ಕಲಬುರಗಿ: ಯಾವುದೇ ಹುದ್ದೆ ಶಾಶ್ವತವಲ್ಲ. ದೊರೆತ ಹುದ್ದೆಗೆ ನ್ಯಾಯ ಒದಗಿಸಬೇಕು. ದೊರೆತ ಅಧಿಕಾರ ಸಮಾಜದ ಒಳಿತಿಗಾಗಿ ಸದುಪಯೋಗವಾದರೆ ಮಾತ್ರ, ಆ ಹುದ್ದೆ ಮತ್ತು ವ್ಯಕ್ತಿಗೆ ನೈಜ ಗೌರವ, ಸಾರ್ಥಕತೆ ಪಡೆಯಲು ಸಾಧ್ಯವಾಗುತ್ತದೆ ಎಂದು ನಿರ್ಗಮಿತ ಪ್ರಾಚಾರ್ಯ ಮೊಹ್ಮದ್ ಅಲ್ಲಾಉದ್ದೀನ್ ಸಾಗರ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಹುದ್ದೆಯಿಂದ ವಯೋನಿವೃತ್ತಿಯಾದ ಪ್ರಯುಕ್ತ ಸೋಮವಾರ ಜರುಗಿದ ಪ್ರಾಚಾರ್ಯ ಹುದ್ದೆಯ ಪ್ರಭಾರ ಅಧಿಕಾರ ವರ್ಗಾವಣೆ(ಸಿಟಿಸಿ) ಮಾಡಿ ನಂತರ ಅವರು ಮಾತನಾಡಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಪ್ರಭಾರಿ ಪ್ರಾಚಾರ್ಯ ರವೀಂದ್ರಕುಮಾರ ಸಿ.ಬಟಗೇರಿ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ವಿದ್ಯಾರ್ಥಿಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿರುತ್ತೇನೆ. ಕಾಲೇಜಿನ ಅಭಿವೃದ್ಧಿಗೆ ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆ ಎಂದರು.
ಕಾಲೇಜಿನ ಉಪನ್ಯಾಸಕರಾದ ಮಲ್ಲಿಕಾರ್ಜುನ ದೊಡ್ಡಮನಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಮಲ್ಲಪ್ಪ ರಂಜಣಗಿ, ಪ್ರಕಾಶ ಪಾಟೀಲ, ಎಚ್.ಬಿ.ಪಾಟೀಲ, ರೇಣುಕಾ ಚಿಕ್ಕಮೆಟಿ, ರಾಮಚಂದ್ರ ಚವ್ಹಾಣ, ನೇಸರ ಎಂ.ಬೀಳಗಿಮಠ, ರಂಜಿತಾ ಠಾಕೂರ, ಸಮೀನಾ ಬೇಗಂ, ನಾಗಮ್ಮ ಹಾದಿಮನಿ, ಭಾಗಣ್ಣ ಹರನೂರ ಸೇರಿದಂತೆ ಇನ್ನಿತರರು ಇದ್ದರು.