ಕೇಂದ್ರ ಸರಕಾರದ ಹಿಟ್ ಅಂಡ್ ರನ್ ಕಾನೂನು ರದ್ದುಗೊಳಿಸಲು ಆಗ್ರಹ

0
14

ಸುರಪುರ: ಕೇಂದ್ರ ಸರಕಾರ ಇತ್ತೀಚೆಗೆ ಪ್ರಸ್ತಾಪಿಸಿರುವ ವಾಹನ ಕಾಯ್ದೆ ವಿಧೇಯಕ ಅಡಿ 10ವರ್ಷ ಜೈಲು ಹಾಗೂ 7ಲಕ್ಷ ರೂ ಜುಲ್ಮಾನಾ ವಿಧಿಸುವ ಹಿಟ್ ಆಂಡ್ ರನ್ ವಾಹನ ಕಾಯ್ದೆಯನ್ನು ಕೂಡಲೇ ರದ್ದುಪಡಿಸಬೇಕು ವಾಹನ ಚಾಲಕರಿಗೆ ಅನುಕೂಲವಾಗುವ ರೀತಿಯಲ್ಲಿ ಚಾಲಕ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಬುಧುವಾರದಂದು ತಾಲೂಕು ಜಯ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರು ಮಾತನಾಡಿ ಕೇಂದ್ರ ಸರಕಾರ ರೂಪಿಸಲು ಮುಂದಾಗಿರುವ ಹೊಸ ಕಾನೂನಿನ ಅಡಿಯಲ್ಲಿ ಹಿಟ್ ಅಂಡ್ ರನ್ ಅಪಘಾತಗಳಿಗೆ 10ಲಕ್ಷ ರೂ ದಂಡ ಹಾಗೂ 7ವರ್ಷ ಕಠಿಣ ಸಜೆ ವಿಧಿಸಿದ್ದು ಶಿಕ್ಷೆಯನ್ನು ಹೆಚ್ಚಿಸಿದ್ದು ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಕಾಯ್ದೆಯು ಇದೊಂದು ಸಂಪೂರ್ಣ ಚಾಲಕರ ವಿರೋಧಿ ಕಾಯ್ದೆ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ಭಾರತೀಯ ನ್ಯಾಯ ಸಂಹಿತೆ ಕೂಳಕ ಹಿಟ್ ಅಂಡ್ ರನ್ ಕುರಿತು ಕಠಿಣ ನಿಬಂಧನೆಗಳನ್ನು ವಿಧಿಸಲಾಗಿದೆ ಚಾಲಕನ ಸುರಕ್ಷತೆಯ ಹಕ್ಕನ್ನು ಕಸಿದುಕೊಳ್ಳುವ ಕಾಯ್ದೆ ಇದಾಗಿದ್ದು ತಮ್ಮ ಜೀವವನ್ನು ಲೆಕ್ಕಿಸದೇ ಕೆಲಸ ಮಾಡುವ ಚಾಲಕ ವೃತ್ತಿಗೆ ಮಾರಕವಾಗಿರುವ ಈ ಕಾಯ್ದೆಯನ್ನು ಕೇಂದ್ರ ಗೃಹ ಸಚಿವರು ಕೂಡಲೇ ರದ್ದುಪಡಿಸಬೇಕು ಎಂದು 2019 ರಿಂದ 2023ವರೆಗೆ ಇಡೀ ದೇಶದಲ್ಲಿ ಅತಿ ಹೆಚ್ಚು ತೆರಿಗೆಯನ್ನು ಸಂಗ್ರಹಿಸಿ ಕೊಟ್ಟಿರುವ ಚಾಲಕ ವರ್ಗಕ್ಕೆ ಕೇಂದ್ರ ಸರಕಾರ ಚಾಲಕರ ಅನುಕೂಲಕ್ಕಾಗಿ ಯಾವುದೇ ಒಂದು ಸರಿಯಾದ ಯೋಜನೆಯನ್ನು ಜಾರಿಗೆ ತರದೇ ಚಾಲಕರ ವರ್ಗವನ್ನು ಕಡೆಗಣಿಸಿದೆ ಕೋವಿಡ್ ನಂತರ ಚಾಲಕರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದು ಇಂತಹ ಸಮಯದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರು ಚಾಲಕ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಕೇಂದ್ರ ಸರಕಾರ ಹಿಟ್ ಅಂಡ್ ರನ್ ಕಾನೂನುನ್ನು ಕೈ ಬಿಡಬೇಕು ಮತ್ತು ಚಾಲಕರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಿ ಆ ಮೂಲಕ ಸರಕಾರ ಚಾಲಕರಿಗೆ ಅಪಘಾತ ಜೀವ ವಿಮಾ ಯೋಜನೆಯನ್ನು ಜಾರಿಗೊಳಿಸಬೇಕು ಚಾಲಕರಿಗೆ ಅನುಕೂಲ ಮಾಡಿ ಕೊಡುವಂತೆ ಆಗ್ರಹಿಸಿದರು. ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರರಿಗೆ ಸಲ್ಲಿಸಲಾಯಿತು.

ಸಂಘಟನೆಯ ತಾಲೂಕು ಅಧ್ಯಕ್ಷ ಮಲ್ಲಪ್ಪ ಕಬಾಡಗೇರಾ,ತಾಲೂಕು ಕಾರ್ಯಾಧ್ಯಕ್ಷ ಶಿವರಾಜ ವಗ್ಗರ ದೀವಳಗುಡ್ಡ,ಶರಣಪ್ಪ ಭೈರಿಮಡ್ಡಿ,ರಾಜು ದರಬಾರಿ,ಕೃಷ್ಣಾ ಹಾವಿನ,ರಾಜು ಹುಂಡೇಕಲ್,ಹಣಮಂತ ಭಂಡಾರಿ,ರಂಗಪ್ಪ ವೆಂಕಟಾಪುರ,ರಮೇಶ ಓಕಳಿ ಪಾಳದಕೇರಾ,ಧನರಾಜ ರಾಠೋಡ,ರಾಘವೇಂದ್ರ ಗೋಗಿಕೇರಾ,ರವಿ ಬಿಚ್ಚಗತ್ತಿಕೇರಾ,ಸಾಯಬಣ್ಣ ಕೋಟಿ,ಹಣಮಂತ ಶುಕ್ಲಾ ಸತ್ಯಂಪೇಟ, ಕರ್ನಾಟಕ ಚಾಲಕರ ಒಕ್ಕೂಟ ತಾಲೂಕು ಅಧ್ಯಕ್ಷ ದೇವು ಬಳಿ, ಕರ್ನಾಟಕ ಜನಸೇನಾ ಸಂಘಟನೆ ತಾಲೂಕು ಅಧ್ಯಕ್ಷ ಸಾಯಬಣ್ಣ ಯಾದವ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here