ಸುರಪುರ: ತಾಲ್ಲೂಕಿನ ಮಲ್ಲಿಬಾವಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ವಿಜಯಕುಮಾರನ ಅಮಾನತ್ತು ರದ್ದುಗೊಳಿಸಿ ಪುನಃ ಸೇವೆಗೆ ನಿಯೋಜಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಕ್ರಾಂತಿಕಾರಿ ಬಣ) ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಮೂರು ಗಂಟೆಗು ಹೆಚ್ಚು ಕಾಲ ಧರಣಿ ನಡೆಸಿ,ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುಧ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯ ನೇತೃತ್ವ ವಹಿಸಿದ್ದ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ಕ್ಷೇತ್ರ ಶಿಕ್ಷಣಾಧಿಕಾರಿಗಳು ದಲಿತ ಶಿಕ್ಷಕರ ಬಗ್ಗೆ ವಿರೋಧ ತೋರುತ್ತಿದ್ದು,ತಾಲ್ಲೂಕಿನ ಬೇರೆ ಬೇರೆ ಶಾಲೆಗಳ ದಲಿತ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವ ಮೂಲಕ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ.ಇದನ್ನು ಸಮಿತಿ ಖಂಡಿಸುತ್ತದೆ.ಅಲ್ಲದೆ ಕಳೆದ ತಿಂಗಳು ೨೮ನೇ ತಾರೀಖಿನಂದು ಅಮಾನತ್ತುಗೊಳಿಸಲಾದ ತಾಲ್ಲೂಕಿನ ಮಲ್ಲಿಬಾವಿ ಗ್ರಾಮದ ಶಿಕ್ಷಕ ವಿಜಯಕುಮಾರನನ್ನು ಅಮಾನತ್ತುಗೊಳಿಸಲಾಗಿದೆ.ಇದು ಸರಿಯಲ್ಲ ಕೂಡಲೆ ಅಮಾನತ್ತು ರದ್ದುಗೊಳಿಸಿ ಪುನಃ ಸೇವೆಗೆ ನಿಯೋಜಿಸುವಂತೆ ಆಗ್ರಹಿಸಿದರು. ಧರಣಿ ನಿರತರ ಬಳಿ ಬಂದು ಬೇಡಿಕೆ ಆಲಿಸಿದ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಅಮರೇಶ ಕುಂಬಾರವರು,ಧರಣಿ ನಿರತರ ಬೇಡಿಕೆಯನ್ನು ಮೇಲಾಧಿಕಾರಿಗಳಿಗೆ ತಿಳಿಸಿದ ನಂತರ,ಮೇಲಾಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ,ವಿಜಕುಮಾರವರನ್ನು ಒಂದು ವಾರದಲ್ಲಿ ಸೇವೆಗೆ ನಿಯುಕ್ತಿಗೊಳಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿರುವುದಾಗಿ ತಿಳಿಸಿದ ನಂತರ ಪ್ರತಿಭಟನಾಕಾರರು ತಮ್ಮ ಮನವಿಯನ್ನು ಸಲ್ಲಿಸಿ ನಂತರ ಧರಣಿಯನ್ನು ನಿಲ್ಲಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಖಾದರ ಪಟೇಲ,ಸೋಮರಡ್ಡಿ ಮಂಗಿಹಾಳ ಹಾಗು ಕದಸಂ ಸಮಿತಿಯ ತಾಲ್ಲೂಕು ಅಧ್ಯಕ್ಷ ತಿಪ್ಪಣ್ಣ ಶೆಳ್ಳಿಗಿ,ಮೂರ್ತಿ ಬೊಮ್ಮನಹಳ್ಳಿ,ಜೆಟ್ಟೆಪ್ಪ ನಾಗರಾಳ,ಮರಿಲಿಂಗಪ್ಪ ಹುಣಸಿಹೊಳೆ,ಖಾಜಾಹುಸೇನ ಗುರಗುಂಟಾ,ಚಂದ್ರಶೇಖರ ಬಲಶೆಟ್ಟಿಹಾಳ,ಸಾಬಣ್ಣ ಸದಬ,ಮಹೇಶ ಯಾದಗಿರಿ,ಜಿಗ್ನೇಶ,ಪರಮಣ್ಣ ಬಲಶೆಟ್ಟಿಹಾಳ,ಮಲ್ಲೇಶ ಹೊಸಮನಿ,,ಲ್ಲಿಕಾರ್ಜುನ ಬಡಿಗೇರ,ಮೌನೇಶ ಕಂಬಾರ,ಬುದ್ಧಿವಂತ ನಾಗರಾಳ,ಭೀಮಣ್ಣ ಕ್ಯಾತನಾಳ,ಬಸಪ್ಪ ಭಂಡಾರಿ,ಬಸವರಾಜ ದೊಡ್ಮನಿ,ಯಲ್ಲಪ್ಪ ಗುಂಡಲಗೇರಾ,ಹಣಮಂತ ಚಿಕ್ಕನಳ್ಳಿ,ಮೌನೇಶ ತಿಂಥಣಿ,ನಬೀ ರಸೂಲ್,ಮಲ್ಲಪ್ಪ ಬಾದ್ಯಾಪುರ,ಭೀಮಣ್ಣ ನಾಟೇಕಾರ,ಪಾರಪ್ಪ ತಳವಾರ,ಶರಣಪ್ಪ ಗಾಯಕವಾಡ,ಸಂಗಪ್ಪ ಚಿಂಚೋಳಿ ಸೇರಿದಂತೆ ಅನೇಕರಿದ್ದರು.