ವಚನ ಸಾಹಿತ್ಯಕ್ಕೆ ಚೌಡಯ್ಯನವರ ಕೊಡುಗೆ ಅಪಾರ

0
15

ಕಲಬುರಗಿ: ನಗರದ ಗಂಗಾನಗರ ಬಡಾವಣೆ ಶ್ರೀ ಮಾತಾ ಮಾಣಿಕೇಶ್ವರಿ ವಧು ವರರ ಮಾಹಿತಿ ಕೇಂದ್ರ ಹಾಗೂ ಶ್ರೀ ಮಹಾಯೋಗಿನಿ ಪತ್ತಿನ ಸಹಕಾರ ಸಂಘದ ಅಡಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ ಮಾಡಲಾಯಿತು.

ಕಲಬುರಗಿ ಜಿಲ್ಲಾ ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ನೀಲಕಂಠ ಎಂ ಜಮಾದಾರ ಅವರು ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಾ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ನೇತೃತ್ವದಲ್ಲಿ ಅನುಭವ ಮಂಟಪ ಸ್ಥಾಪಿಸಿ ಸಾಮಾಜದ ಕಂದಾಚಾರಗಳನ್ನು ತೆಗೆದು ಹಾಕಿದ ಕೀರ್ತಿ ಶರಣರಿಗೆ ಸಲ್ಲುತ್ತದೆ.

Contact Your\'s Advertisement; 9902492681

ಅವರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಒಬ್ಬರು.ತಮ್ಮ ನೇರ ನಿಷ್ಠುರ ವಚನಗಳು ರಚಿಸಿ ವಚನ ಸಾಹಿತ್ಯ ಶ್ರೀಮಂತಗೊಳಿಸಿದ ಶರಣರಲ್ಲಿ ಅಂಬಿಗರ ಚೌಡಯ್ಯನವರ ವಚನಗಳು ಸಹ ಪ್ರಮುಖವಾದವುಗಳು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಮಾತಾ ಮಾಣಿಕೇಶ್ವರಿ ವಧು ವರರ ಮಾಹಿತಿ ಕೇಂದ್ರ ಅಧ್ಯಕ್ಷ ಸೂರ್ಯಕಾಂತ ಗುಡಡ್ಡಗಿ, ಪ್ರಧಾನ ಕಾರ್ಯದರ್ಶಿ ಸೈಬಣ್ಣಾ ವಡಗೇರಿ ಕಾನೂನು ಸಲಹೆಗಾರರಾದ ಅಶೋಕ ಚಾಂದಕವಠೆ ಶ್ರೀ ಮಾಹಾಯೋಗಿನಿ ಮಾತಾ ಮಾಣಿಕೇಶ್ವರಿ ಸಹಕಾರ ಪತ್ತಿನ ಸಂಘದ ಅಧ್ಯಕ್ಷ ಬಾಬು ಪಿ ಜಮಾದಾರ, ಉಪನ್ಯಾಸಕ ಧರ್ಮರಾಜ ಜವಳಿ, ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಸದಸ್ಯ ಸಿದ್ದಪ್ಪ ಜಿ ಮಹಾಗಾಂವ ಶರಣಬಸಪ್ಪ ಕೋಟರಗಸ್ಥಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here