ನಾಗಲಾಪುರ ವೀರಾಂಜನೇಯ ದೇವರ ಕಾರ್ತಿಕೋತ್ಸವ 6ಕ್ಕೆ

0
9

ಸುರಪುರ: ನಾಗಲಾಪುರ ವೀರಾಂಜನೇಯ ದೇವರ ಕಾರ್ತಿಕೋತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಈ ಬಾರಿ ಶ್ರೀ ವೀರಾಂಜನೇಯ ಕ್ಷೇತ್ರಾಭೀವೃಧ್ಧಿ ಟ್ರಸ್ಟ್ ಆರಂಭಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಸಂಜೀವ ದರಬಾರಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ವೀರಾಂಜನೇಯ ದೇವಸ್ಥಾನದಲ್ಲಿ ಅನೇಕ ಅಭಿವೃಧ್ಧಿ ಕಾರ್ಯಗಳು ನಡೆಯಬೇಕಿದೆ,ಅದಕ್ಕಾಗಿ ಟ್ರಸ್ಟ್ ರಚನೆ ಮಾಡಿಕೊಳ್ಳಲಾಗಿದೆ,ಈಗ ಟ್ರಸ್ಟ್ ಹಾಗೂ ಶತಕೋಟಿ ಯುಸ್ಪೂರ್ತಿ ಬಳಗ ಸಹಯೋಗದೊಂದಿಗೆ ನಡೆಯಲಿರುವ ಕಾರ್ತಿಕೋತ್ಸವದ ಅಂಗವಾಗಿ ಇಂದು (ಡಿಸೆಂಬರ್ 31) ರವಿವಾರ ದೇವಸ್ಥಾನದ ಆವರಣದಲ್ಲಿ ಮಹಿಳೆಯರಿಗಾಗಿ ಆನಲೈನ್ ಭಕ್ತಿ ಗೀತೆ ಹಾಗೂ ಚುಕ್ಕಿ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.ವಿಜೇತರಿಗೆ ಬಹುಮಾನಗಳನ್ನು ನೀಡಲಾಗುತ್ತಿದೆ ಎಂದರು.

Contact Your\'s Advertisement; 9902492681

ದೇವಸ್ಥಾನದ ಅರ್ಚಕರಾದ ಸೀತಾರಾಮ ಆಚಾರ್ಯರೊಂದಿಗೆ ಕಾರ್ತಿಕೋತ್ಸವದ ಅಂಗವಾಗಿ ಜನೆವರಿ 5 ರಂದು ಸಂಜೆ ದೇವತೆಗಳಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ,6ನೇ ತಾರಿಖು ಬೆಳಿಗ್ಗೆ ಸುಪ್ರಭಾತ,ಮಹಾಗಣಪತಿ ಪೂಜೆ,ಋತ್ವಿಜರೊಂದಿಗೆ ಪುಣ್ಯಹವಾಚನದೊಂದಿದೆ ಗಾಯತ್ರಿ ಹೋಮವನ್ನು ನಡೆಸಲಾಗುವುದು,ನಂತರ ಕಲಿಯುಗದಲ್ಲಿ ಕರ್ಮದಿಂದ ಪಾರಾಗುವ ಭಕ್ತಿ ಮಾರ್ಗ ಹೇಗೆ ಎನ್ನುವ ವಿಶೇಷ ಕಾರ್ಯಕ್ರಮ ನಡೆಯಲಿದೆ,ಅಲ್ಲದೆ ಭಾರ ಎತ್ತುವ ಹಾಗೂ ಸಂಗ್ರಾಣಿ ಕಲ್ಲು ಎತ್ತು ಸ್ಪರ್ಧೆಗಳು ಜರುಗಲಿವೆ ಎಂದು ತಿಳಿಸಿದರು.

ಅಲ್ಲದೆ ಮುಂಬರುವ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಯೋಗ ತರಬೇತಿ,ಶಾಲೆಗಳು,ಪಾರಂಪಾರಿಕ ವೈದ್ಯ ಪದ್ಧತಿಯ ಕುರಿತು ಕಾರ್ಯಗಾರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಹೊಂದಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಕಾರ್ತಿಕೋತ್ಸವದ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಗೌರವಾಧ್ಯಕ್ಷ ಮಲ್ಲಯ್ಯ ಮುತ್ಯಾ,ಟ್ರಸ್ಟ್ ಉಪಾಧ್ಯಕ್ಷ ಶರಣು ನಾಯಕ ಡೊಣ್ಣಿಗೇರ,ಸಿದ್ದು ಕುಂಬಾರಪೇಟ,ಪ್ರಧಾನ ಕಾರ್ಯದರ್ಶಿ ರವಿಕುಮಾರ ಗೋರ್ಕಲ್ ಗುರೂಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here