ಮಾನವೀಯತೆಯೊಂದಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ಮಣೂರ್ ಆಸ್ಪತ್ರೆಯ ಸೇವೆ ಅನನ್ಯ: ಸಚಿವ ಪ್ರಿಯಾಂಕ್ ಖರ್ಗೆ

0
59

ಕಲಬುರಗಿ: ಗುಣಮಟ್ಟದ ಚಿಕಿತ್ಸೆಯನ್ನು ಮಾನವೀಯತೆಯ ಸ್ಪರ್ಷದ ಮೂಲಕ ನೀಡುತ್ತಾ ರೋಗಿಗಳ ಸೇವೆ ಮಾಡುತ್ತಿರುವ ಮಣೂರ್ ಆಸ್ಪತ್ರೆಯ ಸೇವೆ ಅನನ್ಯವಾದುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ರಿಂಗ್ ರಸ್ತೆಯಲ್ಲಿರುವ ಮಣೂರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಾಲ್ಕನೆಯ ವರ್ಷದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಬಸವಣ್ಣನವರ ತತ್ವ ಅಳವಡಿಸಿಕೊಂಡು ವೈದ್ಯರಾಗಿ ರೋಗಿಗಳ ಸೇವೆ ಮಾಡುತ್ತಿರುವ ಡಾ ಫಾರೂಕ್ ಮಣೂರ್ ಅವರು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಅಭ್ಯರ್ಥಿಗಳಿಗೆ ಪುಸ್ತಕ ಒದಗಿಸುವ ಮೂಲಕ ಮೇಲ್ಪಂಕ್ತಿಯನ್ನು ಹಾಕಿದ್ದಾರೆ, ಜೊತೆಗೆ ಸ್ಪರ್ಧಾಳುವಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡಿರಿವ ಶ್ಲಾಘನೀಯ ಎಂದು ಕೊಂಡಾಡಿದರು.

ಕಲಬುರಗಿ ನಗರದಲ್ಲಿ ಮಹಿಳೆರಿಗಾಗಿ ಒಳಾಂಗಣ ಕ್ರೀಡಾಂಗಣ ಹಾಗೂ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಇದರಿಂದ ಈ ಭಾಗದ ಯುವಕ ಯುವತಿಯರಿಗೆ ಶೈಕ್ಷಣಿಕ ವಾಗಿ ಹಾಗೂ ಕ್ರೀಡಾತ್ಮಕವಾಗಿ ಅನುಕೂಲವಾಗಲಿದೆ ಎಂದರು.

ಇದಕ್ಕೂ ಮುನ್ನ ಆಸ್ಪತ್ರೆಯ ಮ್ಯಾನೆಜಿಂಗ್ ಡೈರೆಕ್ಟರ್ ಡಾ ಫಾರೂಕ್ ಮಣೂರು ಮಾತನಾಡಿ ಮಣೂರು ಆಸ್ಪತ್ರೆ ಈಗ ನಾಲ್ಕನೆಯ ವರ್ಷಕ್ಕೆ ಕಾಲಿಡುತ್ತಿದೆ. ಬಡವರ ಹಾಗೂ ಮಧ್ಯಮ ವರ್ಗದವರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಸ್ಥಾಪಿಸಲಾದ ಈ ಆಸ್ಪತ್ರೆಯ ಯಶಸ್ಸಿನ ಹಿಂದೆ ನಮ್ಮ ಸಿಬ್ಬಂದಿ ವರ್ಗದ ಹಾಗೂ ವೈದ್ಯರ ಪರಿಶ್ರಮವಿದೆ ಎಂದರು.

ಸಚಿವರಿಂದ ಪ್ರೇರಣೆ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಕನಿಷ್ಠ 50 ಅಭ್ಯರ್ಥಿಗಳಿಗೆ ಪುಸ್ತಕ ಒದಗಿಸಿದ್ದೇವೆ.‌‌ಇದರ ಜೊತೆಗೆ ಮಣೂರು ಆಸ್ಪತ್ರೆ ಸಾಮಾಜಿಕ‌ ಕಾರ್ಯದಲ್ಲಿ ತೊಡಗಿದ್ದು ಇದೂವರೆಗೆ 33 ಟಿಬಿ ಯಿಂದ ಬಳಲುತ್ತಿರುವರಿಗೆ ದತ್ತು ತೆಗೆದುಕೊಂಡು ಉಚಿತ ಚಿಕಿತ್ಸೆ ನೀಡಲಾಗಿದೆ. ಇನ್ನೂ ಸಮಾಜ ಸೇವೆ ಮಾಡಲು ಆಸ್ಪತ್ರೆ ಸದಾ ಸಿದ್ದವಾಗಿದೆ ಎಂದು ಅವರು ಹೇಳಿದರು.

ಸುಭಾಷ್ ರಾಠೋಡ ಮಾತನಾಡಿ ಆರೋಗ್ಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ದಿಯಾದರೆ ಸಮಗ್ರ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಸಮಾಜ ಸೇವೆಯ ಉದ್ದೇಶ ಹೊಂದಿರುವ ಡಾ ಫಾರೂಕ್ ಮಣೂರು ಅವರು ಚಿಂಚೋಳಿ ಕ್ಷೇತ್ರದಲ್ಲಿ ಪ್ರತಿವಾರ ಉಚಿತ ಆರೋಗ್ಯ ಶಿಬಿರ ನಡೆಸುತ್ತಿದ್ದಾರೆ. ಇದು ನಮ್ಮ ಭಾಗದ ಬಡ ಜನರಿಗೆ ಅನುಕೂಲವಾಗಿದೆ ಎಂದರು.

ಇದೇ ಸಂದರ್ಭದ 16 ವರ್ಷ ಒಳಗಿನ ಟೆನ್ನಿಸ್ ನಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದ ರಘು ಎನ್ನುವ ಸ್ಪರ್ಧಾಳುವಿಗೆ ರೂ 1.20 ಲಕ್ಷ ಮೊತ್ತದ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.

ಮಣೂರ್ ಆಸ್ಪತ್ರೆಯ ಕುರಿತಂತೆ ದಿ ವೆಲ್ ನೆಸ್ ರೆವೋಲುಷನ್ ‘ ಎನ್ನುವ ಮ್ಯಾಗ್ ಜಿನ್ ನ್ನು ಸಚಿವರು ಬಿಡುಗಡೆ ಮಾಡಿದರು.

ವೇದಿಕೆಯ ಮೇಲೆ ಶಾಸಕರಾದ ಕನೀಜ್ ಫಾತೀಮಾ, ಸುಭಾಷ್ ರಾಠೋಡ, ಅರವಿಂದ ಚೌವಾಣ್, ಕಿರಣ್ ದೇಶಮುಖ್, ಮುಬೀನ್, ಮಜರ್ ಹುಸೇನ್, ಅಜ್ಮಲ್ ಗೋಲಾ, ಫರಾಜುಲ್ ಇಸ್ಲಾಮ್, ಶಂಶೀರ್ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here