ರಂಗೋಲಿಯಲ್ಲಿ ವಿನೂತನ ವಿಜ್ಞಾನ ಚಿತ್ರ ಬಿಡಿಸಿ ಸಂಕ್ರಾಂತಿ ಆಚರಿಸಿದ ಶಾಲಾ ಮಕ್ಕಳು

0
42

ಯಲಬುರ್ಗಾ : ತಾಲ್ಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಹಿರೇವಂಕಲ ಕುಂಟಾ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳು ಮನೆಯಂಗಳದಲ್ಲಿ ರಂಗೋಲಿಯಲ್ಲಿವಿಜ್ಞಾನ ಚಿತ್ರಗಳನ್ನು ಬಿಡಿಸುವುದರ ಮುಖಾಂತರ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ ಎಂದು ಶಾಲೆಯ ಉಪ ಪ್ರಚಾರದ ಅಂತ ಬಾಬುಸಾಬ್ ಲೈನ್ ದಾರ್ ಅವರು ಹೇಳಿದರು.

ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ತಮ್ಮ ಮನೆಯ ಮುಂದೆ ಪರೀಕ್ಷೆಯ ದೃಷ್ಟಿಯಿಂದ ಅತೀ ಮುಖ್ಯವಾಗಿರುವ ವಿಜ್ಞಾನ ವಿವಿಧ ರೀತಿಯ ಚಿತ್ರಗಳನ್ನು ಬಿಡಿಸಿ ಪೋಟೊ ತೆಗೆಸಿ ಸಂತಸ ಪಟ್ಟರು ಎಂದರು.

Contact Your\'s Advertisement; 9902492681

ಉಪ ಪ್ರಾಚಾರ್ಯ ಬಾಬುಸಾಬ ಲೈನದಾರ್ ರವರ ಮಾರ್ಗದರ್ಶನ ದಡಿಯಲ್ಲಿ ವಿಜ್ಞಾನ ಶಿಕ್ಷಕ ವಿಶ್ವನಾಥ್ ಅವರು ಮನೆ ಮನೆ ಭೇಟಿ ನೀಡಿ ವಿಜ್ಞಾನ ಚಿತ್ರಗಳನ್ನು ವೀಕ್ಷಿಸಿ ಅಭಿಪ್ರಾಯ ಹಂಚಿಕೊಂಡರು.

ಮಾನವ ಹೃದಯ,ತೆರೆದ ಪತ್ರ ರಂದ್ರ, ನರಕೋಶ , ವಿಸರ್ಜನ ಅಂಗ, ಮೆದಳು, ಹೂವಿನ ನೀಳ ಛೇದ ನೋಟ,ಮಾನವನ ಜೀರ್ಣಾಂಗ ಹೀಗೆ ಹಲವಾರು ಚಿತ್ರಗಳನ್ನು ಬಿಡಿಸಿ ತಮ್ಮ ಕಲೆ ಪ್ರದರ್ಶನ ಮಾಡಿದ್ದು ಹೆಮ್ಮೆವಾಗಿದೆ ಎಂದರು .

ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅತ್ಯುತ್ತಮ ಚಿತ್ರಗಳಿಗೆ ಬಹುಮಾನ ನೀಡುವುದಾಗಿ ಪತ್ರಿಕಾ ಹೇಳಿಕೆ ಮೂಲಕ ಉಪ ಪ್ರಾಚಾರ್ಯರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here