ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಪೌರಕಾರ್ಮಿಕರು ಧರಣಿ

0
9

ಸುರಪುರ: ಕಳೆದ ಆರು ತಿಂಗಳಿಂದ ನಗರಸಭೆಯಲ್ಲಿನ ನೇರ ಪಾವತಿ ಹಾಗೂ ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ವೇತನ ನೀಡಿಲ್ಲ,ಇದರಿಂದ ನಾವೆಲ್ಲರು ಜೀವನ ನಡೆಸುವುದು ಕಷ್ಟವಾಗಿದೆ,ಆದ್ದರಿಂದ ಧರಣಿಗೆ ಮುಂದಾಗಿದ್ದು ನಗರದಲ್ಲಿನ ಜನರು ಸಹಕರಿಸುವಂತೆ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಅದ್ಯಕ್ಷ ಜಗದೀಶ ಶಾಖನವರ್ ತಿಳಿಸಿದರು.

ನಗರಸಭೆ ಮುಂದೆ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ನೇರ ಪಾವತಿ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ಪೌರಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆರಂಭಿಸಲಾದ ಅನಿರ್ದಿಷ್ಠಾವಧಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿ,ನಮಗೆ ಕೋವಿಡ್ ಸಂದರ್ಭದಲ್ಲಿಯ ಸಂಕಷ್ಟ ಭತ್ಯೆ ನೀಡುವಂತೆ ಕಳೆದ ಎರಡು ವರ್ಷಗಳಿಂದ ವಿನಂತಿಸುತ್ತಿದ್ದರು.

Contact Your\'s Advertisement; 9902492681

ನೀಡುತ್ತಿಲ್ಲ,ಬೆಳಗಿನ ಉಪಹಾರ ನೀಡಬೇಕೆಂದು ಸರಕಾರದ ಆದೇಶವಿದ್ದರು ಇದುವರೆಗೂ ಉಪಹಾರ ನೀಡುತ್ತಿಲ್ಲ,ಗೃಹ ಭಾಗ್ಯ ಯೋಜನೆ ಅಡಿಯಲ್ಲಿ ನಗರಸಭೆಯ ಸೂಕ್ತ ಜಾಗದಲ್ಲಿ ಎಲ್ಲರಿಗೂ ಮನೆಗಳನ್ನು ನಿರ್ಮಿಸಲು ಮನವಿ ಮಾಡಿದರು ಅದಕ್ಕೆ ಇಲ್ಲಿವರೆಗೂ ಕ್ರಮವಹಿಸಿಲ್ಲ,ನಾವೆಲ್ಲ ಪೌರಕಾರ್ಮಿಕರಿಗೆ ಇ.ಎಸ್.ಐ,ಪಿ.ಎಫ್ ಹಣವನ್ನು ನೀಡಿಲ್ಲ,ಕಾರ್ಡ್‍ಗಳನ್ನು ಕೊಟ್ಟಿಲ್ಲ,ಪೌರ ಕಾರ್ಮಿಕರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು,ಮಹಿಳಾ ಪೌರಕಾರ್ಮಿಕರಿಗೆ ಸಮವಸ್ತ್ರ,ಪ್ರತ್ಯೇಕ ಆಫ್ರಾನ್ ಸಮವಸ್ತ್ರ ನೀಡಬೇಕು,ಲೋಡರ್ಸ್ ಹಾಗೂ ಕ್ಲೀನರ್ಸ್ ಎಂದು ನೇಮಕವಾದವರಿಗೆ ಕಚೇರಿ ಕೆಲಸಕ್ಕೆ ನಿಯೋಜನೆಗೊಂಡಿದ್ದು ಅವರನ್ನು ಮೂಲ ಹುದ್ದೆಗೆ ಟ್ರ್ಯಾಕ್ಟರ್ ಕೆಲಸಕ್ಕೆ ನಿಯೋಜಿಸಬೇಕು ಎಂದರು ಆಗ್ರಹಿಸಿದರು.

ನಾವು ಅನೇಕ ಬಾರಿ ಧರಣಿ ಮಾಡಿದಾಗ ನಮಗೆ ಬರೀ ಭರವಸೆ ನೀಡಿ ಧರಣಿಯನ್ನು ಅಂತ್ಯಗೊಳಿಸಿ ನಂತರ ಮತ್ತೆ ಅದೇ ರಾಗ ಹಾಡುವುದಾಗಿ ಆದ್ದರಿಂದ ಈಗ ನಾವು ಸಂಬಳವಿಲ್ಲದೆ ಬದುಕು ಬೀದಿಗೆ ಬಂದಿದೆ,ಇಡೀ ನಗರದಲ್ಲಿನ ಎಲ್ಲಾ ಕಸವನ್ನು ಕೈಯಿಂದ ತುಂಬಿ ಸ್ವಚ್ಛಗೊಳಿಸುವ ನಮಗೆ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ,ಅದಕ್ಕಾಗಿ ನಾವು ಧರಣಿ ನಡೆಸುವುದು ಅನಿವಾರ್ಯವಾಗಿದೆ,ಆದ್ದರಿಂದ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಅಲ್ಲಿವರೆಗೂ ಧರಣಿ ನಡೆಯಲಿದ್ದು,ನಗರದ ಜನತೆ ನಮಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಧರಣಿಯಲ್ಲಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಅಧ್ಯಕ್ಷ ಬಸವರಾಜ ಹುಲ್ಪೇನವರ್,ಬೀದಿ ದೀಪ ನಿರ್ವಹಣೆಗಾರರ ಸಂಘದ ಅಧ್ಯಕ್ಷ ಸಿದ್ಧಾರೂಢ ಜೇರಬಂಡಿ,ಮಹಾದೇವ ಸತ್ಯಂಪೇಟೆ, ಶರಣು, ಭೀಮರಾಯ, ಹಣಮಂತ, ಶಂಕರ, ಮಹಾಂತೇಶ, ಯಲ್ಲಪ್ಪ, ಮೋಹನ್,ಕೃಷ್ಣ,ಗೌತಮ್,ಜೀವನ್,ಮೌನೇಶ,ಅಯ್ಯಪ್ಪ,ಶೇಖರ್,ಹಣಮಂತ,ಸತೀಶ ನಾಯಕ,ಅನಿಲಕುಮಾರ ನಾಯಕ,ಶರಣಬಸವ ನಾಯಕ,ಅಯ್ಯಪ್ಪ,ದುರ್ಗಪ್ಪ,ಆಕಾಶ್ ಕಟ್ಟಿಮನಿ, ಗೋಪಾಲ, ಮಲ್ಲಿಕಾರ್ಜುನ, ವೆಂಕಟೇಶ, ಮೋಹನರಾಜ್,ರಾಘವೇಂದ್ರ,ಮಾನೇಶ ಕಟ್ಟಿಮನಿ, ಮಂಜುನಾಥ, ಆಸೀಫ್, ವಿನೋದ, ಅನ್ವರ್, ಬಸವರಾಜ, ಬೆನಕಪ್ಪ, ಬಸವರಾಜ, ನಾಗರಾಜ, ರಾಘವೇಂದ್ರ, ಲಕ್ಷ್ಮೀ, ಮರೆಮ್ಮ, ಸರಸ್ವತಿ,ಪದ್ಮ,ಲಕ್ಷ್ಮೀ ಎಮ್,ದುರ್ಗಮ್ಮ,ಯಲ್ಲಮ್ಮ,ರಿಜ್ವಾನ್,ರೇಣುಕಾ,ಭೀಮವ್ವ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here