ಸುರಪುರ: ತಾಲೂಕಿನ ದೇವಾಪುರ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ದೇವರ ಜಾತ್ರೆ ಅದ್ಧೂರಿಯಾಗಿ ಜರುಗಿತು.ಪ್ರತಿ ವರ್ಷದ ಸಂಕ್ರಾಂತಿಯಂದು ಜಾತ್ರೆ ನಡೆಯುತ್ತಿದ್ದು ಈ ವರ್ಷದ ಜಾತ್ರೆಯನ್ನು ಸಾವಿರಾರು ಭಕ್ತರ ಮಧ್ಯೆ ಅದ್ಧೂರಿಯಾಗಿ ನಡೆಯಿತು.
ಸೋಮವಾರ ಮುಂಜಾನೆಯಿಂದ ದೇವರಿಗೆ ಅಲಂಕಾರ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ಮೈಲಾರ ಲಿಂಗೇಶ್ವರನಿಗೆ ಕಾಯಿ ಕರ್ಪುರ ನೈವೆದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು.ಸಂಜೆ ನಡೆದ ದೇವರ ಕಾರಣಿಕ ಹೇಳಿಕೆಯಲ್ಲಿ ಗಚ್ಚೆಪ್ಪ ಪೂಜಾರಿ ಯಾಳಗಿ ಹೇಳಿಕೆ ನೀಡಿ,ತುರ್ತು ಮುಂಗಾರಿ ಮಿಂಚಿತು ಮಳೆಗಳು ಸರಿಯಾಗಿ ಬಾರದೆ ರೈತನಿಗೆ ತೊಂದರೆ ಇದೆ ಎಂದು ತಿಳಿಸಿದರು.
ನಂತರ ನಡೆದ ಸರಪಳಿ ಹರಿಯುವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಭಂಡಾರವನ್ನು ಎರಚಿ ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು.
ಯಂಕಣ್ಣ ಪೂಜಾರಿ ಯಾಳಗಿ ಸರಪಳಿ ಹರೆಯುವ ಮೂಲಕ ಸಾಂಪ್ರದಾಯಿಕ ಆಚರಣೆ ನೆರವೇರಿಸಿದರು.ಒಂದೇ ಎಳೆತಕ್ಕೆ ಸರಪಳಿ ಹರಿಯುತ್ತಿದ್ದರೆ ನೆರೆದಿದ್ದ ಸಾವಿರಾರು ಜನರು ಹರ್ಷ ದಿಂದ ಕುಣಿದು ಕುಪ್ಪಳಿಸಿದರು.