ಹತ್ತನೆ ತರಗತಿ ಪರೀಕ್ಷೆ ಬಗ್ಗೆ ಯಾವುದೇ ಭಯ ಬೇಡ; ಬಿಇಓ ಯಲ್ಲಪ್ಪ ಕಾಡ್ಲೂರ

0
12

ಸುರಪುರ: ಹತ್ತನೇ ತರಗತಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಭಯಪಡಬೇಡಿ,ಅದನ್ನು ದೂರಗೊಳಿಸಲೆಂದು ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ತಿಳಿಸಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ,ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ನಂದೀಶ್ವರ ನೈಪುಣ್ಯ ಕೌಶಲ್ಯ ಸಂಸ್ಥೆ ರಾಣೆಬೆನ್ನೂರ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 10ನೇ ತರಗತಿ ಮಕ್ಕಳಿಗೆ ಪರೀಕ್ಷಾ ಭಯ ನಿವಾರಣೆ ಮತ್ತು ಮನೋಬಲ ಹೆಚ್ಚಿಸುವ ಸಲುವಾಗಿ ವಿಶೇಷ ನೈಪುಣ್ಯ ಕೌಶಲ್ಯ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ,ಪರೀಕ್ಷೆಗೆ ಇನ್ನೂ 80 ದಿನಗಳು ಬಾಕಿ ಇದ್ದು,ತಾವೆಲ್ಲರು ಸರಿಯಾದ ಕ್ರಮದಲ್ಲಿ ಅಭ್ಯಾಸ ಮಾಡಿದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭವಾಗಿದೆ ಎಂದರು.ಕಳೆದ ವರ್ಷದ ಫಲಿತಾಂಶದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ನಮ್ಮ ಸುರಪುರ ತಾಲೂಕು ಮೊದಲ ಸ್ಥಾನದಲ್ಲಿತ್ತು,ಈಬಾರಿಯು ಮೊದಲ ಸ್ಥಾನದಲ್ಲಿಯೇ ಇರಬೇಕು ಅದಕ್ಕಾಗಿ ತಾವೆಲ್ಲರು ಉತ್ತಮ ಅಂಕಗಳೊಂದಿಗೆ ಪಾಸಾಗಬೇಕು ಎಂದು ಕಿವಿಮಾತು ಹೇಳಿದರು.

Contact Your\'s Advertisement; 9902492681

ನಂತರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ನಂದೀಶ ಬಿ.ಶೆಟ್ಟರ್ ರಾಣೆಬೆನ್ನೂರ ಅವರು ವಿದ್ಯಾರ್ಥಿಗಳು ಹತ್ತನೇ ತರಗತಿ ಪರೀಕ್ಷೆ ಹೇಗೆ ಬರೆಯಬೇಕು,ಅದಕ್ಕೆ ಮಾಡಿಕೊಳ್ಳಬೇಕಾದ ತಯಾರಿ ಹೇಗಿರಬೇಕು,ಯಾವ ಸಮಯದಲ್ಲಿ ಓದಬೇಕು,ಹೇಗೆ ಓದಬೇಕು,ಅಧ್ಯಯನ ಸೂತ್ರಗಳು,ಪರೀಕ್ಷೆಯನ್ನು ಹೆದರಿಸುವುದು ಹೇಗೆ,ಒಬ್ಬ ವಿದ್ಯಾರ್ಥಿ ಇಡೀ ವರ್ಷ ಓದಿದ್ದನ್ನು ಮೂರು ಗಂಟೆಗಳ ಪರೀಕ್ಷೆಯಲ್ಲಿ ಹೇಗೆ ಬರೆಯಬೇಕು ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು.ಸುಮಾರು ಎರಡು ಗಂಟೆಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಇನ್ನೂ ಅನೇಕ ವಿಷಯಗಳ ಕುರಿತು ತಿಳಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ ನಿಂಬೂರ,ಬಿ.ಆರ್.ಪಿ ಖಾದರ್ ಪಟೇಲ್, ಬಿಇಓ ಕಚೇರಿ ವ್ಯವಸ್ಥಾಪಕ ಜಗದೀಶ್ಚಂದ್ರ,ಇ.ಸಿ.ಓ ಗಳಾದ ಬಸವರಾಜ,ಸಣ್ಣ ಹಣಮಂತ ವೇದಿಕೆಯಲ್ಲಿದ್ದರು.ಶಿಕ್ಷಕ ಸಿದ್ದಣ್ಣ ಹೊಸಗೌಡರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಸಿ ವಂದಿಸಿದರು.ನಗರದ ಸುಮಾರು 15ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here