ಕಲಬುರಗಿ: ಇಂದಿನ ಸಮಾಜದಲ್ಲಿ ಅನೇಕರು ನಾನಾ ರೀತಿಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಧ್ವನಿ ಕಳೆದುಕೊಂಡಿರುವ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವುಗಳಿಗೆ ಪರಿಷತ್ತು ಧ್ವನಿಯಾಗಿ ಕಾರ್ಯನಿರ್ವಹಿಸಲಿ. ಆಗ ತಾನಾಗಿಯೇ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿಗಳೂ ಆದ ಶಾಸಕ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನಕ್ಕೆ ಬುಧವಾರ ಭೆಟ್ಟಿ ನೀಡಿ ಜಿಲ್ಲಾ ಕಸಾಪ ಹಾಗೂ ಜಿಲ್ಲಾ ಗಾಣಿಗ ಸಮಾಜದ ವತಿಯಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ದೇಶದಲ್ಲಿ ದಿನೇ ದಿನೇ ಅತ್ಯಾಚಾರ, ಭ್ರಷ್ಟಾಚಾರ, ಅನಾಚಾರ ಮುಂತಾದ ಘೋರ ಘಟನೆಗಳು ಹೆಚ್ಚುತ್ತಿದ್ದರೂ ಪ್ರಜೆಗಳಾದ ನಾವು ಏನು ಮಾಡುತ್ತಿದ್ದೇವೆ ಎಂಬ ಪ್ರಶ್ನೆ ನಾವೇ ಹಾಕಿಕೊಳ್ಳಬೇಕು. ಇದಕ್ಕೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ನಾವು ವಿಚಾರಶೀಲತೆ ಬೆಳೆಸಿಕೊಳ್ಳಬೇಕಾಗಿದೆ. ಆ ಮೂಲಕ ಈ ದೇಶದ ಸಂಸ್ಕøತಿಯ ರಕ್ಷಣೆಗೆ ಇಂದು ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದ ಅವರು, ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಿನಕ್ಕೊಂದು ಹೊಸ ಆವಿಷ್ಕಾರದೊಂದಿಗೆ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಮನದುಂಬಿ ಮಾತನಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಪರಿಷತ್ತು ಕಳೆದ ಎರಡು ವರ್ಷಗಳಿಂದ ಸಾಹಿತ್ಯಕ ಚಟುವಟಿಕೆಗಳ ಜತೆಗೆ ಜನಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತಾ ಬರಲಾಗುತ್ತಿದೆ. ಸಂಗೀತ, ಸಾಹಿತ್ಯ, ಕಲೆ ಹೀಗೆ ವಿವಿಧ ಕ್ಷೇತ್ರದ ಪ್ರತಿಭಾವಂತರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಲಬುರಗಿ ಜಿಲ್ಲೆ ವೈಶಿಷ್ಟ್ಯ ಹತ್ತು ಹಲವು ಸಾಂಸ್ಕøತಿಕವಾಗಿ, ಸಾಹಿತ್ಯಿಕವಾಗಿ ಪುರಾತನ ಕಾಲದಿಂದಲೂ ಕನ್ನಡ ನಾಡಿನ ಮೇಲೆ ತನ್ನದೇ ಆದ ಪ್ರಭಾವ ಬೀರಿದೆ. ಕನ್ನಡ ಸಾಹಿತ್ಯಕ್ಕೆ ಮೊಟ್ಟ ಮೊದಲ ಕನ್ನಡದ ಕೃತಿ ಶ್ರೀವಿಜಯನ `ಕವಿರಾಜಮಾರ್ಗ’ ಕೃತಿ ಕೊಟ್ಟ ನೆಲ ಇದಾಗಿದೆ. ಭವ್ಯ ಪರಂಪರೆ ಹೊಂದಿರುವ ಈ ನೆಲದ ಪರಿಚಯವನ್ನು ಹೊಸ ಪೀಳಿಗೆಗೆ ಮಾಡಿಸುವ ನಿಟ್ಟಿನಲ್ಲಿ ಪರಿಷತ್ತು ಕ್ರಿಯಾಶೀಲವಾಗಿದೆ ಎಂದರು.
ಜಿಲ್ಲಾ ಗಾಣಿಗ ನೌಕರರ ಸಂಘದ ಅಧ್ಯಕ್ಷ ಸಂಗಣ್ಣಗೌಡ ಪಾಟೀಲ ಕಲ್ಲೂರ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಪ್ರಮುಖರಾದ ಡಾ. ಬಾಬುರಾವ ಶೇರಿಕಾರ, ಶರಣರಾಜ್ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ಜ್ಯೋತಿ ಕೋಟನೂರ್, ಡಾ. ಕೆ ಎಸ್ ಬಂಧು, ಪ್ರೊ. ಬಿ.ಎ.ಪಾಟೀಲ ಮಹಾಗಾಂವ, ಸುರೇಶ ಪಾಟೀಲ ನೇದಲಗಿ, ವೀರೇಶ ಕಲಶೆಟ್ಟಿ, ಸುಮಾ ಕವಾಲ್ದಾರ್, ರಾಜೇಶ್ವರಿ ಸಾಹು, ಶ್ರೀದೇವಿ ಕೋರೆ, ಸಂದೀಪ ಭರಣಿ, ಡಿ.ಪಿ.ಸಜ್ಜನ್, ಸಂತೋಷ ಕುಡಳ್ಳಿ, ಶಿವಕುಮಾರ ಸಿ.ಹೆಚ್., ಪ್ರಭವ ಪಟ್ಟಣಕರ್, ಚಂದ್ರಶೇಖರ ಮ್ಯಾಳಗಿ, ಸೋಮಶೇಖರಯ್ಯಾ ಹೊಸಮಠ, ಬಸಯ್ಯಾ ಸ್ವಾಮಿ, ರೇವಣಸಿದ್ದಪ್ಪ ಜೀವಣಗಿ, ರಾಜಶೇಖರ ಯಂಕಂಚಿ, ಅರವಿಂದ ಚವ್ಹಾಣ, ಶಿವಕುಮಾರ ಬಾಳಿ, ಸೋಮಶೇಖರ ಹಿರೇಮಠ, ಬಂಗಾರಪ್ಪÀ ಬಿ ಆಡಿನ್, ಬಿ.ಎಂ.ಪಾಟೀಲ ಕಲ್ಲೂರ, ರವಿಕುಮಾರ ಶಹಾಪುರಕರ್, ಮಲ್ಲಿಕಾರ್ಜುನ ಇಬ್ರಾಹಿಂಪುರ, ಚಂದ್ರಶೇಖರ ಪಾಟೀಲ ಯಳಸಂಗಿ, ಸಂದೀಪ ದೇಸಾಯಿ, ಶರಣಪ್ಪ ಅಂದಾನಿ, ಈರಣ್ಣಾ ಕೌಲಗಿ, ಡಾ. ರೆಹಮಾನ್ ಪಟೇಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.