ಸುರಪುರ: ನಗರದ ಗರುಡಾದ್ರಿ ಕಲಾಮಂದಿರದಲ್ಲಿ 31 ವಾರ್ಡ್ ಗಳಿಂದ ವಾಲ್ಮೀಕಿ ನಾಯಕ ಸಮಾಜ ಬಾಂಧವರು ಸಭೆಯಲ್ಲಿ ಭಾಗವಹಿಸಿ, ಪ್ರತಿಯೊಂದು ವಾರ್ಡಿನಿಂದ ಒಬ್ಬೊಬ್ಬ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಯಿತು.
ನಂತರ ನಗರ ಸಮಿತಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮತ್ತು ನಗರ ಘಟಕದ ರೂಪರೇಷೆಗಳ ಬಗ್ಗೆ ಸಾಕಷ್ಟು ಮುಖಂಡರು ಮಾತನಾಡಿದರು, ಸಂಘವನ್ನು ನಗರದಲ್ಲಿ ಅತಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ತಾಲೂಕ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ಗಂಗಾಧರ್ ನಾಯಕ ತಿಂಥಣಿ ಹೇಳಿದರು
ನಂತರ ಆಯ್ಕೆಯಾದ ಎಲ್ಲಾ ಸದಸ್ಯರು ಒಂದು ಕಡೆ ಸೇರಿಸಿ ಹುದ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಹೇಳಿದ ನಂತರ ಮುಕ್ತವಾಗಿ ಚರ್ಚೆ ಮಾಡಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು
ಸುರಪುರ ನಗರ ವಾಲ್ಮೀಕಿ ನಾಯಕ ಸಂಘದ ಪದಾಧಿಕಾರಿಗಳು: ಗೌರವಾಧ್ಯಕ್ಷರು ಹುಲುಗಪ್ಪ ಪೂಜಾರಿ ಭೋವಿಗಲ್ಲಿ, ಅಧ್ಯಕ್ಷರು ರಾಜ ಮುಕುಂದ ನಾಯಕ,ಉಪಾಧ್ಯಕ್ಷರು ರಾಜಾ ಪಿಡ್ಡ ನಾಯಕ, ವಿಜಯಕುಮಾರ್ ವೈ ನಾಯಕ್ ಚಿಟ್ಟಿ,ಕಾರ್ಯಧ್ಯಕ್ಷರು ದತ್ತಾತ್ರಯ ನಾಯಕ್,ಪ್ರಧಾನ ಕಾರ್ಯದರ್ಶಿಗಳು ಬಲ ಭೀಮ ನಾಯಕ್ ಕಬಡಗೇರ,ಸಹ ಕಾರ್ಯದರ್ಶಿಗಳು ದುರಗಪ್ಪ ಡೋಣ್ಣೆಗೆರೆ,ಖಜಾಂಚ ಹಣಮಯ್ಯ ಕಬಾಡಗೇರ,ಸಹ ಖಜಾಂಚಿ ವೆಂಕಟೇಶ್ ಗುಡ್ಡಕಾಯಿ ಕುಂಬಾರಪೇಟ್,ಸಂಘಟನಾ ಕಾರ್ಯದರ್ಶಿ ಪರಶುರಾಮ ನಾಯಕ್ ಗುಡಾಳಕೇರಿ,ಕಾನೂನು ಸಲಹೆಗಾರ ಶಶಿಧರ್ ನಾಯಕ್ ಪಡೆದಳ್ಳಿ,ಪತ್ರಿಕಾ ಸಲಹೆಗಾರರು ಲಕ್ಷ್ಮಣ್ ನಾಯಕ್ ಫ್ಯಾಪಲಿ ,ಕಾರ್ಯಕಾರಿ ಮಂಡಳಿ ಸದಸ್ಯರು ಗೋಪಾಲ್ ಸತ್ಯಂಪೇಟ್,ವೆಂಕಟೇಶ್ ಕಟ್ಟಿಮನಿ, ವಾಸು ನಾಯಕ್ ಬೈರಿಮಡ್ಡಿ,ರಾಜಶೇಖರ್ ತಿಮ್ಮಾಪುರ್, ಹನುಮಂತ ವೆಂಕಟಾಪುರ್,ರವಿಕುಮಾರ್ ಬೈರಿಮಡ್ಡಿ .
ಈ ಸಂದರ್ಭದಲ್ಲಿ ತಾಲೂಕ ವಾಲ್ಮೀಕಿ ನಾಯಕ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ವಿವಿಧ ವಾರ್ಡುಗಳಿಂದ ಆಗಮಿಸಿದ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಯುವಕರು ಭಾಗವಹಿಸಿದ್ದರು.