ಪ್ರಜ್ಞಾ ಫೌಂಡೇಷನ್ ಶಾಲಾ  ಬ್ಯಾಗ್ ವಿತರಣೆ 

0
33

ಕಲಬುರಗಿ: ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ನಿಜವಾದ  ಶಿಕ್ಷಣ, ನಾವೆಲ್ಲರೂ ಗ್ರಾಮಸ್ಥರು ಒಂದಾಗಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರಜ್ಞಾ ಫೌಂಡೇಷನ್ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ಕೊಡುತ್ತಿರುವುದು ಅತ್ಯುತ್ತಮವಾದ ಕೆಲಸ ಎಂದು ಶಿವಾನಂದ ಪಾಟೀಲ ಅಭಿಪ್ರಾಯ ಪಟ್ಟರು.

ನಾವೆಲ್ಲರೂ ಚಿಕ್ಕಂದಿನಲ್ಲಿ ಬ್ಯಾಗ್ ಗಳು ಇರಲಿಲ್ಲ, ಚೀಲದಲ್ಲಿ ಪುಸ್ತಕ ಹಾಕಿಕೊಂಡು ಶಾಲೆ  ಕಲಿತಿದ್ದೇವೆ, ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು, ಬುದ್ಧಿವಂತರಾಗಬೇಕು, ನಮ್ಮೂರಿನ ಹೆಮ್ಮೆಯನ್ನು ಎತ್ತಿಹಿಡಿಯಬೇಕು. ಶಾಲೆ ಸರಿಯಾಗಿ ಕಲಿತಾಗ ಮಾತ್ರ ಉತ್ತಮವಾದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಶಾಲೆ ಕಲಿಯುವುದರಿಂದ ಮನುಷ್ಯನಲ್ಲಿ ಉತ್ತಮವಾದ ಗುಣಗಳು ಬೆಳೆಯುತ್ತವೆ. ಇಂದು ಮಿತಾಕ್ಷರ ಮಿತ್ರ ಬಳಗ ಹಾಗೂ ಪ್ರಜ್ಞಾ ಫೌಂಡೇಷನ್ ವತಿಯಿಂದ ಸರಕಾರಿ ಪ್ರೌಢಶಾಲೆಯ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ  ಮಾಡುವ ಮೂಲಕ ಶಾಲೆಯ ಶೈಕ್ಷಣಿಕ  ಅಭಿವೃದ್ಧಿಯಲ್ಲಿ ಕೈಜೋಡಿಸಿ ಕೆಲಸ ಮಾಡುತ್ತಿರುವುದು  ಅತ್ಯಂತ ಉತ್ತಮವಾದ ಕೆಲಸ ಎಂದು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣ ತಜ್ಞ ಕೆ.ಎಂ.ವಿಶ್ವನಾಥ ಮರತೂರ  ಪ್ರತಜ್ಞಾ ಫೌಂಡೇಷನ ಹಾಗೂ ಮರತೂರ ಗ್ರಾಮಸ್ಥರ ಪರವಾಗಿ ಶಾಲೆಯಲ್ಲಿ  ಈಗಾಗಲೇ ಅನೇಕ  ಉತ್ತಮವಾದ ಶೈಕ್ಷಣಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಹತ್ತನೇಯ ತರಗತಿ ಫಲಿತಾಂಶ ಸುಧಾರಣೆಗೆ ಕಾರ್ಯಾಗಾರ, ಅಭ್ಯಾಸ ಪುಸ್ತಕ ವಿತರಣೆ, ಕಲಿಕೆಯಲ್ಲಿ ಹಿಂದೂಳಿದ ಮಕ್ಕಳಿಗೆ ಕಲಿಕೆ, ಶಿಕ್ಷಕರಿಗೆ ಸನ್ಮಾನ,  ಶಾಲಾ ಆವರಣದಲ್ಲಿ ಗಿಡಗಳು ಹೀಗೆ ಅನೇಕ ವಿವಿಧ ಕೆಲಸಗಳು ಮಾಡಲಾಗುತ್ತಿದೆ. ಇಂದು ಶಾಲಾ  ಮಕ್ಕಳಿಗೆ ಬ್ಯಾಗ್ ವಿತರಣೆ  ಮಾಡುತ್ತಿದ್ದೇವೆ ಕಾರಣವೆನೆಂದರೆ ನಾವು ಚಿಕ್ಕವರಿರುವಾಗ ಶಾಲಾ ಬ್ಯಾಗ್ ಖರೀದಿಸಲು ನಮ್ಮ ತಂದೆ ಅಣ್ಣ ಎಲ್ಲರೂ ಬಹಳ ಕಷ್ಟಪಟ್ಟು ಕೂಲಿ ಕೆಲಸ ಮಾಡಿ ಬ್ಯಾಗ್ ಕೊಡಿಸುತ್ತಿದ್ದರು.

ನನ್ನ ಅನೇಕ ಸ್ನೇಹಿತರು ಈ  ಶೈಕ್ಷಣಿಕ ಸಾಮಾಗ್ರಗಳು ಇಲ್ಲದ ಸಲುವಾಗಿ  ಶಾಲೆಬಿಟ್ಟಿರುವ ಉದಾಹರಣೆಗಳಿವೆ, ಇವತ್ತಿನ ನಮ್ಮೂರಿನ ಶಾಲೆಯ ಮಕ್ಕಳು ಈ ಶೈಕ್ಷಣಿಕ ಸಾಮಾಗ್ರಿಗಳಿಗಾಗಿ ಶಾಲೆಯನ್ನು ಬಿಡಬಾರದು, ಅವರಿಗೆ ಅನುಕೂಲವಾಗಲಿ ಎಂದು ಈ ಕೆಲಸವನ್ನು ಮಾಡಲಾಗುತ್ತಿದೆ. ಇವತ್ತು ಶಾಲೆಯಲ್ಲಿ ಸ್ಪೂರ್ತಿಯ ಗೋಡೆ  ನಿರ್ಮಾಣ ಕೂಡ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶೈಕ್ಷಣಿಕ ಅಭಿವೃದ್ಧಿ  ಕೆಲಸಗಳನ್ನು ಮಾಡುವ ಗುರಿಯಿಟ್ಟುಕೊಂಡಿದ್ದು ಸಂಸ್ಥೆಯ ಮೂಲಕ ಸಮಗ್ರ ಅಭಿವೃದ್ಧಿಯನ್ನು ಶಾಲೆಗಾಗಿ ಸಮುದಾಯದ ಸಹಕಾರ ಪಡೆದು ಕೆಲಸ ಮಾಡಲಾಗುತ್ತದೆ ಎಂದರು.

ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾರ್ಯಕ್ರಮದ ದಾನಿಗಳಾದ ಅಜಿತಕುಮಾರ ಪೋಲಿಸ್ ಪಾಟೀಲ್ ಮಾತನಾಡಿ ನಾವೆಲ್ಲರೂ ಜೀವನದಲ್ಲಿ ಉತ್ತಮವಾದ ಗುರಿಗಳನ್ನು ಇಟ್ಟುಕೊಳ್ಳಬೇಕು. ಜೀವನದಲ್ಲಿ ಸಾಧನೆ ಮಾಡಲು ಶ್ರದ್ಧೆಯಿಂದ ಓದಬೇಕು, ಉತ್ತಮವಾದ ಗುಣಗಳನ್ನು ಬೆಳೆಸಿಕೊಳ್ಳಬೇಕು, ಗುರುಗಳಿಗೆ ಗೌರವದಿಂದ ಕಾಣಬೇಕು. ಶಾಲೆ ಕಲಿಯುವ ಸಂದರ್ಭದಲ್ಲಿ ಶಾಲೆಯ ಬ್ಯಾಗ್, ಪೆನ್ನು, ನೋಟಬುಕ್ ಇತ್ಯಾದಿಗಳು ಅತ್ಯಂತ ಅವಶ್ಯಕವಾಗಿವೆ ಈ ಸಾಮಾಗ್ರಿಗಳು ಇಲ್ಲದಿರುವ ಮಕ್ಕಳಿಗೆ ಇವತ್ತು ಶಾಲೆಯಲ್ಲಿ ಹುಡುಗಿಯರಿಗೆ ಶಾಲಾ ಬ್ಯಾಗ್ ವಿತರಣೆ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಷಯ  ಎಂದು ನುಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ ಮಾತನಾಡಿ ಸಮುದಾಯ ಮತ್ತು ಶಾಲೆ  ಎರಡು ಒಂದೆ ಬಂಡಿಯ ಎರಡು ಚಕ್ರಗಳು ಅತ್ಯಂತ ಸಮನ್ವಯತೆಯಿಂದ ನಡೆದರೆ ಗುಣಾತ್ಮಕ ಶಿಕ್ಷಣ ದೊರೆಯುತ್ತದೆ. ಮರತೂರನ ಗ್ರಾಮಸ್ಥರೆಲ್ಲರೂ ಒಳ್ಳೆಯ ಮನಸ್ಸು ಮಾಡಿ ಧನ ಸಹಾಯ ನೀಡುವ ಮೂಲಕ ಶಾಲೆಯ ಸಮಗ್ರ ಅಭಿವೃದ್ಧಿಗೆ ನಿಂತಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ವಿಶ್ವನಾಥ ಮತ್ತವರ ಗೆಳೆಯರ ಬಳಗ ಶಾಲೆಯ ಅಭಿವೃದ್ಧಿಗಾಗಿ, ಶೈಕ್ಷಣಿಕ ಕೆಲಸಗಳನ್ನು ಮಾಡುತ್ತಿರುವುದು ಅತ್ಯಂತ ಪ್ರಶಂಸನೀಯ ಪ್ರಜ್ಞಾ ಫೌಂಡೇಷನ್ ಮೂಲಕ ಸಾಕಷ್ಟು ಉತ್ತಮವಾದ ಕೆಲಸಗಳು ನಮ್ಮ ಶಾಲೆಗಳ ಅಭಿವೃದ್ಧಿಗಾಗಿ ಆಯೋಜಿಸಿ ಅನುಷ್ಠಾನಗೊಳಿಸುತ್ತಿರುವುದು ಗಮನಿಸಲಾಗಿದ್ದು ಉತ್ತಮವಾದ ಕೆಲಸಕ್ಕೆ ಇಲಾಖೆಯ ಸಂಪೂರ್ಣ ಬೆಂಬಲವಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ಶಿಕ್ಷಕ ಮಾಣಿಕರಾವ್ ಸಕ್ಪಾಲ್  ಮಾತನಾಡಿ ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಕೊಡುಗೆ ನೀಡುವುದು ಉತ್ತಮ ಕಲಸ, ಶಾಲಾ ಬ್ಯಾಗ್ ಮಕ್ಕಳಿಗೆ ಅತ್ಯಂತ ಅವಶ್ಯಕ ಸಾಮಾಗ್ರಿ ಅದನ್ನು ಪುರೈಸಿದ ಪ್ರಜ್ಞಾ ಫೌಂಡೇಷನ್ ಹಾಗೂ ಮರತೂರಿನ ಗ್ರಾಮಸ್ಥರು ಉತ್ತಮ ಕೆಲಸ ಮಾಡಿದ್ದಾರೆ. ಶಿಕ್ಷಣ ನಮ್ಮ ಬದುಕನ್ನು ಉತ್ತಮಗೊಳಿಸುತ್ತದೆ. ಶೈಕ್ಷಣಿಕ ಸಾಮಾಗ್ರಿಗಳು ಇಲ್ಲದಿರುವ ಅನೇಕ ಮಕ್ಕಳು ಶಾಲೆಯಿಂದ  ವಂಚಿತರಾಗುವ ಅನೇಕ ಸಾಧ್ಯತೆಗಳು ಇವೆ ಹೀಗಾಗಿ ಶಾಲೆಯಲ್ಲಿ ಶಾಲೆ ಬಿಡುವ ಕಲಿಕೆಯಲ್ಲಿ ನಿರಾಸಕ್ತಿ ತೋರುವ ಮಕ್ಕಳಿಗಾಗಿ ಶಾಲಾ ಬ್ಯಾಗ್ ವರದಾನವಾಗಿ  ಅವರ ಶೈಕ್ಷಣಿಕ ಬದುಕಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.

“ಕಾರ್ಯಕ್ರಮದಲ್ಲಿ ವಿಶೇಷವಾಗಿ ಶಿಕ್ಷಕರಾದ ರಾಜಶೇಖರ ಪಾಟೀಲ್  ಹಾಗೂ ಸುಮಂಗಲಾ ಅವರು ಸರಕಾರಿ  ಪ್ರೌಢಶಾಲೆಯಲ್ಲಿ ತಮ್ಮ 25 ವರ್ಷದ ಸೇವೆ ಪುರೈಸಿದ್ದಕ್ಕೆ ಹಳೆಯ ವಿದ್ಯಾರ್ಥಿ ಬಳಗದಿಂದ ಕಾಣಿಕೆ ನೀಡಿ ಗೌರವ ಸನ್ಮಾನ ಮಾಡಲಾಯಿತು.”

ಕಾರ್ಯಕ್ರಮದಲ್ಲಿ ಗ್ರಾಮದ ಯುವಕರು ಹಾಗೂ ದಾನಿಗಳಾದ ಸಿದ್ದಪ್ಪ ಪೋಲಿಸ್, ಅಣವೀರ ಪತ್ತಾರ್, ಅನಿಲ ಸಿಂಪಿ, ಡಾ. ರವಿ ನರೋಣಿ,  ಕಾಶೀನಾಥ, ಮಲ್ಲು ದಾಶೆಟ್ಟಿ, ವಿಜಯಕುಮಾರ ಕುಂಬಾರ್, ಗಂಗಾಧರ್, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮದ  ಮುಖಂಡರು, ಸಿ.ಆರ್.ಪಿ. ಇ.ಸಿ.ಒ , ಬಿ.ಇ.ಓ ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕರು ಹಾಜರಿದ್ದರು.

“ಸಮುದಾಯ ಮತ್ತು ಸಂಸ್ಥೆಯ ಮೂಲಕ ಶಾಲೆಯ  ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಕೆಲಸ ಮಾಡಲಾಗುತ್ತಿದೆ. ಇಲಾಖೆಯ  ಸಹಯೋಗದೊಂದಿಗೆ, ಶಾಲೆಯ ಅಂದ ಚಂದ ಶೈಕ್ಷಣಿಕ ಕೆಲಸಗಳು ಗುಣಮಟ್ಟದ ಶಿಕ್ಷಣ ದೊರೆಯಲು ಮುಂದಿನ ದಿನಗಳಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡುತ್ತೇವೆ. ಸಮುದಾಯದ ಸಹಕಾರ ಬಹಳ  ಪ್ರಮುಖವಾಗಿ ಬೇಕಾಗಿದೆ.”– ಕಾಶೀನಾಥ ಎಚ್. ಮರತೂರ. ಅಧ್ಯಕ್ಷರು ಪ್ರಜ್ಞಾ ಫೌಂಡೇಷನ ಹಾಗೂ ಗ್ರಾಮದ ಯುವಕರು.

“ನಮ್ಮ ಶಾಲೆಯಲ್ಲಿ  ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಂದ ನಿರಂತರ ಸಹಕಾರ ದೊರೆಯುತ್ತಿದ್ದು ನಮಗೆ ಶೈಕ್ಷಣಿಕವಾಗಿ ಸಹಕಾರವಾಗಿದೆ. ಶೈಕ್ಷಣಿಕ ಶಾಲಾ ಬ್ಯಾಗ್ ವಿತರಿಸುವ ಮೂಲಕ  ಹೊಸ ಹುರುಪು ಮಕ್ಕಳಿಲ್ಲಿ ಮೂಡಿದೆ ನಾವು ಸಮುದಾಯಕ್ಕೆ ಸಂಪೂರ್ಣವಾದ ಬೆಂಬಲ ಕೊಡುತ್ತೇವೆ.” -ಶ್ರೀ ಮನೋಹರ್ ಮುಖ್ಯ ಗುರುಗಳು.   

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here