ಜೈನ ಧರ್ಮದ ವಿಚಾರಗಳು ಸಮಾಜಕ್ಕೆ ಹೊಸ ದಿಕ್ಕನ್ನು ತೋರಬಲ್ಲವು; ರಾಜ್ಯಪಾಲ ಥಾವರಚಂದ ಗೆಹ್ಲೋಟ್

0
16

ಕಲಬುರಗಿ: ಸಮಾಜದಲ್ಲಿ ಇಂದು ಕಾಣುತ್ತಿರುವ ಅಶಾಂತಿಯ ವಾತಾವರಣ ಸಂಪೂರ್ಣ ತೊಲಗಿ ಶಾಂತಿಯ ಸಮಾಜ ನಿರ್ಮಾಣ ಮಾಡುವುದು ಅತ್ಯಗತ್ಯವಾಗಿದ್ದು ಈ ದಿಶೆಯಲ್ಲಿ ಜೈನ ಧರ್ಮದ ವಿಚಾರಗಳು ಸಮಾಜಕ್ಕೆ ಹೊಸ ದಿಕ್ಕನ್ನು ತೋರಬಲ್ಲವು ಎಂದು ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್ ರವರು ನುಡಿದರು.

ಬೆಳಗಾವಿ ತಾಲೂಕಿನ ಸುಕ್ಷೇತ್ರ ಹಲಗಾ ಗ್ರಾಮದ ಬಾಲಾಚಾರ್ಯ ಪರಮಪೂಜ್ಯ ಶ್ರೀ 108 ಸಿದ್ಧಸೇನ ಮುನಿ ಮಹಾರಾಜ ಆಧ್ಯಾತ್ಮಿಕ ಅನುಸಂಧಾನ ಫೌಂಡೇಶನ್  ವತಿಯಿಂದ ಆಯೋಜಿಸಲಾದ ಶ್ರೀ 1008 ಭಗವಾನ ಮಹಾವೀರ ತೀರ್ಥಂಕರರ 2550 ನೇ ನಿರ್ವಾಣ ಮಹಾಮಹೋತ್ಸವ ಪರಮಪೂಜ್ಯ ಆಚಾರ್ಯ ರತ್ನ ಶ್ರೀ 108 ಬಾಹುಬಲಿ ಮುನಿ ಮಹಾರಾಜರ 92ನೇ ಜನ್ಮ ಜಯಂತಿ ಮಹೋತ್ಸವ ಮತ್ತು ಬಾಲಾಚಾರ್ಯ ಪರಮಪೂಜ್ಯ ಶ್ರೀ 108 ಸಿದ್ಧಸೇನ ಮುನಿ ಮಹಾರಾಜರ ರಜತ (25ನೇ) ದೀಕ್ಷಾ ಮಹೋತ್ಸವ ಹಾಗೂ ನಾಡಿನ ಸಾಧಕರಿಗೆ ಭಗವಾನ ಶ್ರೀ ಮಹಾವೀರ ಪ್ರಶಸ್ತಿ ಪ್ರದಾನ ಸಮಾರಂಭವು ಅತ್ಯಂತ ವೈಭವದಿಂದ ಜರುಗಿತು.

Contact Your\'s Advertisement; 9902492681

ಬಾಲಾಚಾರ್ಯ ಪರಮಪೂಜ್ಯ ಶ್ರೀ 108 ಸಿದ್ಧಸೇನ ಮುನಿ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಸಮಾರಂಭ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ಅಹಿಂಸೆ, ಪ್ರೇಮ, ವಾತ್ಸಲ್ಯದ ಮೂಲಕ ಮನುಷ್ಯ ನೆಮ್ಮದಿಯ ಬದುಕು ಕಟ್ಟಿಕೊಳ್ಳುವುದು ಇಂದಿನ ಜರೂರಾಗಿದ್ದು ಆದರೆ ಯುದ್ಧ, ಭಯೋತ್ಪಾದನೆ, ಪರಸ್ಪರ ಹಗೆತನ ಹರಡುತ್ತಿರುವುದು ಆತಂಕದ ವಿಷಯವಾಗಿದ್ದು ಜೈನ ಧರ್ಮದ ತೀರ್ಥಂಕರರು ಮನುಷ್ಯ ಬದುಕಿನ ಘನತೆ ಮತ್ತು ಮೌಲ್ಯಗಳನ್ನು ಸಾರಿದ್ದು ಅವು ಸರ್ವ ಕಾಲಿಕವೂ ಶ್ರೇಷ್ಠವಾಗಿದೆ ಎಂದು ರಾಜ್ಯಪಾಲರು ಮಾರ್ಮಿಕವಾಗಿ ನುಡಿದರು.

ಸಮಾಜದ ಸೇವಾ ಕಾರ್ಯಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹಿಸುತ್ತಿರುವುದು ಅತ್ಯಂತ ಉತ್ತಮವಾದ ಬೆಳವಣಿಗೆ ಯಾಗಿದ್ದು, ಸಾಧಕರು ಸಮಾಜದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧರಾಗಿ ಕೆಲಸ ನಿರ್ವಹಿಸುವಂತೆ ಕಿವಿ ಮಾತು ಹೇಳಿದರು.

ಜೈನ ಸಮಾಜ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ನಿಕಟಪೂರ್ವ ರಾಜ್ಯ ನಿರ್ದೇಶಕರಾದ ಮತ್ತು ಶ್ರೀ 1008 ಭಗವಾನ ಆದಿನಾಥ ಸೇವಾ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸುರೇಶ ಎಸ್. ತಂಗಾ ರವರಿಗೆ ಭಗವಾನ ಶ್ರೀ ಮಹಾವೀರ ಪ್ರಶಸ್ತಿ ಪ್ರದಾನ ಮಾಡಿ ಸತ್ಕರಿಸಲಾಯಿತು.

ನವದೆಹಲಿಯ ಅಹಿಂಸಾ ವಿಶ್ವಭಾರತಿಯ ಸಂಸ್ಥಾಪಕ ಅಧ್ಯಕ್ಷರಾದ ಆಚಾರ್ಯ ಡಾ. ಲೋಕೇಶ ಮುನಿ ನೇತೃತ್ವ ವಹಿಸಿದ್ದರು. ರಾಜ್ಯದ ಯೋಜನಾ ಮತ್ತು ಸಾಂಖ್ಯಿಕ ಖಾತೆ ಸಚಿವರಾದ ಡಿ.ಸುಧಾಕರ, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ ಪಾಟೀಲ, ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತುಮೂಡ ರವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಮುನಿ ಮಹಾರಾಜರು ಸೇರಿದಂತೆ ಜೈನ ಸಮಾಜದ ಸಾವಿರಾರು ಬಂಧು-ಭಗಿನಿಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here