ಶಹಾಬಾದ : ಕಾಗಿನೆಲೆ ಮಹಾಸಂಸ್ಥಾನದ ಪೂಜ್ಯರಾದ ಲಿಂಗಬೀರದೇವರು ನೇತೃತ್ವದಲ್ಲಿ ಮತ್ತು ಗೊಂಡ ಕುರುಬ ಹೋರಾಟ ಸಮಿತಿ ಅಡಿಯಲ್ಲಿ ಮಂಗಳವಾರ ತಾಲೂಕು ಮಟ್ಟದ ಕುರುಬರಿಗೆ ಎಸ್ಟಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಾಲೂಕು ತಹಸೀಲ್ದಾರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮತ್ತು ಕೇಂದ್ರ ಗೃಹ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ರಾಜ್ಯದಲ್ಲಿನ ಕುರುಬ ಸಮುದಾಯವನ್ನು ಎಸ್.ಟಿ ಮೀಸಲಾತಿಗೆ ಸೇರಿಸಲು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದಕ್ಕೆ ಕುರುಬರ ಸಂಘದ ಹಾಗೂ ಕುರುಬ ಎಸ್ಟಿ ಹೋರಾಟ ಸಮಿತಿಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಈವರೆಗೆ ಕೇವಲ ಕುರುಬರಿಗೆ ಮಾತ್ರ ಎಸ್ಟಿ ಮೀಸಲಾತಿ ಇತ್ತು. ಗೊಂಡ ಕುರುಬ ಸಮುದಾಯಕ್ಕೂ ಎಸ್.ಟಿ, ಮೀಸಲಾತಿ ಕಲ್ಪಿಸಬೇಕು ಎಂದು ಸಮಯದಾಯದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಮಾರ್ಗದರ್ಶನದೊಂದಿಗೆ, 2015ರಿಂದ ನಿರಂತರವಾದ ಹೋರಾಟ, ಸಮಾವೇಶ, ಧರಣಿಗಳ ಮೂಲಕ ಅಂದಿನ ಕಾಂಗ್ರೇಸ್ ಮತ್ತು ಸಮ್ಮಿಶ್ರ ಸರ್ಕಾರಕ್ಕೆ ಮನವಿ ಮಾಡಿ ಒತ್ತಾಯಿಸಿತ್ತು.
ಸಮ್ಮಿಶ್ರ ಸರ್ಕಾರದಲ್ಲಿ ಕುರುಬರ ಎಸ್. ಟಿ. ಮೀಸಲಾತಿಗಾಗಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶ ನೀಡಲಾಗಿತ್ತು. 2019ರಿಂದ ರಾಜ್ಯದ 25 ಜಿಲ್ಲೆಗಳಲ್ಲಿ ನಡೆದ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಳೆದ ಮಾರ್ಚ್ ನಲ್ಲಿ ನಡೆದ ಸಚಿವ ಸಂಪುಟದಲ್ಲಿ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸರ್ಕಾರಿ ಆದೇಶ ಮಾಡಿದ್ದರು.
ಆ ಆದೇಶವನ್ನು ಕರ್ನಾಟಕ ಸರ್ಕಾರವು, ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಮೂಲತಃ ಬುಡಕಟ್ಟು ಸಮುದಾಯವಾಗಿರುವ ಇಂದಿಗೂ ಸಹ ಬುಡಕಟ್ಟು ಸಂಸ್ಕøತಿ, ಆಚರಣೆಗಳು ಹೊಂದಿರುವಂತಹ ಕುರುಬ ಸಮುದಾಯದ ಬೇಡಿಕೆಯನ್ನು ಪರಿಗಣಿಸಿ, ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು, ಸಹಕಾರ ನೀಡಿದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಹಾಗೂ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ, ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಮುಖ್ಯ ಮಂತ್ರಿಸಿದ್ದರಾಮಯ್ಯ, ಎಸ್ಟಿ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರಿಗೆ ಧನ್ಯವಾದಗಳು ತಿಳಿಸಿದರು.
ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರದ ಶಿಫಾರಸ್ಸನ್ನು. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕರಿಸಿ, ರಾಜ್ಯದ ಎಲ್ಲಾ ಕುರುಬ ಸಮುದಾಯದ ಜನತೆಯನ್ನು ಎಸ್. ಟಿ. ಮೀಸಲಾತಿ ಪಟ್ಟಿಗೆ ಸೇರಿಸಿ, ಸಮುದಾಯಕ್ಕೆ ನ್ಯಾಯ ಒದಗಿಸಿಬೇಕೆಂದು ಪ್ರಧಾನಿ ನರೇಂದ್ರಮೋದಿಯವರಿಗೆ ಒತ್ತಾಯಿಸಿದರು.
ಕುರುಬ ಸಮಾಜದ ತಾಲೂಕಾಧ್ಯಕ್ಷ ನಿಂಗಣ್ಣ.ಎಸ್.ಪೂಜಾರಿ, ಗೊಂಡ ಕುರುಬ ಸಂಘದ ತಾಲೂಕಾಧ್ಯಕ್ಷ ಸಾಯಿಬಣ್ಣ ಕೊಲ್ಲೂರ್, ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಗುರುನಾಥ ಪೂಜಾರಿ, ಗೊಂಡ ಕುರುಬ ಎಸ್.ಟಿ ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ. ಎಸ್.ಕೌಲಗಿ, ಮಲ್ಲಿಕಾರ್ಜುನ ಪೂಜಾರಿ, ಭಗವಂತರಾಂiÀiಗೌಡ ಪಾಟೀಲ್, ಮಲ್ಕಣ್ಣ ಮುದ್ದಾ, ಬಸವರಾಜ ಮದ್ದರಕಿ,ಅಶೋಕ ದೇವರನಿ, ಸುರೇಶ ಗಿರಣಿ,ರಾಜಶೇಖರ ದೇವರಮನಿ,ಸುನೀಲ ಪೂಜಾರಿ,ಬೀರಪ್ಪ ಬೀರನೂರ್,ಸಿದ್ದಲಿಂಗ ಮರತೂರ, ನಾಗು ಕಂಠಿಕರ್, ಭೀಮಾಶಂಕರ ಕೊಡಚಿ, ವಿಜಯಕುಮಾರ ಕಂಠಿಕಾರ ಕಾರ್ಯಕರ್ತರು ಇದ್ದರು.