ಅಂಚೆ ಇಲಾಖೆ ತುಂಬಾ ಉತ್ತಮವಾಗಿ ಕೆಲಸ ಮಾಡುತ್ತಿದೆ; ಆರ್.ಕೆ ನಾಯಕ

0
6

ಸುರಪುರ: ತಾಲೂಕಿನಲ್ಲಿ ಅಂಚೆ ಇಲಾಖೆ ತುಂಬಾ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಮಾತನಾಡಿದರು.

ನಗರದ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ನಡೆದ ಅಂಚೆ ಇಲಾಖೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಅಂಚೆ ಇಲಾಖೆ ಇತಿಹಾಸ ಕಾಲ ದಿಂದಲೂ ಜನರ ಮನೆ ಬಾಗಿಲಿಗೆ ತನ್ನ ಸೇವೆಯನ್ನು ಸಲ್ಲಿಸುತ್ತಿದ್ದು ಈ ಇಲಾಖೆ ಇನ್ನೂ ಬೆಳೆಯಬೇಕು,ನನ್ನ ಮಗಳ ಹೆಸರಲ್ಲೂ ಕೂಡ ಸುಕನ್ಯ ಸಮೃಧ್ಧಿ ಯೋಜನೆ ಆರಂಭಿಸಿರುವುದು ತುಂಬಾ ಖುಷಿಯಾಗಿದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯಾದಗಿರಿ ವಿಭಾಗದ ಅಂಚೆ ಅಧೀಕ್ಷಕ ಶಿವಾನಂದ ಆರ್.ಹೆಚ್ ಮಾತನಾಡಿ,ಅಂಚೆ ಇಲಾಖೆ ಎಂದರೆ ಇದು ಜನರ ಒಡನಾಡಿಯಾಗಿರುವ ಇಲಾಖೆಯಾಗಿದೆ,1884ರಲ್ಲಿ ಆರಂಭಗೊಂಡಿದ್ದು ಹಿಂದೆ ಯಾವುದೇ ಮೊಬೈಲ್,ವಾಟ್ಸಾಪ್‍ನಂತ ಯಾವುದೇ ಸಾಧನಗಳು ಇಲ್ಲದ ಸಂದರ್ಭ ದಿಂದ ಇಂದಿನವರೆಗೂ ತನ್ನ ಸೇವೆಯನ್ನು ಅದೇರೀತಿಯಾಗಿ ಮುಂದುವರೆಸಿಕೊಂಡು ಬರುತ್ತಿರುವ ನಮ್ಮ ಇಲಾಖೆ ಪ್ರತಿ ಭಾರತೀಯನಿಗೂ ಸೇವೆ ನೀಡಿದೆ,ದೇಶದಲ್ಲಿ 1 ಲಕ್ಷದ 60 ಸಾವಿರದಷ್ಟು ಅಂಚೆ ಕಚೇರಿಗಳು ಸೇವೆ ಸಲ್ಲಿಸುತ್ತವೆ,ಹಿಂದೆ ಇದ್ದುದ್ದಕ್ಕಿಂತಲೂ ಈಗ ಆನ್‍ಲೈನ್ ವ್ಯವಸ್ಥೆ ಜಾರಿಗೊಂಡಿದ್ದರಿಂದ ಪ್ರತಿ ಗ್ರಾಹಕರಿಗೂ ಶೀಘ್ರದಲ್ಲಿ ಸೇವೆ ನೀಡಲು ಸಾಧ್ಯವಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸುರಪುರ ಎಮ್.ಡಿ.ಜಿ ಪೋಸ್ಟ್ ಮಾಸ್ಟರ್ ಕುಪೇಂದ್ರ ವಠಾರ್ ಮಾತನಾಡಿ,ಅಂಚೆ ಇಲಾಖೆ ಎಂದರೆ ಪ್ರಾಮಾಣಿಕತೆ,ಪ್ರಾಮಾಣಿಕತೆ ಎಂದರೆ ಅಂಚೆ ಇಲಾಖೆ ಎನ್ನುವುದು ಜನರ ನಂಬಿಕೆಯಾಗಿದೆ,ತಾಲೂಕಿನಲ್ಲಿ 268 ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ,ಹಿಂದಿಗಿಂತಲೂ ಈಗ 160ಕ್ಕೂ ಹೆಚ್ಚು ಸೇವೆಗಳು ಅಂಚೆ ಇಲಾಖೆ ಅಡಿಯಲ್ಲಿ ಲಭ್ಯವಿವೆ,ಉಳಿತಾಯ ಖಾತೆ,ವಿಮಾ ಸೌಲಭ್ಯ,ನಗದು ವರ್ಗಾವಣೆ ಸೌಲಭ್ಯ,ಸುಕನ್ಯ ಸಮೃದ್ಧಿ,ಮಹಿಳಾ ಸಮ್ಮಾನ್,ಆಧಾರ್,ಪತ್ರ ವ್ಯವಹಾರ,ಸ್ಪೀಡ್ ಪೋಸ್ಟ್ ಹೀಗೆ ಹೇಳುತ್ತಾ ಹೋದರೆ ಮುಗಿಯದಷ್ಟು ಯೋಜನೆಗಳಿಗೆ,ಈಗ ಎ.ಟಿ.ಎಮ್ ಯೋಜನೆಯೂ ಆರಂಭಗೊಂಡಿದ್ದು ಅಂಚೆ ಎ.ಟಿ.ಎಮ್ ಕಾರ್ಡ್‍ನಿಂದ ಯಾವುದೇ ಬ್ಯಾಂಕ್ ಎ.ಟಿ.ಎಮ್ ಮಷೀನ್ ಮೂಲಕ ಹಣ ಪಡೆಯುವ ಸೌಲಭ್ಯ ಇಂತಹ ಅನೇಕ ಯೋಜನೆಗಳಿದ್ದು ಅವುಗಳನ್ನು ಜನರಿಗೆ ತಲುಪಿಸಿ ಸೇವೆ ನೀಡುವ ಉದ್ಧೇಶ ದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಉತ್ತಮ ಸೇವೆ ನೀಡಿದ ಪ್ರತಿನಿಧಿಗಳಾದ ಪ್ರಭುಗೌಡ ಬೈಚಬಾಳ,ಅಮರೆಗೌಡ ಶೆಳ್ಳಗಿ ಹಾಗೂ ಅಂಜಲಿ ಪೇಠ ಅಮ್ಮಾಪುರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಚೆ ನಿರೀಕ್ಷಕ ಗೋಪಾಲಕೃಷ್ಣ ಜಲ್ಲಾ,ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ,ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ,ಅಂಚೆ ಪ್ರತಿನಿಧಿ ಮಹೇಂದ್ರ ಅಂಗಡಿ,ಗ್ರಾಹಕಿ ಶಕುಂತಲಾ ಜಾಲವಾದಿ ಸೇರಿ ಇತರರು ಮಾತನಾಡಿದರು.

ವೇದಿಕೆಯಲ್ಲಿ ಹಿರಿಯ ಸಾಹಿತಿ ವೈದ್ಯ ಸತ್ಯನಾರಾಯಣ ಅಲದರ್ತಿ,ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದಯ್ಯ ಪಾಟೀಲ್ ಉಪಸ್ಥಿತರಿದ್ದರು.ತಾಲೂಕಿನ ವಿವಿಧ ಗ್ರಾಮೀಣ ಅಂಚೆ ಪ್ರತಿನಿಧಿಗಳು,ಅನೇಕ ಜನ ಗ್ರಾಹಕರು ಭಾಗವಹಿಸಿದ್ದರು.ಪೋಸ್ಟ್ ಮಾಸ್ಟರ್ ಕುಪೇಂದ್ರ ವಠಾರ್ ಕಾರ್ಯಕ್ರಮಕ್ಕೆ ಸ್ವಾಗತಿಸಿ,ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here