ಸರಕಾರಿ ಅಂಧ ಹಾಸ್ಟಲ್ ವಾರ್ಡನ್ ಗೆ ಕೊಲೆ ಬೆದರಿಕೆ ಹಾಕಿದ ಅಧ್ಯಕ್ಷನ ವಿರುದ್ಧ ಪ್ರಕರಣ ದಾಖಲು

0
480

ಕಲಬುರಗಿ: ಐವನ್ ಶಾಹಿ ಪ್ರದೇಶದಲ್ಲಿ ಇರುವ ಸರಕಾರಿ ಅಂಧ ಬಾಲಕರ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಹಾಗೂ ಹಾಸ್ಟಲ್ ವಾರ್ಡನ್ ಗೆ ಅವ್ಯಚ್ಚ ಶಬ್ದಗಳಿಂದ ನಿಂದಿಸಿ ಕೊಲೆ ಬೇದರಿಕೆ ಒಡ್ಡಿದ ವಿಕಲಚೇತನರ ನಗರ ಪುನವ೯ಸತಿ ಕಾಯ೯ಕತ೯ ಹಾಗೂ ಸಂಘದ ಸಂಸ್ಥಾಪಕ ಅಧ್ಯಕ್ಷ ಸೇರಿ ಇಬ್ಬರ ವಿರುದ್ಧ ಕೊನೆಗೂ ನಗರದ ಸ್ಟೇಸನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗವಿಕಲ ಇಲಾಖೆಯಲ್ಲಿ ಗೌರವಧನ ಆಧಾರದ ಮೇಲೆ ಕಾಯ೯ನಿವ೯ಹಿಸುತ್ತಿರುವ ವಿಕಲಚೇತನರ ನಗರ ಪುನವ೯ಸತಿ ಕಾಯ೯ಕತ೯ ಹಾಗೂ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿರುವ ಅಂಬಾಜಿ ಮೇಟಿ ಮತ್ತು ದತ್ತಾತ್ರೇಯ ಕುಡಕಿ ಅವರ ಮೇಲೆ ಪ್ರಕರಣ ದಾಖಲಾಗಿದೆ.

Contact Your\'s Advertisement; 9902492681

ನಾಲ್ವರು ಅಮಾಯಕ ಬಾಲಕರ ಭವಿಷ್ಯ ಹಾಳು ಮಾಡುತ್ತಿರಾ ಎಂದು ಆರೋಪಿಸಿ ಸೋಮವಾರ ಶಾಲೆಯ ಅಂಧ ಹಾಸ್ಟೆಲ್ ವಾರ್ಡನ್ ಎಸ್.ಜಗದೀಶ್ ನಾಯಕ ಮತ್ತು ದೈಹಿಕ ಶಿಕ್ಷಕ ಪ್ರಕಾಶ ಭಜಂತ್ರಿಗೆ ಎಲ್ಲರ ಸಮ್ಮುಖದಲ್ಲಿ ಅವ್ಯಚ್ಚ ಪದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದಲ್ಲದೇ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ 194/2023 ಕಲಂ 504,506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here