ಹಿಟ್ ಅಂಡ್ ರನ್ ಕೇಂದ್ರ ಕಾನೂನು ರದ್ದುಗೊಳಿಸಲು ಆಗ್ರಹಿಸಿ ರಸ್ತೆ ತಡೆ

0
9

ಸುರಪುರ: ಹಿಟ್ ಅಂಡ್ ರನ್ ಕೇಸ್‍ಗೆ ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ 7 ಲಕ್ಷ ರೂಪಾಯಿ ದಂಡ,10 ವರ್ಷಗಳ ಜೈಲು ವಾಸದ ಕಾನೂನು ಕೂಡಲೇ ರದ್ದುಗೊಳಿಸಲು ಆಗ್ರಹಿಸಿ ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿ ತಡೆದು ಟೈರ್‍ಗೆ ಬೆಂಕಿ ಹಚ್ಚಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ.

ವಾಯುಪುತ್ರ ಲಾರಿ ಚಾಲಕರ ಮತ್ತು ಕ್ಲೀನರ್ ಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ನಮ್ಮ ಕರ್ನಾಟಕ ಸೇನೆ, ಜಯಕರ್ನಾಟಕ ರಕ್ಷಣಾ ಸೇನೆ, ಕಾರು ಚಾಲಕರ ಸಂಘ,ಆಟೋ ಚಾಲಕರ ಸಂಘ, ಸೇರಿದಂತೆ ವಿವಿಧ ಸಾಮೂಹಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಸನಾಪೂರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತ ದಲ್ಲಿರುವ  ರಾಜ್ಯ ಹೆದ್ದಾರಿ ಯನ್ನು ತಡೆದು ಕೇಂದ್ರ ಸರ್ಕಾರದ ಚಾಲಕ ವಿರೋಧಿ ಹಿಟ್ ಅಂಡ್ ರನ್ ಕಾಯ್ದೆಯನ್ನು ಜಾರಿಗೊಳಿಸಿರುವದನ್ನು ವಿರೋಧಿಸಿ  ಒಂದು ಘಂಟೆ ಕಾಲ ರಸ್ತೆ ತಡೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ಮೂಲಕ ಮನವಿ ಸಲ್ಲಿಸಲಾಯಿತು.

Contact Your\'s Advertisement; 9902492681

ಈ ಪ್ರತಿಭಟನೆಯಲ್ಲಿ ವಾಯುಪುತ್ರ ಲಾರಿ ಚಾಲಕರ ಸಂಘದ ಅಧ್ಯಕ್ಷ  ಗೊಲ್ಲಾಳೆಪ್ಪ, ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ, ನಮ್ಮ ಕರ್ನಾಟಕ ಸೇನೆ ತಾಲೂಕ ಅಧ್ಯಕ್ಷ ವೆಂಕಟೇಶ ನಾಯಕ ಪ್ಯಾಪ್ಲಿ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶಕೀಲ್ ಅಹಮದ್ , ವಿಷ್ಣು ಸೇನೆ ಅಧ್ಯಕ್ಷ ಮಲ್ಲು ವಿಷ್ಣು ಸೇನೆ, ಜಯಕರ್ನಾಟಕ ರಕ್ಷಣಾ ಸೇನೆಯ ಶಿವಕುಮಾರ, ಕಾರು ಚಾಲಕರ ಸಂಘದ ನಿಂಗಪ್ಪ ಗಂಗನಾಳ, ಭೀಮಣ್ಣ ದೊರಿ,ಲಾರಿ ಚಾಲಕರ ಸಂಘದ ಪದಾಧಿಕಾರಿಗಳಾದ ನಿಂಗಪ್ಪ,ದೇವು ಪಾಟೀಲ,ಕಾಂತಪ್ಪ ದರಬಾರಿ, ಭೀಮಣ್ಣ ರುಕ್ಮಾಪೂರ, ಬಸವರಾಜ ಮಂಗಿಹಾಳ, ಸಂತೋಷ ದಾವತ್, ದೇವಿಂದ್ರಪ್ಪ ಚಂದನಕೇರಿ, ಭೀಮಣ್ಣ ದರಬಾರಿ, ವೆಂಕಟೇಶ, ಭೀಮಣ್ಣ ಗೌಡ್ರು,ಖಾಜಾ ಹುಸೇನಿ, ಮಲ್ಲು ಭೀಮಣ್ಣ,ಪಿಡ್ಡಪ್ಪ.ದೇವರಾಜ, ಮುನ್ನಾಭಾಯ್,,ಕರವೇ ಪದಾಧಿಕಾರಿಗಳು ಹಣಮಗೌಡ ಶಖಾಪೂರ, ಶ್ರೀನಿವಾಸ ಲಕ್ಷ್ಮೀಪುರ, ಆನಂದ ಮಾಚಗುಂಡಾಳ, ನಾಗರಾಜ ಡೊಣ್ಣಿಗೇರಿ, ಕೃಷ್ಣ ಮಂಗಿಹಾಳ, ಸೋಮಯ್ಯ ಹಾಲಗೇರಿ, ಅಯ್ಯಪ್ಪ ವಗ್ಗಾಲಿ, ಹಣಮಂತ ದೇವಿಕೇರಿ, ಪ್ರಭು ಮಂಗಿಹಾಳ, ಆನಂದ ರತ್ತಾಳ.ಯಮನಪ್ಪ ರಂಗಂಪೇಟ, ಮಲ್ಲಿಕಾರ್ಜುನ ದೇವಿಕೇರಿ , ಷಣ್ಮುಖ ಅಡ್ಡೊಡಗಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here