ನಾಳೆಯಿಂದ ಕಲಬುರಗಿ ಮಹಾನಗರಕ್ಕೆ ಸುಸಜ್ಜಿತ ಬಸ್‌ ನಿಲ್ದಾಣ; ಶಾಸಕ ಅಲ್ಲಂಪ್ರಭು ಪಾಟೀಲ್‌

0
15

ಕಲಬುರಗಿ: ಸೂಪರ್ ಮಾರ್ಕೆಟ್ ನಲ್ಲಿ ನಿರ್ಮಾಣವಾಗಿರುವ ಹಾಗೂ ಜ. 25 ರಂದು ಸಾರಗೆ ಸಚಿವ ರಾಮಲಿಂಗಾರೆಡ್ಡಿಯವರು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಸಿಂಗ್‌, ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್‌ ಅವರಿಂದ ಉದ್ಘಾಟನೆಗೊಳ್ಳುತ್ತಿರುವ ಸಿಟಿ ಬಸ್ ನಿಲ್ದಾಣ ಕಲಬುರಗಿ ಬಸ್‌ ಪ್ರಯಾಣಿಕರ ಪಾಲಿಗೆ ವರದಾನವಾಗಿದೆ ಎಂದು ಕಲಬುರಗಿ ನಗರ ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಂಪ್ರಭು ಪಾಟೀಲ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಹೇಳಿಕೆ ನೀಡಿರುವ ಅವರು ಒಂದು ಸುಂದರ, ಮನಮೋಹಕ ಕಟ್ಟಡ ನಗರದ ಹೃದಯ ಭಾಗದಲ್ಲಿ ನಿರ್ಮಾಣಗೊಂಡಿರುವುದು ಸಂತಸ ತಂದಿದೆ. ಸಿಟಿ ಬಸ್ ನಿಲ್ದಾಣಕ್ಕೆ ಹಲವಾರು ವರ್ಷಗಳ ಕಾಲ ಹಳೆ ಕಟ್ಟಡದಲ್ಲಿಯೆ ನಿಲ್ದಾಣವಿತ್ತು. ಜಾಗ ಬಹಳವಿದ್ದರೂ ರಸ್ತೆ ಮೇಲೆ ನಿಲ್ದಾಣವಿದೆ ಎಂದೆ ಭಾಸವಾಗುತ್ತಿತ್ತು. ಕೊನೆಗೂ ಇದಕ್ಕೊಂದು ಸುಂದರ ಬೃಹತ ಕಟ್ಟಡ ಕಟ್ಟುವ ಮೂಲಕ ನಗರಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗರಿ ಮೂಡಿಸಿದೆ ಎಂದು ಶಾಸಕರು ಹೇಳಿದ್ದಾರೆ.

Contact Your\'s Advertisement; 9902492681

ಈ ಸುಂದರ ಕಟ್ಟಡ ಸಿಟಿ ಬಸ್ ಮೂಲಕ ಪ್ರಯಾಣಿಸುವ ಪ್ರಯಾಣಿಕರ ಮನಸ್ಸಿಗೆ ಮೂದ ನೀಡುತ್ತಿದೆ ಈ ನೂತನ ಬಸ್ ನಿಲ್ದಾಣದ ಕಟ್ಟಡ.ಕಲಬುರಗಿ ನಗರದ ಸೂಪರ್ ಮಾರ್ಕೆಟ್ ನಲ್ಲಿ ಇರುವ 1.36 ಎಕರೆ ಪ್ರದೇಶದಲ್ಲಿ ನಗರ ಸಾರಿಗೆ ನಿಲ್ದಾಣವನ್ನು ಪ್ರಯಾಣಿಕರ ಸೌಲಭ್ಯ ಸಂಕಿರ್ಣದೊಂದಿಗೆ ನಿರ್ಮಾಣಗೊಂಡಿರೋದು ಕಾಂಗ್ರೆಸ್‌ ಸರ್ಕಾರದ ಜನಸ್ನೇಹಿ ಧೋರಣೆಗೆ ಕನ್ನಡಿ ಎಂದಿದ್ದಾರೆ.

ಒಟ್ಟು 4455 ಚದುರ ಮೀಟರ್ ವಿಸ್ತರಣೆಯಲ್ಲಿ 2019 ಆ.1 ರಂದು ಕಟ್ಟಡದ ಕಾಮಗಾರಿ ಆರಂಭಿಸಲಾಗಿದೆ. ಒಟ್ಟು 2000 ಲಕ್ಷ ರೂ.( 20 ಕೋಟಿ ರೂ.)ವೆಚ್ಚದಲ್ಲಿ ಅತ್ಯಾಧುನಿಕವಾದ ಭವ್ಯ ಕಟ್ಟಡ ಇಲ್ಲಿ ತಲೆ ಎತ್ತಿದೆ.‌

18. 80 ಕೋಟಿ ರು ವೆಚ್ಚದ ಈ ಯೋಜನೆ ಇದೀಗ ಜನರಿಗೆ ಅಪ್ರಿತವಾಗುತ್ತಿರೋದು ಖುಷಿಯ ವಿಚಾರ. ಕೆಕೆಆರ್‌ಡಿಬಿ, ಬಂಡವಾಳ ವೆಚ್ಚ ಹಾಗೂ ವಿಶೇಷ ಅಭಿವೃದ್ಧಿ ಯೋಜನೆಯಜಡಿ ಹಣ ಹೊಂದಿಕೆಯಾಗಿದೆ. ಈ ನೂತನ ನಿಲ್ದಾಣದಲ್ಲಿ ಏಕ ಕಾಲಕ್ಕೆ 12 ಬಸ್ ಗಳ ನಿಲುಗಡೆಗೆ ಅವಕಾಶ( ನೆಲ ಅಂತಸ್ತು), ಪ್ರಯಾಣಿಕರ ಪ್ರಾಂಗಣ( ಆಸನಗಳ ವ್ಯವಸ್ಥೆ), ಸಂಚಾರ ನಿಯಂತ್ರಕರ ಕೊಠಡಿ, ಉಪಹಾರ ಗೃಹ, ಮುಂಗಡ ಟಿಕೆಟ್ ಕಾಯ್ದಿರಿಸುವ ಕೊಠಡಿ, ವಾಣಿಜ್ಯ ಮಳಿಗೆಗಳು, ಮಹಿಳಾ ನಿರೀಕ್ಷಣಾಲಯ, ಪಾಸುಗಳನ್ನು ವಿತರಿಸುವ ಕೊಠಡಿ, ಪ್ರಯಾಣಿಕರ ರಾಂಪ್, ಮಟ್ಟಿಲು( ಸ್ಟೇರ್ ಕೇಸ್), ಶುದ್ದಿಕರಣ ನೀರಿನ ಘಟಕ( ಆರ್ ಓ), ಪುರುಷರ ಮತ್ತು ಮಹಿಳೆಯರ ಶೌಚಾಲಯ( 3 ಸಂಖ್ಯೆ), ಬೆಳಕಿನ ವ್ಯವಸ್ಥೆ, ವಿಕಲಚೇತನರಿಗಾಗಿ ಸೌಲಭ್ಯಗಳು, ಉದ್ಯಾನವನ ಅಳವಡಿಸಲಾಗಿದೆ ಮತ್ತು ಬಸ್ ನಿಲುಗಡೆ ಆವರಣದಲ್ಲಿ ಸೌಂದರ್ಯಭಿವೃದ್ಧಿ ಕಲಾಕೃತಿಗಳು ಗಮನ ಸೆಳೆಯತ್ತಿವೆ.

ಬುರವ ದಿನಗಳಲ್ಲಿ ಈ ಬಸ್ನಿಲ್ದಾಣ ಕಲಬುರಗಿ ಭಾಗದಲ್ಲಿ ಸಿಟಿ ಬಸ್‌ ಪ್ರಯಾಣಿಕರ ಪಾಲಿಗೆ ವರದಾನವಾಗಿ ಹೊರಹೊಮ್ಮಲಿದೆ ಎಂದು ಶಾಸಕ ಅಲ್ಲಂಪ್ರಭು ಪಾಟೀಲರು ಹೇಳಿದ್ದಾರೆ. ನಗರದಲ್ಲಿ ಹೆಚ್ಚಿನ ಸಿಟಿ ಬಸ್‌ಗಳ ಓಡಾಡಯ ಶುರುವಾಗಬೇಕು. ಅದರಿಂದ ಸಂಚಾರ ಸಮಸಯೆಗಳಿಗೆ ಪರಿಹಾರ ದೊರಕಲಿದೆ. ಜನರೂ ಕೂಡಾ ಸಮೂಹ ಸಾರಿಗೆಯನ್ನು ಹೆಚ್ಚು ಬಳಸಬೇಕು ಎಂದು ಅಲ್ಲಂಪ್ರಭು ಪಾಟೀಲರು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here