ಬಿ.ಸಿ.ಎಂ. ವಸತಿ ನಿಲಯದಲ್ಲಿ ಸ್ವಯಂ ಉದ್ಯೋಗದ ಉಪನ್ಯಾಸ

0
129

ಕಲಬುರಗಿ; ಎನ್.ಜಿ.ಎನ್. ಫೌಂಡೇಷನ್‌ ಸಂಸ್ಥಾಪಕ ಡಾ.ಸಂತೋಷ ಕುಮಾರ ಅವರು ಮಕರ‌ ಸಂಕ್ರಾಂತಿ ಹಬ್ಬದ ದಿನವಾದ ರವಿವಾರ ಕಲಬುರಗಿ ನಗರದ ಶಹಾಬಾದ ರಸ್ತೆಯ ಕಲ್ಯಾಣ ನಗರದಲ್ಲಿರುವ ಬಿ.ಸಿ.ಎಂ.ಮೆಟ್ರಿಕ್ ನಂತರ ವೃತ್ತಿಪರ ಬಾಲಕರ ವಸತಿ ನಿಲಯದಲ್ಲಿ ನಿಲಯಾರ್ಥಿಗಳಿಗೆ ಸ್ವಯಂ ಉದ್ಯೋಗದ ಕುರಿತು ಉಪನ್ಯಾಸ ನೀಡಿದರು.

ವಸತಿ ನಿಲಯದ ಮಕ್ಕಳು ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬೇಕು ಇಲ್ಲವೆ ಜೀವನದಲ್ಲಿ ಏನಾದರು ಸಾಧನೆ‌ ಮಾಡಬೇಕು ಇದಕ್ಕಾಗಿ ಅವರಿಗೆ ಅತ್ಮ ವಿಶ್ವಾಸ,‌ ಅತ್ಮಸ್ಥೈರ್ಯ, ಇರುವ ಅವಕಾಶಗಳ ಬಗ್ಗೆ ತಿಳಿಹೇಳಬೇಕೆಂಬ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರ ಕರೆ ಹಿನ್ನೆಲೆಯಲ್ಲಿ ವಸತಿ ನಿಲಯದಲ್ಲಿ ಇಂದಿಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

Contact Your\'s Advertisement; 9902492681

ಉಪನ್ಯಾಸದಲ್ಲಿ ಡಾ.ಸಂತೋಷಕುಮಾರ ಮಾತನಾಡುತ್ತಾ, ಸ್ಪರ್ಧಾತ್ಮಕ ಪರೀಕ್ಷೆ ಪಡೆದು ಸರ್ಕಾರಿ‌ ನೌಕರಿ ಪಡೆದ‌ ಮಾತ್ರಕ್ಕೆ ಯಶಸ್ಸು ಎಂದುಕೊಳ್ಳಬಾರದು. ಅದುವೆ ಕೊನೆಯ ಗುರಿಯಾಗಬಾರದು. ಇದರ ಹೊರತಾಗಿ ಜೀವನದಲ್ಲಿ‌ ಮುಂದೆ ಬರಲು, ಸಾಧನೆ‌ ಮಾಡಲು ವಿಫುಲ ಅವಕಾಶಗಳಿವೆ. ಸ್ಚಯಂ ಉದ್ಯೋಗದ ಮೂಲಕ ಇಂದು ಅನೇಕ‌ ಉದ್ದಿಮೆದಾರರು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದಾರೆ, ಹೊಸ‌ ಬದುಕು ಕಟ್ಟಿಕೊಂಡಿದ್ದಾರೆ ಎಂದರು.

ಜ್ಣಾನವೇ ಶಕ್ತಿ ಎಂಬ ಮಾತನ್ನು ಮರೆಯಬಾರದು. ಜ್ಞಾನ ಇದ್ದವರು ಜಗತ್ತನ್ನು ಆಳಬಹುದಾಗಿದೆ. ಕೇವಲ ಪರೀಕ್ಷೆಯಲ್ಲಿ ಉತ್ತೀರ್ಣ ಆಗದಿದ್ದಕ್ಕೆ, ಉದ್ಯೋಗ ಸಿಕ್ಕಿಲ್ಲ ಎಂದು ನಿರಾಸೆ ಹೊಂದಿ ಜೀವನದ ಗುರಿಯಿಂದ ಹಿಂದೆ‌ ಸರಿಬಾರದು. ಅಸಕ್ತಿ ಇರುವ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗಕ್ಕೆ ಹೆಜ್ಜೆ ಇಟ್ಟಲ್ಲಿ ಅದು ಕೈ ಹಿಡಿಯಬಹುದು. ಇದರಲ್ಲಿ ಯಶಸ್ಸು ಕಂಡಲ್ಲಿ ನೀವೆ ಸಾವಿರಾರು ಜನರಿಗೆ ಉದ್ಯೋಗ ನೀಡುವ ಉದ್ಯೋಗದಾತರಾಗುತ್ತೀರಿ ಎಂದು ಭರವಸೆಯ ಮತ್ತು ಪ್ರೇರಣಾದಾಯಕ ಮಾತುಗಳನ್ನಾಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀಮಂತ್ ಹರನಾಳ ಅವರು ಮಾತನಾಡಿದರು.

ವಸತಿ ನಿಲಯದ ನಿಲಯ ಪಾಲಕ ಶರಣಬಸಪ್ಪ ಪಾಟೀಲ್ ಹಾಗೂ ಕಿರಿಯ ನಿಲಯ ಮೇಲ್ವಿಚಾರಕ ಶಿವಯೋಗಿ ಶೆಳ್ಳಗಿ ಸೇರಿದಂತೆ ನಿಲಯದ‌ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಪನ್ಯಾಸ‌ ಆಲಿಸಿದ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here