತ್ ಸಂದರ್ಭದಲ್ಲಿ ಜಿಲ್ಲೆಯ ಗೃಹರಕ್ಷಕರು ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಬೋಧಕರಾದ ಹಣಮಂತ್ರಾಯಗೌಡ ಅವರು 2023 ರ ವಾರ್ಷಿಕ ವರದಿಯನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು.

ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದ ಗೃಹರಕ್ಷಕರ ಸ್ಮರಣೆ ಮಾಡಲಾಯಿತು ಹಾಗೂ ಪ್ರತಿಜ್ಞಾ ಸ್ವೀಕಾರ ಮಾಡಿದರು.ಕಾರ್ಯಕ್ರಮದಲ್ಲಿ ನಾಗರಾಜ ಎಸ್, ಮಹೇಂದ್ರಕುಮಾರ, ಬಸವರಾಜ, ಲಕ್ಷ್ಮಣ, ಮಲ್ಲಯ್ಯ, ಶ್ರೀಮಂತ ಭೋಧಕರು, ಸಿಬ್ಬಂದಿ ವರ್ಗದವರು ಸೇರಿದಂತೆ ಜಿಲ್ಲೆಯ ಅಧಿಕಾರಿಗಳೂ ತಾಲೂಕಾ ಘಟಕಾಧಿಕಾರಿಗಳು, ಗೃಹರಕ್ಷಕ ಮತ್ತು ಗೃಹರಕ್ಷಕಿಯಯರು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿಜಯ್ ಎಂ.ಜಿ ಅವರು ಗೌರವ ವಂದನೆ ಸ್ವೀಕರಿಸಿದರು. ಚಂದ್ರಕಾಂತ ಹಾವನೂರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಕೊನೆಯಲ್ಲಿ ಲಕ್ಷ್ಮಣ್ಣ ಎಚ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here