ಸಂಪನ್ನಗೊಂಡ 31ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ
ಕಲಬುರಗಿ: 10-17 ವಯೋಮಿತಿಯ ಮಕ್ಕಳಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ ಹಾಗೂ ಸಂಶೋಧನಾ ಪ್ರವೃತ್ತಿ ಬೆಳಿಸಿ ಅವರನ್ನು ಭವಿಷ್ಯದ ವಿಜಾನಿಗಳನ್ನಾಗಿ ರೂಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸಂಘಟಿಸುವ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಂಡು ರಾಜ್ಯದ 30 ಬಾಲವಿಜ್ಞಾನಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಹಾಗೂ ಧಾರವಾಡದ ಎಸ್. ಆರ್. ಬೊಮ್ಮಾಯಿ ಸರ್ಕಾರಿ ಪ್ರೌಢಶಾಲೆಯ ವಿರೇಶಗೌಡ ಪಾಟೀಲ ರಾಜ್ಯದ ಬಾಲವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆಂದು ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯಾಧ್ಯಕ್ಷ ಗಿರೀಶ ಕಡ್ಲೇವಾಡ ತಿಳಿಸಿದ್ದಾರೆ.
ಅವರು ಇಂದು ಶ್ರೀ ಕೊತ್ತಲಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ, ಕಲಬುರಗಿ ಜಿಲ್ಲೆ ಇಲ್ಲಿ ಮೂರು ದಿನಗಳ ಕಾಲ ಜರುಗಿದ 31ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಾಲವಿಜ್ಞಾನಿಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಶ್ರೀ ಕೊತ್ತಲಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸಂರಕ್ಷಕ ಬಸವರಾಜ ಪಾಟೀಲ ಸೇಡಂ ಮಾತನಾಡಿ ವಿಜ್ಞಾನ ಕ್ಷೇತ್ರದಲ್ಲಿ ಮನುಕುಲ ಬೆಳಗುವ ಸಂಶೋಧನೆಗಳಾಗಬೇಕೆ ಹೊರತು ಮಾನವ ಜನಾಂಗದ ವಿನಾಶಕ್ಕೆ ಕಾರಣವಾಗುವ ಸಂಶೋಧನೆಗಳಾಗಬಾರದು ಎಂದರು. ವಿದ್ಯಾರ್ಥಿಗಳು ಕೇವಲ ಇಂಜನಿಯರ್, ಡಾಕ್ಟರ್ ಆಗುವ ಕನಸು ಕಾಣದೇ ದೇಶದ ಅನ್ನದಾತರ ಅಭಿವೃದ್ಧಿಗಾಗಿ ಕೃಷಿ ವಿಜಾನಿಯಾಗುವತ್ತ ಯೋಚಿಸಬೇಕು ಎಂದರು.
ಇನ್ನೋರ್ವ ಅತಿಥಿ ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ಜಿಲ್ಲಾ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ ಮಾತನಾಡಿ ಭವಿಷ್ಯದ ವಿಜ್ಞಾನಿಗಳನ್ನು ರೂಪಿಸಲು ಮಕ್ಕಳ ವಿಜ್ಞಾನ ಸಮಾವೇಶ ಸೂಕ್ತ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಇಲ್ಲಿ ರೂಢಿಸಿಕೊಂಡ ಸಂಶೋಧನಾ ಪ್ರವೃತ್ತಿಯನ್ನು ಭವಿಷ್ಯದಲ್ಲೂ ಮುಂದುವರೆಸಬೇಕು ಎಂದರು.
ವೇದಿಕೆಯ ಮೇಲೆ ಸಾಗರ ವಿಜ್ಞಾನಿ ವ್ಹಿ. ಎನ್. ನಾಯ್ಕ, ಶ್ರೀ ಕೊತ್ತಲಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸಹಕಾರ್ಯದರ್ಶಿ ಡಾ. ಸದಾನಂದ ಬೂದಿ, ಕರಾವಿಪ ಖಜಾಂಚಿ ಎಚ್. ಎಸ್. ಟಿ. ಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಮಹಾರುದ್ರಪ್ಪ ಅಣದೂರೆ, ಬಸಲಿಂಗಪ್ಪ ಮಲ್ಹಾರ, ಕ್ಷೇತ್ರ ಶಿಕ್ಷಣಾಧಿಕಾರಿ ಮಾರೂತಿ ಹುಜರಾತಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ರಾಜ್ಯ ಶೈಕ್ಷಣಿಕ ಸಂಯೋಜಕ ಎಚ್. ಜಿ. ಹುದ್ದಾರ ಸ್ವಾಗತಿಸಿದರು. ರಾಜ್ಯ ಸಂಯೋಜಕ ಡಾ. ಕುಂಟೆಪ್ಪ ಗೌರೀಪುರ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಾಲ ವಿಜ್ಞಾನಿಗಳ ಹೆಸರು ಘೋಷಿಸಿದರು. ಕೊಟ್ರುಸ್ವಾಮಿ ನಿರೂಪಿಸಿದರು.
ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಾಲವಿಜ್ಞಾನಿಗಳು : ನಗರ ಹಿರಿಯ ವಿಭಾಗದಿಂದ, ಉತ್ತರ ಕನ್ನಡÀ ಜಿಲ್ಲೆಯ ಅಕ್ಷರಾ ಮಹಾಲೆ, ದರ್ಶನ ಬಾಗೇವಾಡಿ, ಬಾಗಲಕೋಟೆ ಜಿಲ್ಲೆಯ ಸಹನಾ ಕೊನ್ನೂರ, ಬೆಂಗಳೂರಿನ ಎಮ್. ಡಿ. ಅಯ್ಯನ ಅಜೀಮ್, ಕಲಬುರಗಿಯ ಶ್ರದ್ಧಾ ವಿ ಕಾಳೇಕರ್, ಆಯೇಷಾ ತೆಹರಿಮ್, ವಿಜಯನಗರದ ಆರ್ ಪಲ್ಲವಿ, ದಕ್ಷಿಣ ಕನ್ನಡ ಜಿಲ್ಲೆಯ ಖದಿಜಾ ತಫನ್ ಆಯ್ಕೆಯಾದರು. ಅದೇರೀತಿ ನಗರ ಕಿರಿಯ ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಜಾ ರಾವ್, ಉಡುಪಿಯ ಜೀವಿತಾ, ಕೊಡಗಿನ ಶ್ರೀಯಾಕಿರಣ ಎಮ್. ಮೈಸೂರಿನ ರಕ್ಷಿತಾ ಆರ್. ಕಲಬುರಗಿಯ ಭವಾನಿ, ಅಷ್ಟಗಿ, ಗದಗನ ಪೂಜಾ ಸ್ವಾಮಿ, ಆಯ್ಕೆಯಾದರು.
ಅದೇ ರೀತಿ ಗ್ರಾಮೀಣ ಹಿರಿಯ ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯ ಆದೀಶ್À, ಸುಹಾಸ್ ಎಮ್. ಬಿ., ಮೈಸೂರಿನ ಅಂಜಲಿ ಎಸ್, ಜೆ. ಬೆಂಗಳೂರಿನ ಸಾಹಿಲ್ ಎಮ್. ಡಿ., ಉಡುಪಿಯ ಕೃಷ್ನಾ ಪಾಟೀಲ, ಹಾಸನದ ಲಕ್ಷ್ಮಿ ವಿಜಯನಗರದ ಎ. ಎಮ್. ಅಜ್ಜಯ್ಯ ಯಾದಗಿರಿಯ ಕಾವೇರಿ ಮೌನೇಶ, ಬೆಳಗಾವಿಯ ಬಸವರಾಜ ಕೌಜಲಗಿ ಗ್ರಾಮೀಣ ಕಿರಿಯ ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಚೀತ್ ಭಟ್, ಬಾಗಲಕೋಟೆಯ ಅಂಜಿತಾ ಎ.ವಿ, ಶಿವಮೊಗ್ಗದ ನೇಹಾಲಿ ಎ. ಸಿ. ಚಿತ್ರದುರ್ಗದ ಸುಪ್ರಿತಾ ಕೆ. ಎನ್. ಕೊಡಗಿನ ಶ್ರೀಷಾ ಎ. ಎಸ್. ತುಮಕೂರಿನ ಪ್ರಕೃತಿ ಪ್ರಿಯಾ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡರು.