ಸುರಪುರ: ನಾಡು ನುಡಿಯ ಸೇವೆಗಾಗಿ ನಿರಂತರವಾಗಿ ದುಡಿಯುತ್ತಿರುವ ಕರ್ನಾಟಕ ನವ ನಿರ್ಮಾಣ ವೇದಿಕೆಯನ್ನು ರಾಜ್ಯಾದ್ಯಂತ ಬಲಪಡಿಸಲಾಗುತ್ತಿದೆ.ಮುಂದೆ ಜನೊರವಾದಂತ ಅನೇಕ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಯುವಕರಲ್ಲಿ ಹೋರಾಟದ ಕೆಚ್ಚು ಮೂಡಿಸಲಾಗುವುದು ಎಂದು ವೇದಿಕೆ ಉತ್ತರ ಕರ್ನಾಕ ಅಧ್ಯಕ್ಷ ಶಿವರಾಜ ಕಲಕೇರಿ ಮಾತನಾಡಿದರು.
ನಗರದ ವೇದಿಕೆ ಕಚೇರಿಯಲ್ಲಿ ನಡೆಸಲಾದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ನಮ್ಮ ಸಂಘಟನೆಯು ಕೇವಲ ಹೋರಾಟವನ್ನು ಮಾತ್ರ ನಡೆಸದೆ,ಪರಿಸರ ರಕ್ಷಣೆ,ಶಿಕ್ಷಣದ ಅಭಿವೃಧ್ಧಿ ಹಾಗು ಶೋಷಿತ ಕಾರ್ಮಿಕರಿಗೆ ನೆರವಾಗುವ ಮೂಲಕ ರಾಜ್ಯದಲ್ಲಿಯ ಮಾದರಿ ಸಂಘಟನೆಯನ್ನಾಗಿ ರೂಪಿಸಲಾಗುವುದು.ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿನ ಕನ್ನಡ ಪ್ರೇಮಿ ಯುವಕ ಮಿತ್ರರು ನಮ್ಮೊಂದಿಗೆ ಕೈ ಜೋಡಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ನವ ನಿರ್ಮಾಣ ವೇದಿಕೆಯ ಯಾದಗಿರಿ ತಾಲ್ಲೂಕು ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ಸುಬೇದಾರ ಅವರನ್ನು ಹಾಗು ಆನಂದ ನಾಯಕ ದಾಸೇಗೌಡ ಅವರನ್ನು ಸುರಪುರ ತಾಲೂಕಿನ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.ನಾಗಭೂಷಣ ಯಾಳಗಿ, ಪ್ರಮೊದ್, ಮಂಜುನಾಥ, ರೊಷನ್, ಪುಂಡಲಿಕ್, ಮಲ್ಲಿಕಾರ್ಜುನ ಗುಂಡಾಪುರ, ಶ್ರೀಕಾಂತ ಸೇರಿದಂತ ಅನೇಕರಿದ್ದರು.