ಜಲ ಜೀವನ್ ಮಿಷನ್ ಅಡಿ 46.98 ಲಕ್ಷ ಮನೆಗಳಿಗೆ ನಳ ಸಂಪರ್ಕ: ಸಚಿವ ಪ್ರಿಯಾಂಕ ಖರ್ಗೆ

0
24

ಬೆಳಗಾವಿ ಸುವರ್ಣ ಸೌಧ,ಡಿ.08: ರಾಜ್ಯದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಈವರೆಗೆ 46.98 ಲಕ್ಷ ಮನೆಗಳಿಗೆ ಕಾರ್ಯತ್ಮಕ ನಳ ಸಂಪರ್ಕ ಕಲ್ಪಿಸಲಾಗಿದೆ. 71.50 ಲಕ್ಷ ಗ್ರಾಮೀಣ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಶುಕ್ರವಾರ ಬೆಳಗಾವಿ ಅಧಿವೇಶನದಲ್ಲಿ ವಿಧಾನಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಕೇಶವ ಪ್ರಸಾದ್ ಎಸ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.

Contact Your\'s Advertisement; 9902492681

ರಾಜ್ಯದಲ್ಲಿ ಒಟ್ಟು 101.17 ಲಕ್ಷ ಗ್ರಾಮೀಣ ಮನೆಗಳಿವೆ. ಜಲ ಜೀವನ್ ಮಿಷನ್ ಯೋಜನೆಯಡಿ ಈವರೆಗೆ 71.50 ಲಕ್ಷ ಗ್ರಾಮೀಣ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಲಾಗಿದೆ. ಈ ಯೋಜನೆಗೆ ಈವರೆಗೆ ಕೇಂದ್ರ ಸರ್ಕಾರ ರೂ.6918.31 ಕೋಟಿ ಹಾಗೂ ರಾಜ್ಯ ಸರ್ಕಾರ ರೂ.9226.09 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಜಲ ಜೀವನ್ ಮಿಷನ್ ಕಾರ್ಯಕ್ರಮದಡಿಯಲ್ಲಿ ಸುಸ್ಥಿರ ಜಲಮೂಲವನ್ನು ಆಧರಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸದರಿ ಯೋಜನೆಯ ಕಳಪೆ ಕಾಮಗಾರಿಗಳ ದೂರುಗಳನ್ನು ಪರಿಗಣಿಸಿ, ಈ ಕಾಮಗಾರಿಗಳನ್ನು 3ನೇ ವ್ಯಕ್ತಿ ತಪಾಸಣಾ ಸಂಸ್ಥೆಯಿಂದ ಪರಿಶೀಲಿಸಲು ತೀರ್ಮಾನಿಸಲಾಗಿದೆ. ಅದರಂತೆ ಮೆ|| ಬ್ಯೂರೋ ವೆರಿಟಿಸ್ (ಇಂ) ಪ್ರೆöÊ.ಲಿ. ಸಂಸ್ಥೆಯಿಂದ 3 ನೇ ವ್ಯಕ್ತಿ ತಪಾಸಣೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ಜಲ ಜೀವನ್ ಮಿಷನ್ ಯೋಜನೆಗಾಗಿ ಬಿಡುಗಡೆ ಮಾಡಿರುವ ಅನುದಾನದ ಪೈಕಿ ಅಕ್ಟೋಬರ್-23 ರ ಅಂತ್ಯಕ್ಕೆ ರೂ.764.69 ಕೋಟಿಗಳ ಅನುದಾನ ಬಾಕಿ ಇರುತ್ತದೆ. ಸದರಿ ಅನುದಾನವನ್ನು ವಿಭಾಗಗಳ ಕೋರಿಕೆಯಂತೆ ಬಿಡುಗಡೆ ಮಾಡಿ ವೆಚ್ಚ ಭರಿಸಲು ಕ್ರಮವಹಿಸಲಾಗಿದೆ. ಯೋಜನೆಯನ್ನು ಪೂರ್ಣಗೊಳಿಸಲು ಕಾಲ ಕಾಲಕ್ಕೆ ಪ್ರಗತಿ ಪರಿಶೀಲನಾ ಸಭೆಗಳನ್ನು ಆಯೋಜಿಸಿ ಕಾಮಗಾರಿಗಳ ಪ್ರಗತಿಯ ಹಂತವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here