ಮುಖ್ಯಮಂತ್ರಿಯವರ ಸಲಹೆಗಾರರ ಪ್ರವಾಸ

0
83

ಕಲಬುರಗಿ; ಮುಖ್ಯಮಂತ್ರಿಯವರ ಸಲಹೆಗಾರರು ಹಾಗೂ ಆಳಂದ ಶಾಸಕರಾದ ಬಿ.ಆರ್. ಪಾಟೀಲ ಅವರು ಬೆಂಗಳೂರಿನಿಂದ ವಿಮಾನದ ಮೂಲಕ ಜನವರಿ 6 ರಂದು ಶನಿವಾರ ಬೆಳಿಗ್ಗೆ 9.35 ಗಂಟೆಗೆ ಕಲಬುರಗಿಗೆ ಆಗಮಿಸುವರು.

ಅಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಪುಸ್ತಕ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 1 ಗಂಟೆಗೆ ಕಲಬುರಗಿ ಕಾಂಗ್ರೆಸ್ ಪಕ್ಷದ ಕಚೇರಿಗೆ ಭೇಟಿ, ಪತ್ರಿಕಾಗೋಷ್ಠಿ ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡುವರು.

Contact Your\'s Advertisement; 9902492681

ಅಂದು ಮಧ್ಯಾಹ್ನ 4 ಗಂಟೆಗೆ ಆಳಂದ ಜೆ.ಪಿ. ಪ್ರೌಢಶಾಲೆಯಲ್ಲಿ ಆಳಂದ ಮತ್ತು ಮಾದನ ಹಿಪ್ಪರಗಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವರು.

ರಾತ್ರಿ 8.40 ಗಂಟೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಎದುರುಗಡೆಯಿರುವ ಬೇಗ್ ನ್ಯೂರೋ-ಸೈಕಿಯಾಟ್ರಿ ಆಸ್ಪತ್ರೆ ಮತ್ತು ಡಿ-ಅಡಿಕ್ಷನ್ ಸೆಂಟರ್ (BAIG Neuro-Psychiatry Hospital & De-Addiction centre ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಹಿಸುವರು. ನಂತರ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here