ಕಮಲಾಪುರ; ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ವಿಶೇಷ ಉಪನ್ಯಾಸ

0
86

ಕಮಲಾಪುರ; ಇಂದಿನ ಯುವ ಜನತೆ ಸಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವ್ಯಾಟ್ಸಪ್,ಇಂನ್ಸ್ಟಾಗ್ರಾಂ ಮತ್ತಿತ್ತರ ಗಳ ಕಡೆ ಗಮನ ಕೆಂದ್ರಿಕರಿಸಿ ಸಾಹಿತ್ಯದಿಂದ ವಿಮುಖವಾಗಿ ಸಂಸ್ಕೃತಿಯನ್ನು ‌ಮರೆಯುತ್ತಿರುವುದು ವಿಷಾದನೀಯ ಎಂದು ಉಪನ್ಯಾಸಕ ಸಂಜಯ ಪಾಟೀಲ ಹೇಳಿದರು.

ತಾಲ್ಲೂಕಿನ ವಿಕೆ ಸಲಗರ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಕೆ ಸಲಗರ  ಕಸಾಪ ವಲಯ ಘಟಕದ ವತಿಯಿಂದ ಹಮ್ಮಿಕೊಂಡ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ವಿಶೇಷ ಉಪನ್ಯಾಸ ನೀಡಿದ ವಿದ್ಯಾರ್ಥಿಗಳು ಅಂಕ ಗಳಿಕೆಯ ಜೊತೆಗೆ ಉತ್ತಮ ಹಾಗೂ ಸರಳ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

Contact Your\'s Advertisement; 9902492681

ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶ ಶಿವರಾಜ ಅಂಡಗಿ ರಾಜ್ಯಾದ್ಯಕ್ಷರು ಸರ್ವರಿಗೂ ಸದಸ್ಯತ್ವ ದೊರಕಿಸಲು ಆ್ಯಪ್ ಬಿಡುಗಡೆ ಮಾಡಿದ್ದಾರೆ, ಈ‌ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಕಸಾಪ ಸದಸ್ಯತ್ವ ಪಡಡಯಬೇಕು, ಕನ್ನಡ ಭಾಷೆ ಉಳಿಸಿ ಬೆಳೆಸಲು ಶ್ರಮಿಸಬೇಕು ಎಂದರು.

ಮಾಜಿ ತಾಂ ಸದಸ್ಯ ದೀಪಕ ಸಲಗರ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶರಣಬಸ್ಸಪ್ಪ ಗುಬ್ಬನ್,‌ ಉಪನ್ಯಾಸಕ ಡಾ.ಅಜೀಜ್ ಮಾತನಾಡಿದರು. ಕಮಲಾಪುರ ತಾಲೂಕಿನ ಕಸಾಪ ಅದ್ಯಕ್ಷ ಸುರೇಶ ಲೇಂಗಟಿ ಆಶಯ ನುಡಿಗಳನ್ನು ಹೇಳಿದರು.

ಜಿಲ್ಲಾ ಕಸಾಪ ಪದಾಧಿಕಾರಿಗಳಾದ ವಿನೋದಕುಮಾರ ಜನೇವರಿ,ರಾಜೇಂದ್ರ ಮಾಡಬೂಳ, ಡಾ.ಅಜೀಜ, ಸುರೇಖಾ, ಮೇರಿ, ಸುಧಾಕರ, ರಾಜಕುಮಾರ ಇತರರು ಇದ್ದರು.

ವ್ಹಿ.ಕೆ ಸಲಗರ ಕಸಾಪ ವಲಯ ಘಟಕದ ಅದ್ಯಕ್ಷ ಬಂಡೆಪ್ಪ ಚೀಲಿ ಸ್ವಾಗತಿಸಿದರು, ಗುಂಡಪ್ಪ ಕೂಳ್ಳುರೆ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here