ಸುರಪುರ:ರಾಷ್ಟ್ರೀಯ ಲೋಕ ಅದಾಲತ್ 483 ಪ್ರಕರಣಗಳ ಇತ್ಯರ್ಥ

0
7

ಸುರಪುರ: ನಗರದ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಯಿತು.ಲೋಕ ಅದಾಲತ್ ಅಂಗವಾಗಿ ಮೂರು ಕಡೆಗಳಲ್ಲಿ ಪ್ರಕರಣಗಳ ವಿಚಾರಣೆ ನಡೆಸಲಾಯಿತು.ಹಿರಿಯ ದಿವಾಣಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ,ದಿವಾಣಿ ನ್ಯಾಯಾಧೀಶರಾದ ಮಾರುತಿ ಕೆ ಹಾಗೂ ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಬಸವರಾಜ ಅವರು ಪ್ರತ್ಯೇಕ ಬೆಂಚ್‍ಗಳಲ್ಲಿ ಪ್ರಕರಣಗಳ ಇತ್ಯರ್ಥ ನಡೆಸಲಾಯಿತು.

ಮೂವರು ನ್ಯಾಯಾಧೀಶರ ಬೆಂಚ್‍ಗಳಿಗೆ ಒಟ್ಟು 1705 ಪ್ರಕರಣಗಳ ಅರ್ಜಿ ಸಲ್ಲಿಕೆಯಾಗಿದ್ದವು,ಅವುಗಳಲ್ಲಿ ಒಟ್ಟು 483 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

Contact Your\'s Advertisement; 9902492681

ಈ ಪ್ರಕರಣಗಳಿಂದ ಒಟ್ಟು 1,70,85,910 ರೂಪಾಯಿಗಳನ್ನು ಕೊಡಿಸಲಾಯಿತು.ಇಡೀ ದಿನ ನಡೆದ ಪ್ರಕರಣಗಳ ಸಂಧಾನ ಸಮಯದಲ್ಲಿ ಮೂರು ಜೋಡಿ ದಂಪತಿಗಳು ಕಾರಣಾಂತರಗಳಿಂದ ದೂರವಾಗಿದ್ದು ದಂಪತಿಗಳೊಂದಿಗೆ ಸಮಾಲೋಚನೆ ನಡೆಸಿ ದಂಪತಿಗಳನ್ನು ಒಂದುಗೊಳಿಸಿರುವುದು ರಾಷ್ಟ್ರೀಯ ಲೋಕ ಅದಾಲತ್‍ನ ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಸಂಧಾನಕಾರ ವಕೀಲರಾಗಿ ಯಲ್ಲಪ್ಪ ಹುಲಿಕಲ್,ಬಲಭೀಮ ನಾಯಕ,ಸಂಗಣ್ಣ ಬಡಿಗೇರ ಭಾಗವಹಿಸಿದ್ದರು.ಲೋಕ ಅದಾಲತ್‍ನಲ್ಲಿ ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ ಸೇರಿದಂತೆ ಅನೇಕ ಜನ ವಕೀಲರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here