“ದೇಶದ ಜ್ವಲಂತ ಸಮಸ್ಯೆಗಳಿಗೆ ಸಮಾಜವಾದಿ ಕ್ರಾಂತಿಯಿಂದ ಮಾತ್ರ ಪರಿಹಾರ ಸಾಧ್ಯ”

0
31

ಶಹಾಬಾದ; ದೇಶವನ್ನು ಕಿತ್ತು ತಿನ್ನುತ್ತಿರುವ ಬಡತನ , ನಿರುದ್ಯೋಗ, ಕೋಮುವಾದ, ಜಾತಿವಾದ, ಬೆಲೆಏರಿಕೆ, ಮಹಿಳೆಯರ ಮೇಲಿನ ಅತ್ಯಚಾರಗಳಂತ ಜ್ವಲಂತ ಸಮಸ್ಯೆಗಳನ್ನು ಪಕ್ಷ ಅಥವಾ ಸರಕಾರಗಳನ್ನು ಬದಲಾಯಿಸಿದರೆ ಪರಿಹಾರವಾಗುವುದಿಲ್ಲ. ಬದಲಾಗಿ ಕ್ರಾಂತಿಕಾರಿ ಸಿದ್ದಾಂತದ ಆಧಾರದ ಮೇಲೆ ಸಮಾಜವಾದಿ ಕ್ರಾಂತಿಯಿಂದ ಮಾತ್ರವೇ ಸಾಧ್ಯವೆಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಷ್ಟ್) ಪಕ್ಷದ ಸ್ಥಳೀಯ ಸಮಿತಿಯ ಕಾರ್ಯದರ್ಶಿಗಳಾದ ಕಾಮ್ರೇಡ್ ಗಣಪತರಾವ ಕೆ ಮಾನೆ ಅವರು ಹೇಳಿದರು.

ಅವರು ಶಹಾಬಾದನ ಹನುಮಾನ ನಗರದಲ್ಲಿ ಎಸ್.ಯು.ಸಿ.ಐ (ಸಿ) ಪಕ್ಷದ ಕಾರ್ಯಾಲಯದಲ್ಲಿ ರಷ್ಯಾ ಕ್ರಾಂತಿಯ ಶಿಲ್ಪಿ ಹಾಗೂ ಕಾರ್ಮಿಕ ವರ್ಗದ ಮಹಾನ್ ನೇತಾರರಾದ ವಿ.ಐ,ಲೆನಿನ್ ಅವರ ಮರಣ ಶತಾಬ್ದಿಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

Contact Your\'s Advertisement; 9902492681

ಇಡೀ ಯುರೋಪ್ ಖಂಡದಲ್ಲಿಯೇ ರೋಗಗ್ರಸ್ಥವಾದ ರಷ್ಯಾ ದೇಶದಲ್ಲಿ ನೈಜ ಕಮ್ಯೂನಿಷ್ಟ್ ಪಕ್ಷವನ್ನು ಸ್ಥಾಪಿಸಿ, ಜಾರ್ ರಾಜನ ದಬ್ಬಾಳಿಕೆಯನ್ನು ಮೆಟ್ಟಿನಿಂತು, ರೈತ-ಕಾರ್ಮಿಕರನ್ನು ಸಂಘಟಿಸಿ 1917ರಲ್ಲಿ ಸಮಾಜವಾದಿ ಕ್ರಾಂತಿಯನ್ನು ನೇರವೇರಿಸಿದ ಕೀರ್ತಿಯು ಲೆನಿನ್ ಅವರಿಗೆ ಸಲ್ಲುತ್ತದೆ. ಪ್ರಥಮ ಮಹಾಯುದ್ಧದ ಸಂದರ್ಭದಲ್ಲಿ ಈ ಕ್ರಾಂತಿಯು ವಿಶ್ವದ ಕಾರ್ಮಿಕ ವರ್ಗದಲ್ಲಿ ಹೊಸ ಆಶಾಭಾವನೆಯನ್ನು ಹುಟ್ಟಿಸಿತು. ಕ್ರಾಂತಿಯಾದ ಕೆಲವೇ ವರ್ಷಗಳಲ್ಲಿ ರಷ್ಯಾದ ಸಮಾಜವಾದಿ ಆರ್ಥಿಕತೆಯು ಅಮೆರಿಕಾಕಿಂತಲು ಬಲಿಷ್ಠ ರಾಷ್ಟ್ರವಾಗಿ ಬೆಳೆಯಿತು. ಬಡತನ , ನಿರುದ್ಯೋಗ, ಕೋಮುವಾದ, ಬೆಲೆಏರಿಕೆ, ವೈಶ್ಯವಾಟಿಕೆಗಳಂತಹ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿದರು. ಎಲ್ಲರಿಗೂ ಉಚಿತ ಶಿಕ್ಷಣ ಮತ್ತು ಆರೋಗ್ಯವನ್ನು ಖಚಿತ ಪಡಿಸಿದರು ಎಂದು ಹೇಳುತ್ತ, 1991ರಲ್ಲಿ ಅಲ್ಲಿನ ನಾಯಕರ ಪರಿಷ್ಕರಣವಾದದಿಂದ್ದಾಗಿ ಸಮಾಜವಾದಿ ವ್ಯವಸ್ಥೆಯು ಪತನ ಹೊಂದಿತ್ತು. ಇದು ಸಮಾಜವಾದಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದ್ದು ಮತ್ತೆ ರಷ್ಯದಲ್ಲಿ ಸಮಾಜವಾದಿ ವ್ಯವಸ್ಥಯನ್ನು ಮರುಸ್ಥಾಪಿಸಲು ಹೋರಾಟಗಳನ್ನು ನಡೆಯುತ್ತಿರುವುದು ಆಶಾದಾಯಕವಾಗಿದೆ. ಎಂದು ನುಡಿದರು.

ನಮ್ಮ ದೇಶವನ್ನು ಕಾಡುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಅದು ಸಮಾಜವಾದಿ ಕ್ರಾಂತಿಯಿಂದಲೇ ಮಾತ್ರ ಸಾಧ್ಯವೆಂದು ಹೇಳುತ್ತಾ, ಆ ಕ್ರಾಂತಿಯನ್ನು ವಿದ್ಯಾರ್ಥಿ-ಯುವಜನರು-ಮಹಿಳೆಯರು-ರೈತರು ಹಾಗೂ ಕಾರ್ಮಿಕರು ಸಂಘಟಿತರಾಗಿ ಹೋರಾಟ ಮಾಡಿದ್ದಾಗ ಮಾತ್ರವೇ ಈ ಭ್ರಷ್ಟವ್ಯವಸ್ಥೆಯನ್ನು ಕಿತ್ತೊಗಿದು ಶೋಷಣೆರಹಿತ ಸಮಾಜವಾದಿ ಸಮಾಜವನ್ನು ಕಟ್ಟಬಹುದೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್.ಯು.ಸಿ.ಐ (ಸಿ) ನಾಯಕರಾದ ರಾಮಣ್ಣ.ಎಸ್.ಇಬ್ರಾಹಿಂಪೂರ, ರಾಘವೇಂದ್ರ ಎಮ್.ಜಿ. ರಾಜೇಂದ್ರ ಆತ್ನೂರ, ಸಿದ್ದು ಚೌದರಿ. ಗುಂಡಮ್ಮ ಮಡಿವಾಳ. ಭಾಗಣ್ಣ ಬುಕ್ಕ, ತುಳಜರಾಮ ಎನ್ ಕೆ, ರಮೇಶ ದೇವಕರ. ನೀಲಕಂಠ ಎಮ್ ಹುಲಿ. ರಾಧಿಕಾ ಚೌದರಿ. ಸುಕನ್ಯಾ. ಆನಂದ ಸೇರಿ ಹಲವಾರು ರೈತರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು ಭಾಗವಹಿಸಿದ್ದರು. ಜಗನ್ನಾಥ.ಎಸ್.ಎಚ್ ಅವರು ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here