31 ರಂದು ಕ್ಯಾಲೆಂಡರ್ ಲೋಕಾರ್ಪಣೆ

0
36

ಕಲಬುರಗಿ: ಸಪ್ತ ನೇಕಾರ ಸಮುದಾಯಗಳಲ್ಲಿ ಒಂದು ಜನಾಂಗವಾದ (ಮೂಲ ರುದ್ರಸಾಲಿ) ಪ್ರಚಲಿತ ಕುರಹಿನ ಶೆಟ್ಟಿ ಸಮಾಜದ ಕ್ರಿಯಾಶೀಲ ವ್ಯಕ್ತಿ, ಸಮಾಜ ಸೇವಕ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಚಂದ್ರಶೇಖರ್ ಮ್ಯಾಳಗಿ ಯವರ ಸಂಚಾಲನೆಯಲ್ಲಿ, ಜಿಲ್ಲಾ ಕುರಹಿನ ಶೆಟ್ಟಿ ಸಮಾಜದ ವತಿಯಿಂದ 2024 ರ  ಸಾಲಿನ ವರ್ಷದ ತೂಗು ದಿನದರ್ಶಿಕೆ (ಕ್ಯಾಲೆಂಡರ್) ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

31 ರಂದು ಬೆಳ್ಳೆಗ್ಗೆ 10.30 ಕ್ಕೆ ಗಾಜಿಪೂರ್ ನ ಮಿಲನ ಚೌಕನಲ್ಲಿರುವ ಎಸ್.ಎಸ್.ರಾಜಪೂರ್ ಕಟ್ಟಡದ ಮೇಲೆ ಸ್ಥಾಪನೆ ಗೊಂಡ ಜಿಲ್ಲಾ ಕಾರ್ಯಾಲಯದ ಆವರಣದಲ್ಲಿ, ಕೆ. ಕೆ.ಆರ್.ಡಿ.ಬಿ.ಯ ಪ್ರಥಮ ಮಾಜಿ ಅಧ್ಯಕ್ಷ ರಾಗಿದ್ದ ದಕ್ಷಿಣ ಮತ ಕ್ಷೇತ್ರದ ಮಾಜಿ ಶಾಸಕರಾದ ದತ್ತಾತ್ರೇಯ ಸಿ.ಪಾಟೀಲ(ಅಪ್ಪು ಗೌಡ),  ಪ್ರತಿಷ್ಠಿತ ಉದ್ಯಮಿ ಹಾಗೂ ವಿಧಾನ ಪರಿಷತ್ ಸದಸ್ಯ ರಾದ ಬಿ.ಜಿ. ಪಾಟೀಲ (ರಾಜಾ ಪಾಟೀಲ್) ಮತ್ತು ಬಿಜೆಪಿಯ ರಾಜ್ಯ ಕಾರ್ಯದರ್ಶಿ ಹಾಗೂ ಗ್ರಾಮೀಣ ಮತ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡು ಹಾಗೂ ಬಿಜೆಪಿಯ ಮುಖಂಡ, ಉತ್ತರ ಮತ ಕ್ಷೇತ್ರದ ನಾಯಕರು ಆದ ಚಂದು ಪಾಟೀಲ ರವರ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ.

Contact Your\'s Advertisement; 9902492681

ಸಮಸ್ತ ಮಹಾನಗರದ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯೇಶಸ್ವಿಯಾಗೆ ಸಹಕರಿಸಬೇಕೆಂದು  ಜಿಲ್ಲಾ ಕುರಹಿನ ಶೆಟ್ಟಿ ಸಮಾಜ(ನೇಕಾರ)ಕುಶಾಲ ಯಡವಳ್ಳಿ , ಉಪಾಧ್ಯಕ್ಷರು, ಜಿಲ್ಲಾ ಕುರಹಿನ ಶೆಟ್ಟಿ ಸಮಾಜ ಮತ್ತು ಸಾಗರ ನಂದಿ ಕಾರ್ಯಕಾರಿಣಿ ಸದಸ್ಯರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here