ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಹಾಗೂ ಯುನೈಟೆಡ್ ಕಿಂಗ್‍ಡಂನ ಗ್ರಾಡ್‍ಫೋರ್ಡ್ ವಿಶ್ವವಿದ್ಯಾಲಯದ ಜಂಟಿ ಸಹಯೋಗದೊಂದಿಗೆ ರಿಸೆಂಟ್ ಅಡ್ವಾನ್ಸ್‍ಸ್ ಇನ್ ಬಯೋ-ನ್ಯಾನೋ ಕಾಂಪೋಸೈಟ್ಸ್ ಫಾರ್ ಎನಾನ್ಸಿಂಗ್ ಹ್ಯೂಮನ್ ಹೆಲ್ತ್ ವಿಷಯ ಕುರಿತು ಜ. 8 ಹಾಗೂ 9ರಂದು ಜ್ಞಾನಗಂಗಾ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕ್‍ರ್ ಭವನದಲ್ಲಿ ಎರಡು ದಿನಗಳ ಕಾಲ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ವಿವಿ ಕುಪತಿ ಪ್ರೊ. ದಯಾನಂದ ಅಗಸರ ತಿಳಿಸಿದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಹಾಗೂ ಬ್ರಿಟಿμï ಕೌನ್ಸಿಲ್ ಜ್ಞಾನ ನಾಯಕತ್ವದಲ್ಲಿ ಭಾರತೀಯ ಮೈಕ್ರೋಬಯಲಾಜಿಸ್ಟ್ ಸೊಸೈಟಿ, ಅಸೋಸೊಯೇಷನ್ ಆಪ್ ಮೈಕ್ರೋಬಯಲಾಜಿಸ್ಟ್ ಆಪ್ ಇಂಡಿಯಾ ಮತ್ತು ಭಾರತೀಯ ಬಯೋಟೆಕ್ ರಿಸರ್ಚ್ ಸೊಸೈಟಿಯ ಜ್ಞಾನ ಪ್ರಚಾರದೊಂದಿಗೆ ಜರುಗಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉನ್ನತ ಶಿಕ್ಷಣ ಸಚಿವರು ಮತ್ತು ವಿವಿಗಳ ಸಮಕುಲಾಧಿಪತಿ ಡಾ. ಎಂ. ಸಿ. ಸುಧಾಕರ್ ಇವರು ಜ. 8, 2024 ರಂದು ಬೆಳಗ್ಗೆ 10 ಗಂಟೆಗೆ ಸಮ್ಮೇಳನ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಭಾಗವಹಿಸುವರು.
ಯುನೈಟೆಡ್ ಕಿಂಗ್‍ಡಮ್‍ನ ಬ್ರಾಡ್‍ಫೆÇೀರ್ಡ್ ವಿಶ್ವವಿದ್ಯಾಲಯದ ಉಪ ಕುಲಪತಿ ಪೆÇ್ರ ಶೆರ್ಲಿ ಕಾಂಡನ್ ಘನ ಉಪಸ್ಥಿತಿ ವಹಿಸುವರು. ಇನ್‍ಸ್ಟಿಟ್ಯೂಟ್ ಆಫ್ ಬಯೋಟೆಕ್ನಾಲಜಿ ವಿಭಾಗದ ನಿರ್ದೇಶಕ ಪೆÇ್ರ. ರಾಜೇಂದ್ರ ಪ್ರಸಾದ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಅತಿಥಿಗಳಾಗಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತನ ಉಪಾಧ್ಯಾಕ್ಷ ಪೆÇ್ರ. ಎಸ್.ಆರ್. ನಿರಂಜನ, ಭಾರತದ ಬ್ರಿಟಿμï ಕೌನ್ಸಿಲ್‍ನ ಉನ್ನತ ಶಿಕ್ಷಣ ಕಾರ್ಯಕ್ರಮಗಳ ಮುಖ್ಯಸ್ಥರಾದ ರಾಜೇಂದ್ರ ತ್ರಿಪಾಠಿ, ಗುಲ್ಬರ್ಗ ವಿವಿ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ. ಬೈರಪ್ಪ, ವಿದ್ಯಾ ವಿಷಯಕ ಪರಿಷತ್ತ ಸದಸ್ಯ ಪೆÇ್ರ. ಟಿ. ಶಂಕರಪ್ಪ, ಯುಕೆನ ಬ್ರಾಡ್‍ಫೆÇೀರ್ಡ್ ವಿವಿಯ ಡಾ. ಎಸ್. ಎ. ಬೆಹ್ರುಜ್. ಖಘಾನಿ ಉಪಸ್ಥಿತರಿರುವರು ಎಂದು ತಿಳಿಸಿದರು.
9ರಂದು ಸಂಜೆ ನಡೆಯಲಿರುವ ಸಮರೋಪ ಸಮಾರಂಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್, ಬ್ರಟಿಷ್ ಕೌನ್ಸಿಲ್ ನಿರ್ದೇಶಕಿ ಜನಕ ಪುಷ್ಪನಾಥನ್, ಪ್ರೊ. ಜಿ. ಚಂದ್ರಶೇಖರ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಕುಲಸಚಿವ ಡಾ. ಬಿ. ಶರಣಪ್ಪ, ಹಣಕಾಸು ಅಧಿಕಾರಿ ಪ್ರೊ. ರಾಜನಾಳಕರ ಲಕ್ಷ್ಮಣ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪೆÇ್ರ. ಜಿ.ಎಂ. ವಿದ್ಯಾಸಾಗರ್, ಕಾಮರ್ಸ್ ವಿಭಾಗದ ಪ್ರೊ. ವಿಜಯಕುಮಾರ ಇದ್ದರು.
ಶೈಕ್ಷಣಿಕ ಇತಿಹಾಸದಲ್ಲಿ ಮೈಲುಗಲ್ಲು; ಯುಕೆ, ಮಲೇಷಿಯಾ, ಸಿಂಗಾಪುರ, ಶ್ರೀಲಂಕಾ, ನೆದರ್‍ಲ್ಯಾಂಡ್ ಸೇರಿದಂರೆ 10 ವಿವಿಧ ರಾಷ್ಟ್ರಗಳ ವಿಷಯ ತಜ್ಞರು ಆಗಮಿಸಲಿದ್ದು, 12 ಜನ ವಿದೇಶಿಗರು ಹಾಗೂ ಭಾರತದ ಕೇರಳ, ಆಂರ್ಧರ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ 9 ಜನ ತಜ್ಞರು ಸೇರಿ ಒಟ್ಟು 22 ಜನ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. 250 ಸಂಶೋಧನ ಲೇಖನಗಳು ಬಂದಿದ್ದು, 300ಕ್ಕೂ ಹೆಚ್ಚು ಜನ ಪ್ರತಿನಿಧೀಗಳು ಪಾಲ್ಗೊಳ್ಳಲಿದ್ದಾರೆ. ಇದು ಗುಲ್ಬರ್ಗ ವಿವಿಯ ಶೈಕ್ಷಣಿಕ ಇತಿಹಾಸದಲ್ಲಿ ಮೈಲುಗಲ್ಲು ಎಂದು ಪ್ರೊ. ದಯಾನಂದ ಅಗಸರ ತಿಳಿಸಿದರು.
ಮೈಕ್ರೋಬಂiÀiಲ್ ಇನ್‍ಫೆಕ್ಷನ್ಸ್, ಕ್ಯಾನ್ಸರ್ ಮತ್ತು ಸ್ಕಿನ್ ಕೇರ್, ಟಿಸ್ಯೂ ಎಂಜಿನಿಯರಿಂಗ್ ಮತ್ತು ರಿಪೇರಿ, ಡೈಯಾಬೆಟಿಸ್ ಮತ್ತು ಇತರೆ ಎಲಿಮೆಂಟ್ಸ್ ಈ ಮುಖ್ಯ ವಿಷಯಗಳು ಹಾಗೂ ಅದರ ಉಪ ವಿಷಯಗಳ ಮೇಲೆ ಸಮ್ಮೇಳನ ಬೆÉಳಕು ಚೆಲ್ಲಲಿದೆ. – ಡಾ. ಎಸ್. ಎ. ಬೆಹ್ರುಜ್. ಖಘಾನಿ, ಸಂಘಟನಾ ಕಾರ್ಯದರ್ಶಿ