ಕಸಾಪ ಅಂಗಳದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತಿ

0
92

ಕಲಬುರಗಿ: ಹೆಣ್ಣು ಮಕ್ಕಳಿಗೆ ಅಕ್ಷರವನ್ನು ಕಲಿಯಲು ನಿರಾಕರಿಸಿದ ಅಂದಿನ ದಿನಮಾನಗಳಲ್ಲಿ ಸಮಾಜಕ್ಕೆ ಎದುರಾಗಿ ಅನೇಕ ತರಹದ ನೋವು, ಆಪತ್ತು, ಅವಮಾನವನ್ನು ಮೆಟ್ಟಿ ನಿಂತು ಹೆಣ್ಣು ಮಕ್ಕಳಿಗಾಗಿಯೇ ಶಾಲೆ ತೆರೆದು ಅಕ್ಷರದ ಜ್ಞಾನವನ್ನು ಉಣಬಡಿಸಿದ ದೇಶದ ಪ್ರಥಮ ಶಿಕ್ಷಕಿ ತಾಯಿ ಸಾವಿತ್ರಿಬಾಯಿ ಫುಲೆ ಅವರು ಇಂದಿನ ಮಹಿಳೆಯರಿಗೆ ಆದರ್ಶರಾಗಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಬುಧವಾರ ಏರ್ಪಡಿಸಿದ ಅಕ್ಷರದವ್ವ ತಾಯಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಇಂದು ಶಿಕ್ಷಣ ಮತ್ತು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಸಮಾನ ಹಕ್ಕು ಪಡೆಯಲು ತಾಯಿ ಸಾವಿತ್ರಿಬಾಯಿ ಫುಲೆ ಅವರೇ ಕಾರಣ. ಇಂದು ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕುತ್ತಿರುವುದು ಸಾವಿತ್ರಿಬಾಯಿ ಫುಲೆ ಅವರ ಹೋರಾಟದ ಫಲ. ಹಾಗಾಗಿ ಆ ತಾಯಿ ಅವರಿಗೆ ಇಂದಿನ ಮಹಿಳೆಯರು ಯಾವತ್ತೂ ಚಿರಋಣಿಯಾಗಿರಬೇಕೆಂದರು.

ಹಿರಿಯ ಹೋರಾಟಗಾರ ಪವನಕುಮಾರ ವಳಕೇರಿ ಮಾತನಾಡಿ, ತಾಯಿ ಸಾವಿತ್ರಿಬಾಯಿ ಫುಲೆ ಅವರು ಅಂದಿನ ಕಾಲದ ಸಮಾಜದಲ್ಲಿ ತುಂಬಿರುವ ಮೌಢ್ಯತೆ, ಕಂದಾಚಾರ, ಅಂಧಶ್ರದ್ಧೆ, ಶೋಷಣೆಯಂತಹ ಮುಂತಾದ ಸಮಸ್ಯೆಗಳ ವಿರುದ್ಧ ಅವರು ತಮ್ಮ ಪತಿ ಮಹಾತ್ಮಾಜ್ಯೋತಿ ಬಾ ಫುಲೆ ಜೊತೆಗೂಡಿ ಜೀವನದುದ್ದಕ್ಕೂ ಹೋರಾಟ ಮಾಡಿ, ಸಮಾಜದ ಸುಧಾರಣೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ.

ಶೋಷಿತ ಜನಾಂಗವು ಅನುಭವಿಸುತ್ತಿದ್ದ ಮೂಕ ರೋದನೆಗೆ ಅವರು ಧ್ವನಿಯಾಗಿ ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ್ದಾರೆ ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಎಸ್ ಅಂಡಗಿ, ಯಶ್ವಂತರಾಯ ಅಷ್ಠಗಿ, ಉದ್ದಿಮೆದಾರ ಡಾ. ವಿಜಯಕುಮಾರ ಕಟ್ಟಿಮನಿ, ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಮಲ್ಲಣ್ಣ ಮಡಿವಾಳ, ಸಂಘಟನಾ ಕಾರ್ಯದರ್ಶಿ ರವೀಂದ್ರಕುಮಾರ ಭಂಟನಳ್ಳಿ, ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಆಳಂದ ತಾಲೂಕಾ ಕಸಾಪ ಅಧ್ಯಕ್ಷ ಹಣಮಂತ ಶೇರಿ ಖಜೂರಿ, ಪ್ರಮುಖರಾದ ಶಕುಂತಲಾ ಪಾಟೀಲ ಜಾವಳಿ, ರಾಜೇಂದ್ರ ಮಾಡಬೂಳ, ನಾಗನ್ನಾಥ ಯಳಸಂಗಿ, ಅಶೋಕ ಪಂಚಾಕ್ಷರಿ ಭಾತಂಬ್ರಾ, ಆನಂದ ವಾರೀಕ್, ಮೋದಿನ್ ಪಟೇಲ್, ಡಾ. ರೆಹಮಾನ ಪಟೇಲ್, ಶ್ರೀದೇವಿ ಕೋರೆ, ಸಂತೋಷ ಕುಡಳ್ಳಿ, ಮಂಜುನಾಥ ಕಂಬಾಳಿಮಠ, ಸಂದೀಪ ಭರಣಿ, ಸೋಮಶೇಕರಯ್ಯ ಹೊಸಮಠ, ಬಸ್ವಂತರಾಯ ಕೋಳಕೂರ, ಶಾಮಸುಂದರ ಬಿ., ಬಸಯ್ಯಾ ಹಿರೇಮಠ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here