ಭಾರತೀಯ ಸಂಸ್ಕøತಿ ಜಾನಪದ ಸಾಹಿತ್ಯದಲ್ಲಿ ಕಾಣಲು ಸಾಧ್ಯ

0
8

ಸುರಪುರ: ಭಾರತೀಯ ಸಂಸ್ಕೃತಿಯನ್ನು ನಾವು ಜಾನಪದ ಸಾಹಿತ್ಯದಲ್ಲಿ ಮಾತ್ರ ಕಾಣಲು ಸಾಧ್ಯ, ಬದುಕು ಹಾಗೂ ಸಂಬಂಧವನ್ನು ಕಟ್ಟಲು ಜನಪದ ಸಾಹಿತ್ಯ ಮುಖ್ಯವಾಗಿದೆ ಎಂದು ಲಕ್ಷ್ಮೀಪುರದ ಶ್ರೀಗಿರಿ ಸಂಸ್ಥಾನದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿದರು.

ಶ್ರೀಮಠದ ಆವರಣದಲ್ಲಿ ಶ್ರೀ ಗುರು ಪುಟ್ಟರಾಜ ಜನ ಕಲ್ಯಾಣ ಸೇವಾ ಸಮಿತಿ ಬೋನ್ಹಾಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ,ಕಲೆ, ನಾಟಕಗಳು ಮಾನವನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಉಲ್ಲಾಸ, ಆನಂದವನ್ನು ತುಂಬುತ್ತದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಮಾಜಿಕವಾಗಿ ಒಗ್ಗಟ್ಟು ಪ್ರದರ್ಶಿಲು ಪೂರಕವಾಗಲಿದೆ ಎಂದ ಅವರು, ಟಿ.ವಿ, ಕಂಪ್ಯೂಟರ್, ಇಂಟರ್ನೆಟ್ ಯುಗದಲ್ಲಿ ಪೌರಾಣಿಕ ನಾಟಕ, ಜಾನಪದ ಕಲೆಗಳು ಮಾಯವಾಗುತ್ತಿದ್ದು, ನಮ್ಮ ಸಂಸ್ಕೃತಿಯ ಸೊಗಡನ್ನು ನಾವು ಕಾಪಾಡಿಕೊಂಡು ಹೋಗಬೇಕು. ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.

Contact Your\'s Advertisement; 9902492681

ಜಾನಪದ ಕಲೆ ಭಾರತೀಯ ಸಂಸ್ಕೃತಿಯ ಮಾತೃ ಸಂಸ್ಕೃತಿಯಾಗಿದೆ. ಇದು ಗ್ರಾಮೀಣ ಸಂಪ್ರದಾಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದೆ ಎಂದು ಅವರು ಹೇಳಿದರು ಮತ್ತು ಗ್ರಾಮೀಣ ಮತ್ತು ಜಾನಪದ ಸಂಸ್ಕೃತಿಗೆ ಸಮಾನಾಂತರವಾಗಿ ಹಿಂದೆ ಹಳ್ಳಿಗಳಲ್ಲಿ ಹಬ್ಬ, ಮದುವೆ, ಶುಭ ಕಾರ್ಯಗಳಲ್ಲಿ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಹಾಡುವ ಪದಗಳು ಜಾನಪದಗಳಾಗಿ ಪ್ರಸ್ತುವಾಗಿವೆ. ಆಧುನಿಕತೆ ಪ್ರಭಾವ ಜಾನಪದ ಸಂಸ್ಕೃತಿ ಕಡಿಮೆಯಾಗಿದೆ. ಜಾಗತೀಕರಣದ ಪ್ರಭಾವದಲ್ಲೂ ಜನಪದ ಜನರಲ್ಲಿ ಉಳಿದಿದೆ. ಅದನ್ನು ಬೆಳೆಸಿಕೊಂಡು ಹೋಗುವ ಗುರಿ ಯುವ ಸಮುದಾಯದ ಮೇಲಿದೆ ಎಂದರು.ಆಧುನಿಕತೆ ಭರಾಟೆ ನಡುವೆಯೂ ಜನಪದ ಹಳ್ಳಿಗರಿಂದಲೇ ಜೀವಂತವಾಗಿದೆ. ಆದಿಮಾನವ, ಬುಡಕಟ್ಟು ಸಮುದಾಯಗಳಿಂದ ತಲೆತಲಾಂತದಿಂದ ಹರಿದು ಬಂದ ಜೀವನ ಅನುಭವದ ರಸಗಟ್ಟೇ ಜಾನಪದವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕ್ಷೀರಲಿಂಗಯ್ಯ ಹಿರೇಮಠ ಬೋನ್ಹಾಳ ಮಾತನಾಡಿ, ಜಾನಪದ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಶ್ರೀಮಂತವಾಗಿದೆ ಎಂದು ತಿಳಿಸಿದರು.

ಹಿರಿಯ ಕಲಾವಿದ ರಾಜಶೇಖರ ಗೆಜ್ಜೆ ಮಾತನಾಡಿ ಜನಪದ ಜನರ ಬಾಯಿಂದ ಬಾಯಿಗೆ ಹರಿದು ಬಂದದ್ದು, ಅದರ ನಾಶ ಆಗೋದು ಅಷ್ಟೊಂದು ಸುಲಭವಲ್ಲ. ನಮ್ಮ ಸಮೂಹ ಎಲ್ಲರೂ ಜವಾಬ್ದಾರಿ ವಹಿಸಿ ಜನಪದದ ಉಳಿವಿಗೆ ಶ್ರಮಿಸಬೇಕಿದೆ. ಆಧುನಿಕ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿರುವ ಜಾನಪದ ಸಾಹಿತ್ಯ ಸಂಸ್ಕೃತಿಯ ಎಲ್ಲ ನೆಲೆಗಳಲ್ಲೂ ವ್ಯಾಪಿಸುವ ಅವಶ್ಯಕತೆಯಿದೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಜಾನಪದ ತಂಡಗಳಿಂದ ಗ್ರಾಮೀಣ ಸೊಗಡಿನ ಸೋಬಾನ ಪದ, ಜಾನಪದ ಗೀತೆ, ಬೀಸುವ ಪದ, ಕುಟ್ಟುವ ಪದ, ಮಹಿಳಾ ಭಜನಾ ಪದ, ಭಕ್ತಿ ಗೀತೆಗಳು, ತಬಲಾ ಸೋಲ್ , ತಮ್ಮಟೆ ವಾದ್ಯ,ಸಾಂಪ್ರದಾಯಿಕ ಹಾಡುಗಳು ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ನಡೆದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here